vice president: ತಾಪಂ ಎದುರು ಆ*ತ್ಮಹತ್ಯೆಗೆ ಯತ್ನಿಸಿದ ಗ್ರಾಪಂ ಉಪಾಧ್ಯಕ್ಷ
vice president: ಜಗಳೂರು ತಾಪಂ ಎದುರು ಗ್ರಾಪಂ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸ್ವಂತ ಹಣದಲ್ಲಿ ಕೊಳವೆ ಬಾವಿ ದುರಸ್ತಿ
ಬಿಲ್ ಪಾವತಿ ವಿಳಂಬಕ್ಕೆ ಆಕ್ರೋಶ
ಪಿಡಿಒ ವಿರುದ್ಧ ಆರೋಪ
ಜಗಳೂರು: ತಾಲೂಕಿನ ಭರಮಸಮುದ್ರದಲ್ಲಿ ಕೊಳವೆ ಬಾವಿ ದುರಸ್ತಿ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಿದ 1 ಲಕ್ಷ ರೂ. ಪಾವತಿಸಲು ಸತಾಯಿಸಲಾಗುತ್ತಿದೆ ಎಂದು ಪಿಡಿಒ ವಿರುದ್ಧ ಆರೋಪಿಸಿದ್ದ ಸ್ಥಳೀಯ ಗ್ರಾಪಂ ಉಪಾಧ್ಯಕ್ಷರು ಶನಿವಾರ ತಾಲೂಕು ಪಂಚಾಯಿತಿ ಕಚೇರಿ ಎದುರು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಉಪಾಧ್ಯಕ್ಷ ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದವರು. ಸ್ಥಳೀಯರು ಹಾಗೂ ತಾಪಂ ಸಿಬ್ಬಂದಿ ಇವರನ್ನು ರಕ್ಷಿಸಿ ಅನಾಹುತ ಆಗದಂತೆ ತಡೆದಿದ್ದಾರೆ.
ಹನುಮಂತಾಪುರ ಗ್ರಾಪಂ ವ್ಯಾಪ್ತಿಯ ಭರಮಸಮುದ್ರ ಗ್ರಾಮದ ಉಪಾಧ್ಯಕ್ಷ ತಿಪ್ಪೇಸ್ವಾಮಿ ಅವರು ಗ್ರಾಮದಲ್ಲಿ ಹಾಳಾಗಿದ್ದ ಕೊಳವೆ ಬಾವಿ ದುರಸ್ತಿಪಡಿಸಿ ಕುಡಿಯುವ ನೀರಿನ ಸಮಸ್ಯೆ ದೂರ ಮಾಡಿದ್ದರು.
ಚರಂಡಿ ಸ್ವಚ್ಛತೆ ಸೇರಿ ಅಭಿವೃದ್ಧಿ ಕೆಲಸ ಮಾಡಿ 1 ಲಕ್ಷ ರೂ.ಗಳನ್ನು ತಮ್ಮ ಕೈಯಿಂದ ಖರ್ಚು ಮಾಡಿದ್ದರು. ಬಿಲ್ ಮಾಡಿಕೊಡುವಂತೆ ಪಿಡಿಒ ಕೊಟ್ರೇಶ್ ಅವರಿಗೆ ಕೇಳಿದ್ದರು. ಕಳೆದ ಎರಡು - ಮೂರು ಬಿಲ್‌ಗಾಗಿ ಓಡಾಡಿದ್ದರೂ ಆಗಿರಲಿಲ್ಲ. ಇದರಿಂದ ಬೇಸತ್ತಿದ್ದರು ಎನ್ನಲಾಗಿದೆ.
ಕೈಯಲ್ಲಿ ಪೆಟ್ರೋಲ್ ಬಾಟಲ್ ಹಿಡಿದು ತಾಪಂ ಕಚೇರಿಗೆ ಆಗಮಿಸಿದ ಗ್ರಾಪಂ ಉಪಾಧ್ಯಕ್ಷ ತಿಪ್ಪೇಸ್ವಾಮಿ ಅವರು ಪಿಡಿಒ ಕೊಟ್ರೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾದರು. ತಕ್ಷಣವೇ ಅಲ್ಲಿದ್ದವರು ರಕ್ಷಿಸಿದರು.
ಸ್ಥಳಕ್ಕೆ ಆಗಮಿಸಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆಂಚಪ್ಪ ತಿಪ್ಪೇಸ್ವಾಮಿ ಅವರನ್ನು ಸಮಾಧಾನಪಡಿಸಿ ಸಮಸ್ಯೆಗಳಿದ್ದರೆ ಗಮನಕ್ಕೆ ತರಬೇಕು. ಈ ರೀತಿ ವರ್ತಿಸಬಾರದು ಎಂದು ಸಮಾಧನ ಹೇಳಿದರು.
ಗ್ರಾಪಂನಲ್ಲಿ ಯಾವ ಸಮಸ್ಯೆಗಳಿವೆ ಎಂಬ ಕುರಿತು ಸಂಪೂರ್ಣ ಮಾಹಿತಿ ಪಡೆದು ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತೇನೆ. ಪಿಡಿಒ ಕೊಟ್ರೇಶ್ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಮುಂದೆ ಇಂತಹ ಘಟನೆ ಮರುಕಳಿಸಬಾರದು. ನೇರವಾಗಿ ನಮ್ಮೊಂದಿಗೆ ಮಾತನಾಡಿದರೆ ಕಾನೂನು ರೀತಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ವೈಯಕ್ತಿಕ ಕೆಲಸಕ್ಕೆ ಹಣ ಖರ್ಚು ಮಾಡಿಲ್ಲ. ಗ್ರಾಮದ ಜನರಿಗೆ ಕುಡಿಯುವ ನೀರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸಾಲ ಮಾಡಿ ಕೆಟ್ಟು ಹೋಗಿದ್ದ ಕೊಳವೆಬಾವಿಯ ಮೋಟರ್ ಮತ್ತು ಪೈಪ್ ದುರಸ್ತಿಪಡಿಸಿ ನೀರು ಕೊಡಿಸಿದ್ದೇನೆ ಎಂದರು.
ಇಂತಹ ಕೆಲಸಕ್ಕೆ ಅಧಿಕಾರಿಗಳು ಸಹಕರಿಸಬೇಕು. ಆದರೆ ಪಿಡಿಒ ಕೊಟ್ರೇಶ್ ಅವರನ್ನು ಹಣ ಪಾವತಿಸುವಂತೆ ಕೇಳಿದರೂ ಹಣ ಸಿಗುವುದು ಕಷ್ಟ ಎಂದು ಬೇಜವಾಬ್ದಾರಿಯಿಂದ ಹಾರಿಕೆ ಉತ್ತರ ನೀಡಿದ್ದರು ಎಂದು ದೂರಿದರು.