ದಾವಣಗೆರೆಯಲ್ಲಿ ಹೆಚ್ಚಿದ ಜಿಮ್‌ಜಿಹಾದ್

 ದಾವಣಗೆರೆಯ ಸರಸ್ವತಿ ನಗರದ ಪವರ್ ಫಿಟ್ನೆಸ್ ಜಿಮ್‌ನಲ್ಲಿ ಜಿಮ್ ಜಿಹಾದ್ ನಡೆಯುತ್ತಿದೆ ಎಂದು ಆರೋಪಿಸಿ ಶ್ರೀರಾಮ ಸೇನೆ ಹಾಗೂ ಹಿಂದೂ ಜಾಗರಣ ವೇದಿಕೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಕೆ. ಮಣಿಸರ್ಕಾರ್, ಸತೀಶ ಪೂಜಾರಿ, ಎನ್. ರಾಜಶೇಖರ್, ಎಸ್.ಟಿ. ವೀರೇಶ್ ಇನ್ನಿತರರು ಇದ್ದರು.
ದಾವಣಗೆರೆಯ ಸರಸ್ವತಿ ನಗರದ ಪವರ್ ಫಿಟ್ನೆಸ್ ಜಿಮ್‌ನಲ್ಲಿ ಜಿಮ್ ಜಿಹಾದ್ ನಡೆಯುತ್ತಿದೆ ಎಂದು ಆರೋಪಿಸಿ ಶ್ರೀರಾಮ ಸೇನೆ ಹಾಗೂ ಹಿಂದೂ ಜಾಗರಣ ವೇದಿಕೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಕೆ. ಮಣಿಸರ್ಕಾರ್, ಸತೀಶ ಪೂಜಾರಿ, ಎನ್. ರಾಜಶೇಖರ್, ಎಸ್.ಟಿ. ವೀರೇಶ್ ಇನ್ನಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮವಹಿಸಲಿ
  • ಜಿಮ್ ಮಾಲೀಕರ ಸಭೆಗೆ ಶ್ರೀರಾಮಸೇನೆ ಪಟ್ಟು
  • ಮಹಿಳಾ ತರಬೇತುದಾರರನ್ನು ನೇಮಿಸಲು ಆಗ್ರಹ
ದಾವಣಗೆರೆ: ತರಬೇತಿಗೆಂದು ಜಿಮ್‌ಗೆ ಬರುವ ಹಿಂದೂ ಹೆಣ್ಣುಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ಚಿತ್ರೀಕರಿಸಿ, ಹಣಕ್ಕಾಗಿ ಬ್ಲಾೃಕ್‌ಮೇಲ್ ಮಾಡುವ ಜಿಮ್‌ಜಿಹಾದ್ ಪ್ರಕರಣಗಳು ದಾವಣಗೆರೆ ನಗರದಲ್ಲೂ ಹೆಚ್ಚಿವೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ತತ್‌ಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಕೆ. ಮಣಿಸರ್ಕಾರ್ ಆಗ್ರಹಿಸಿದರು.
ನಿಟ್ಟುವಳ್ಳಿಯ ಪವರ್ ಫಿಟ್ನೆಸ್ ಜಿಮ್‌ನ ಮಾಲೀಕ ಇಸ್ಮಾಯಿಲ್ ಎಂಬಾತ ಹಿಂದೂಗಳ ಹೆಸರಲ್ಲಿ ಪರಿಚಯಿಸಿಕೊಂಡು ಹೆಣ್ಣುಮಕ್ಕಳನ್ನು ಪ್ರೀತಿಯ ಸಾಲದಲ್ಲಿ ಬೀಳಿಸಿ ಅವರ ಅಶ್ಲೀಲ ಫೋಟೋ, ವಿಡಿಯೋಗಳನ್ನು ಚಿತ್ರೀಕರಿಸಿ, 5 ಲಕ್ಷ ರೂ. ಬೇಡಿಕೆ ಇಟ್ಟು ಬೆದರಿಸುವ ಪ್ರಕರಣ ಬಯಲಾಗಿದೆ. ಶ್ರೀರಾಮಸೇನೆ ಸಂಘಟನೆಯಿಂದ ಈ ಜಿಮ್‌ಗೆ ಬೀಗ ಜಡಿಯಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರ್ಥಿಕ ಸ್ಥಿತಿವಂತರು, ಅಧಿಕಾರಿಗಳು ಹಾಗೂ ಪ್ರಾಧ್ಯಾಪಕರ ಕುಟುಂಬಗಳನ್ನೇ ಗುರಿ ಮಾಡಲಾಗಿದೆ. ಸುಮಾರು 12 ಹೆಣ್ಣುಮಕ್ಕಳ ವಿಡಿಯೋ ಮಾಡಲಾಗಿದೆ. ಆತನ ತಮ್ಮನ ಬಳಿ 72 ಅಶ್ಲೀಲ ವಿಡಿಯೋಗಳಿರುವ ಮಾಹಿತಿ ಇದೆ. ಅವರ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜಿಮ್‌ಗಳಲ್ಲಿ ಹೆಣ್ಣುಮಕ್ಕಳ ತರಬೇತಿಗೆ ಪುರುಷರ ಬದಲಿಗೆ ಮಹಿಳಾ ತರಬೇತುದಾರರನ್ನು ನೇಮಿಸಿಕೊಳ್ಳಬೇಕು. ಅವರು ಕಡ್ಡಾಯವಾಗಿ ಅನುಮತಿ ಪತ್ರ ಹೊಂದಿರಬೇಕು. ಕೂಡಲೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ವತಿಯಿಂದ ಹಿಂದೂ ಸಂಘಟನೆಗಳ ಸಮ್ಮುಖದಲ್ಲೇ ಜಿಲ್ಲೆಯ ಎಲ್ಲ ಜಿಮ್ ಮಾಲೀಕರ ಸಭೆ ನಡೆಸಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಶ್ರೀರಾಮಸೇನೆ ಸಂಘಟನೆಗೆ ಕಳೆದೊಂದು ವರ್ಷದಲ್ಲಿ 600 ದೂರುಗಳು ಬಂದಿದ್ದು 1200 ಹಿಂದೂ ಯುವತಿಯರನ್ನು ವಾಪಾಸ್ ಮನೆಗೆ ಕಳುಹಿಸುವ ಕೆಲಸ ಮಾಡಿದೆ. ರಾಜ್ಯವ್ಯಾಪಿ ಇಂತಹ ಪ್ರಕರಣಗಳು ವರದಿಯಾಗುತ್ತಿವೆ. ಜಿಮ್‌ಗಳಲ್ಲಿ ಮುಸ್ಲಿಂ ಮಹಿಳಾ ಟ್ರೈನರ್‌ಗಳನ್ನು ನಾವು ನಿರ್ಬಂಧಿಸಿದ್ದೇವೆ. ಜಿಮ್‌ಗಳನ್ನು ತಹಬಂದಿಗೆ ತರಬೇಕು. ಶ್ರೀರಾಮಸೇನೆ ಇನ್ನು ಪ್ರತಿಭಟನೆಗೆ ಸೀಮಿತವಾಗದೆ ತಕ್ಕಶಾಸ್ತಿಗೆ ಮುಂದಾಗಲಿದೆ ಎಂದೂ ಎಚ್ಚರಿಸಿದರು.
