ವಿಟಿಯು ಜತೆ ಒಡಂಬಡಿಕೆಗೆ ಗೂಗಲ್ ಒಲವು

ಡಾ. ಎಸ್. ವಿದ್ಯಾಶಂಕರ್
ಡಾ. ಎಸ್. ವಿದ್ಯಾಶಂಕರ್
Published on

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಡಾ. ಎಸ್. ವಿದ್ಯಾಶಂಕರ್ ಹೇಳಿಕೆ
  • ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ತರಬೇತಿ
ದಾವಣಗೆರೆ : ಅಮೆರಿಕದ ಗೂಗಲ್ ಕಂಪನಿಯು ದೇಶದಲ್ಲಿ ಪ್ರಪ್ರಥಮ ಬಾರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲು ಮುಂದೆ ಬಂದಿದೆ ಎಂದು ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೂಗಲ್‌ನವರು ಇದುವರೆಗೆ ದೇಶದ ಯಾವುದೇ ವಿವಿ ಜತೆಗೆ ಒಡಂಬಡಿಕೆ ಮಾಡಿಕೊಂಡಿಲ್ಲ ಎಂದು ತಿಳಿಸಿದರು.
ಇದರ ಫಲವಾಗಿ 25 ಸಾವಿರ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಕುರಿತಾಗಿ ಇಂಟರ್ನ್‌ಶಿಪ್ ತರಬೇತಿ ದೊರೆಯಲಿದೆ. ಜೂನ್ ಅಂತ್ಯಕ್ಕೆ ಒಡಂಬಡಿಕೆಗೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಹೇಳಿದರು.
ವಿಟಿಯು ವ್ಯಾಪ್ತಿಯ ಇಂಜಿನಿಯರಿಂಗ್ ಕಾಲೇಜುಗಳಿಂದ ಪ್ರತಿ ವರ್ಷ 80 ಸಾವಿರ ವಿದ್ಯಾರ್ಥಿಗಳು ಹೊರ ಬರುತ್ತಾರೆ. ಅವರಿಗೆ ಉದ್ಯೋಗ ಸಿಗಬೇಕು ಎಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ವಿಟಿಯು ವ್ಯಾಪ್ತಿಯಲ್ಲಿ 3 ಕಡೆ ಕೇಂದ್ರೀಕೃತ ಪ್ಲೇಸ್‌ಮೆಂಟ್ ವ್ಯವಸ್ಥೆ ಕಲ್ಪಿಸಲು ಗೂಗಲ್‌ನವರು ಒಪ್ಪಿದ್ದಾರೆ ಎಂದರು.
ಈಗಾಗಲೇ 83 ಸಾವಿರ ವಿದ್ಯಾರ್ಥಿಗಳು ವಿವಿಯ ಇಂಟರ್ನ್‌ಶಿಪ್ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದಾರೆ. ರಿವರ್ಸ್ ಇಂಜಿನಿಯರಿಂಗ್ ಲ್ಯಾಬ್‌ನ್ನು ನಮ್ಮ ವಿವಿಯಲ್ಲಿ ಸ್ಥಾಪಿಸಲಾಗಿದೆ. ಅದನ್ನು ಬಳಸಿಕೊಂಡು ಮಕ್ಕಳಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು, ಅವರಲ್ಲಿ ಕೌಶಲ ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.
ವಿಟಿಯು ಸ್ಕಿಲ್ ಲ್ಯಾಬ್ ಬಳಸಿಕೊಂಡು ತಮ್ಮ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲು ಯುವಿಸಿಇ ಆಸಕ್ತಿ ತೋರಿಸಿದೆ. ಈ ಕುರಿತು ಒಡಂಬಡಿಕೆ ಆಗುತ್ತಿದೆ. 25 ಕೋಟಿ ರೂ. ವೆಚ್ಚದಲ್ಲಿ 19 ಕ್ಯೂಬಿಕ್ ಕ್ವಾಂಟಮ್ ಕಂಪ್ಯೂಟರ್ ಸ್ಥಾಪನೆ ಮಾಡಲಾಗುತ್ತಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net