ಬಿಐಇಟಿಗೆ 56 ಲಕ್ಷ ರೂ. ಅನುದಾನ ಮಂಜೂರು

ಧಾರವಾಡದ ಐಐಐಟಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನೈನ್ 2.0 ಚಾಲನಾ ಕಾರ್ಯಕ್ರಮದಲ್ಲಿ ದಾವಣಗೆರೆ ಬಿಐಇಟಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಬಿ. ಪೂರ್ಣಿಮಾ, ಡಾ. ಕಲ್ಲೇಶಪ್ಪ ಸಿ.ಎಂ., ಪ್ರೊ. ಶರಣ್, ವಿದ್ಯಾರ್ಥಿಗಳು, ಮಾರ್ಗದರ್ಶಕರು ಇದ್ದರು.
ಧಾರವಾಡದ ಐಐಐಟಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನೈನ್ 2.0 ಚಾಲನಾ ಕಾರ್ಯಕ್ರಮದಲ್ಲಿ ದಾವಣಗೆರೆ ಬಿಐಇಟಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಬಿ. ಪೂರ್ಣಿಮಾ, ಡಾ. ಕಲ್ಲೇಶಪ್ಪ ಸಿ.ಎಂ., ಪ್ರೊ. ಶರಣ್, ವಿದ್ಯಾರ್ಥಿಗಳು, ಮಾರ್ಗದರ್ಶಕರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕ್
  • ಧಾರವಾಡ ಐಐಐಟಿ ತಜ್ಞರ ತಂಡದ ಭೇಟಿ
ದಾವಣಗೆರೆ : ರಾಜ್ಯ ಸರ್ಕಾರದ ನಾವೀನ್ಯತೆ, ತಂತ್ರಜ್ಞಾನ ಮತ್ತು ಸೊಸೈಟಿಯ ಎಲೆಕ್ಟ್ರಾನಿಕ್ಸೃ್, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಕಿಟ್ಸ್) ಅಡಿಯಲ್ಲಿ ಬರುವ ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕ್ (ನೈನ್ 2.0) ಯೋಜನೆಯಡಿ ನಾವೀನ್ಯತಾ ಯೋಜನೆಗಳನ್ನು ಜಾರಿಗೆ ತರಲು ಇಲ್ಲಿನ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಆಯ್ಕೆಯಾಗಿದೆ.
ನಾವೀನ್ಯತಾ ಯೋಜನೆಗಳ ಮೇಲ್ವಿಚಾರಣಾ ಘಟಕವಾಗಿ ಕಾರ್ಯ ನಿರ್ವಹಿಸುತ್ತಿರುವ ಧಾರವಾಡದ ಐಐಐಟಿ ತಜ್ಞರ ತಂಡವು ಕಾಲೇಜಿಗೆ ಭೇಟಿ ನೀಡಿ, ವಿವಿಧ ವಿಭಾಗಗಳ ವಿದ್ಯಾರ್ಥಿಗಳ ತಂಡಗಳು ಮಂಡಿಸಿದ ಯೋಜನೆಗಳನ್ನು ಮೌಲ್ಯಮಾಪನ ಮಾಡಿ 10 ಯೋಜನೆಗಳನ್ನು ಆಯ್ಕೆ ಮಾಡಿತ್ತು.
ಈ ಯೋಜನೆಗಳ ಒಟ್ಟು ಮೊತ್ತ 41 ಲಕ್ಷ ರೂ.ಗಳಾಗಿದೆ. ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕ್ ವಿದ್ಯಾರ್ಥಿ ಯೋಜನೆಗಳಿಗಾಗಿ 41 ಲಕ್ಷ ರೂ.ಗಳ ಅನುದಾನದೊಂದಿಗೆ, ಕಾರ್ಯಕ್ರಮದ ಕಾರ್ಯಾಚರಣೆಯ ವೆಚ್ಚಗಳಿಗಾಗಿ 15 ಲಕ್ಷ ರೂ., ಸೇರಿ ಒಟ್ಟು 56 ಲಕ್ಷ ರೂ.ಗಳನ್ನು ಮಂಜೂರು ಮಾಡಿದೆ.
ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತು ಜಾಗೃತಿ ಮೂಡಿಸುವ ನೈನ್ 2.0 ಚಾಲನಾ ಕಾರ್ಯಕ್ರಮವನ್ನು ಧಾರವಾಡದ ಐಐಐಟಿ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ನಿರ್ದೇಶಕ ಡಾ. ಮಹಾದೇವ ಪ್ರಸನ್ನ ಅವರು ಯೋಜನೆಗಳನ್ನು ಹೇಗೆ ಜಾರಿಗೆ ತರಬೇಕು ಎಂಬುದರ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ಯೋಜನೆಗಳಿಗೆ ಆಯ್ಕೆಯಾಗಿದ್ದಕ್ಕೆ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಮಲ್ಲಿಕಾರ್ಜುನ್, ಜಂಟಿ ಕಾರ್ಯದರ್ಶಿ ಡಾ. ಪ್ರಭಾ ಮಲ್ಲಿಕಾರ್ಜುನ್, ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್, ನಿರ್ದೇಶಕ ವೈ. ವೃಷಭೇಂದ್ರಪ್ಪ, ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕ್‌ನ ಕಾಲೇಜು ಸಂಯೋಜಕಿ ಡಾ. ಬಿ. ಪೂರ್ಣಿಮಾ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net