ಜಿಮ್ ಮಾಲೀಕ ಇಸ್ಮಾಯಿಲ್ ಕಾಶ್, ವಿಜಯ್, ಅನಿಲ್, ಪ್ರಶಾಂತ್, ನಿಖಿಲ್ ಇನ್ನಿತರೆ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಯಾಮಾರಿಸಿದ್ದಾನೆ. ಅನೇಕರು ಈತನ ಪ್ರೀತಿಜಾಲಕ್ಕೆ ಬಿದ್ದಿದ್ಧಾರೆ. ಈತನಿಗೆ ಪತ್ನಿ, ಮಕ್ಕಳಿರುವುದನ್ನು ತಿಳಿದು ಬೆಚ್ಚಿ ಬಿದ್ದಿದ್ದಾರೆ. ಇದುವರೆಗೆ ದೂರು ದಾಖಲಿಸಿಲ್ಲ. ಈ ಸಂಬಂಧ, ವಂಚನೆಗೊಳಗಾದ ಯುವತಿಯ ಮನವೊಲಿಕೆ ಮಾಡಲಾಗುತ್ತಿದೆ ಎಂದರು.
ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರಿ ಮಾತನಾಡಿ ಮಧ್ಯರಾತ್ರಿ 12 ಗಂಟೆಗೆ ಈ ಜಿಮ್‌ನಲ್ಲಿ ಅಕ್ರಮ ಚಟುವಟಿಕೆಗಳು ನಡೆದಿದ್ದು ಅಲ್ಲಿನ ಸಿಸಿ ಕ್ಯಾಮರಾದಲ್ಲೂ ದಾಖಲಾಗಿದೆ. ಹೆಣ್ಣುಮಕ್ಕಳು ಬಟ್ಟೆ ಬದಲಾಯಿಸುವ ಕೊಠಡಿಯಲ್ಲೂ ಪ್ರತ್ಯೇಕ ಕ್ಯಾಮರಾ ಇರಿಸಿದ್ದರ ಮಾಹಿತಿ ಇದ್ದು ಪರಿಶೀಲನೆ ನಡೆಸಬೇಕು. ಈ ಜಿಮ್ ಮಾಲೀಕನಿಂದಾಗಿ ನೊಂದ ಕುಟುಂಬಗಳು ಸಾಮಾಜಿಕವಾಗಿ ಸಮಸ್ಯೆ ಹೇಳಿಕೊಳ್ಳಲು ಆಗುತ್ತಿಲ್ಲ ಎಂದರು.
ಇಸ್ಮಾಯಿಲ್ ಗಾಂಜಾ ಮಾರುತ್ತಿದ್ದ ಆರೋಪವಿದೆ. ಈ ಹಿಂದಿನ ಎಸ್ಪಿ ಅವರು ದಾವಣಗೆರೆಯಲ್ಲಿ ಡ್ರಗ್ಸ್ ಪೆಡ್ಲರ್‌ಗಳನ್ನು ಗ್ರಾಹಕರು ಎಂಬುದಾಗಿ ಚಿತ್ರಿಸಿದರು. ದಾವಣಗೆರೆಯ ಅನೇಕ ಜಿಮ್‌ಗಳ ಬಗ್ಗೆ ದೂರು ಬರುತ್ತಿವೆ. ಈಗಲಾದರೂ ಪೊಲೀಸ್ ಇಲಾಖೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಆಯೋಗ, ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಬೇಕು. ಜಿಲ್ಲೆಯ ಮಹಿಳಾ ಸಂಸದರು ಕೂಡ ಈ ವಿಚಾರದಲ್ಲಿ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸಲು ಮುಂದಾಗಬೇಕು ಎಂದೂ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆ ಮುಖಂಡರಾದ ಆಲೂರು ರಾಜಶೇಖರ್, ಪಿ. ಸಾಗರ್, ಅನಿಲ್, ಶಿವು ಪೂಜಾರಿ, ಶ್ರೀಧರ್, ಚೇತನ್, ಮಧು, ಹಿಂಜಾವೇ ವೀರೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net