ವಿದೇಶಗಳಲ್ಲೂ ಗ್ಯಾರಂಟಿಗಳು ಸದ್ದು

ಹೊನ್ನಾಳಿ ತಾಲೂಕು ಕ್ರೀಡಾಂಗಣಕ್ಕೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಫಲಕವನ್ನು ಶಾಸಕ ಡಿ.ಜಿ. ಶಾಂತನಗೌಡ ಅನಾವರಣಗೊಳಿಸಿದರು. ಎಚ್.ಬಿ. ಮಂಜಪ್ಪ, ಎ.ಕೆ. ಮೈಲಪ್ಪ, ಸಾವಿತ್ರಮ್ಮ ವಿಜೇಂದ್ರಪ್ಪ, ರಂಜಿತಾ ಚನ್ನಪ್ಪ ಇತರರಿದ್ದರು.
ಹೊನ್ನಾಳಿ ತಾಲೂಕು ಕ್ರೀಡಾಂಗಣಕ್ಕೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಫಲಕವನ್ನು ಶಾಸಕ ಡಿ.ಜಿ. ಶಾಂತನಗೌಡ ಅನಾವರಣಗೊಳಿಸಿದರು. ಎಚ್.ಬಿ. ಮಂಜಪ್ಪ, ಎ.ಕೆ. ಮೈಲಪ್ಪ, ಸಾವಿತ್ರಮ್ಮ ವಿಜೇಂದ್ರಪ್ಪ, ರಂಜಿತಾ ಚನ್ನಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶಾಂತನಗೌಡ ಹೇಳಿಕೆ
  • ಕ್ರೀಡಾಂಗಣದ ನಾಮಫಲಕ ಅನಾವರಣ
  • ತಾಲೂಕು ಕ್ರೀಡಾಂಗಣಕ್ಕೆ ಸಿದ್ದರಾಮಯ್ಯ ಎಂದು ನಾಮಕರಣ
ಹೊನ್ನಾಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಾಡಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರು ಕೊಟ್ಟ ಗ್ಯಾರಂಟಿ ಯೋಜನೆಗಳು ಅಮೆರಿಕಾದಲ್ಲೂ ಸದ್ದು ಮಾಡುತ್ತಿವೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಶನಿವಾರ, ಪಟ್ಟಣದಲ್ಲಿರುವ ತಾಲೂಕು ಕ್ರೀಡಾಂಗಣಕ್ಕೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದು, ಅದರ ನಾಮಫಲಕ ಅನಾವರಣ ಮಾಡಿ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದ ಬಿಜೆಪಿ ಇದೀಗ ಅಧಿಕಾರದಲ್ಲಿರುವ ತಮ್ಮ ರಾಜ್ಯಗಳಲ್ಲಿ ಈ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ. ರಾಷ್ಟ್ರಮಟ್ಟದಲ್ಲೂ ಸಿಎಂ ಅವರ ಸಾಧನೆ ಕೇಳಿ ಬರುತ್ತಿವೆ. ಅವರು ಹಿಂದುಳಿದ ನಾಯಕ ಎಂದು ಇಡೀ ದೇಶವೇ ಒಪ್ಪಿಕೊಂಡಿದೆ ಎಂದರು.
ಇಂತಹ ನಾಯಕನ ಹೆಸರನ್ನು ಕ್ರೀಡಾಂಗಣಕ್ಕೆ ಇಡಬೇಕು ಎಂದು ಪುರಸಭೆ ಪಕ್ಷಾತೀತವಾಗಿ ತೀರ್ಮಾನಿಸಿದೆ. ಅದಕ್ಕೆ ಸಹಮತವಿದೆ. ಇದನ್ನು ಸಂಬಂಧಪಟ್ಟ ಇಲಾಖೆಗೆ ಕಳಿಸಿಕೊಟ್ಟಿದ್ದು, ಅದರಂತೆ ಅವರ ಹೆಸರಿಡಲಾಗಿದೆ ಎಂದರು.
ರಾಜ್ಯ ಬಯಲು ಸೀಮೆ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಕನಕದಾಸರ ಜಯಂತಿಯಂದೇ ಈ ಕ್ರೀಡಾಂಗಣಕ್ಕೆ ಸಿದ್ದರಾಮಯ್ಯ ಎಂದು ಹೆಸರಿಟ್ಟು ನಾಮಫಲಕ ಅನಾವರಣ ಮಾಡಿರುವುದು ಸ್ಮರಣೀಯ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ, ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಮಾಜಿ ಉಪಾಧ್ಯಕ್ಷ ರಂಜಿತಾ ಚನ್ನಪ್ಪ, ಸದಸ್ಯರಾದ ಧರ್ಮಪ್ಪ, ಹೊಸಕೇರಿ ಸುರೇಶ್, ಮುಖಂಡರಾದ ಎಚ್.ಬಿ. ಅಣ್ಣಪ್ಪ, ಆರ್. ನಾಗಪ್ಪ, ಎಚ್.ಎ.
ನರಸಿಂಹಪ್ಪ, ಮಾದಪ್ಪ, ಪರಸಣ್ಣಾರ ನರಸಿಂಹಪ್ಪ, ಗಾಳೇಶಪ್ಪ, ಸತೀಶ್, ಚಂದ್ರು, ವಡ್ಡಿ ಚನ್ನಪ್ಪ, ಕ್ರೀಡಾಧಿಕಾರಿ ಕಾಳಿಂಗಪ್ಪ, ಇಂಜಿನಿಯರ್ ದೇವರಾಜ್, ಡಾ. ವಿಶ್ವನಟೇಶ್ ಇತರರು ಇದ್ದರು.

ಬಾಲರಾಜ್ ಘಾಟ್‌ಗೆ ತಡೆಗೋಡೆ

ಪ್ರತಿವರ್ಷ ತುಂಗಭದ್ರಾ ನದಿಯ ಪ್ರವಾಹದಿಂದ ಪಟ್ಟಣದ ಬಾಲರಾಜ್ ಘಾಟ್‌ನಲ್ಲಿ ಕೆಲವು ಮನೆಗಳು ಮುಳುಗಡೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಭಾಗದ ನದಿಗೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು 6 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ. ಜಿಲ್ಲಾಧಿಕಾರಿಗಳು ಅನುದಾನ ಬಿಡುಗಡೆ ಮಾಡಿದ್ದು ಟೆಂಡರ್ ಕರೆಯಲಾಗಿದೆ. ನ.10 ರಂದು ತಡೆಗೋಡೆ ಕಾಮಗಾರಿಗೆ ಅಡಿಗಲ್ಲು ಹಾಕಲಾಗುವುದು. ಆದ್ದರಿಂದ ಎಲ್ಲರೂ ಕಾರ್ಯಕ್ರಮಕ್ಕೆ ಬರಬೇಕು ಎಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net