ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿಯಿದ್ದು, ಸಾಲ ಮಾಡಿ ಬಿತ್ತನೆ ಮಾಡಿದ್ದ ಬೆಳೆಗಳು ಮಳೆಯಿಲ್ಲದೆ ನಾಶವಾಗಿವೆ. ಇಂತಹ ದುಸ್ತರ ಪರಿಸ್ಥಿತಿಯಲ್ಲಿ ರೈತರನ್ನು ಒಕ್ಕಲೆಬ್ಬಿಸಿ ಟೌನ್‌ಶಿಪ್ ಮಾಡುವುದು ಯಾರಿಗಾಗಿ? ಸರ್ಕಾರ ತಕ್ಷಣವೇ ಬಿಡದಿ ಬಳಿಯ ಟೌನ್‌ಶಿಪ್ ಯೋಜನೆಯನ್ನು ಕೈಬಿಡಬೇಕು. ರೈತರ ಮೇಲಿನ ಲಾಠಿಚಾರ್ಜ್, ಗುಂಡಿಗೆ ನಾವು ಹೆದರು ವುದಿಲ್ಲ. ಅಂದು ರೈತರ ಮೇಲೆ ಗುಂಡು ಹಾರಿಸಿದ್ದ ಆರ್. ಗುಂಡೂರಾವ್ ಸರ್ಕಾರಕ್ಕೆ ಏನಾಯಿತು ಎಂಬುದು ನೆನಪಿರಲಿ ಎಂದು ಎಚ್ಚರಿಸಿದರು.