ಬಿಜೆಪಿ ಆಣೆ ಪ್ರಮಾಣ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಮೊದಲು ಜೆಡಿಎಸ್ ಮುಳುಗುತ್ತಿರುವ ಹಡಗು ಎನ್ನಲಾಗುತ್ತಿತ್ತು. ಈಗ ಬಿಜೆಪಿಯವರೂ ಸೇರಿ ಒಂದೇ ದೋಣಿಯಲ್ಲಿ ಮುಳುಗುತ್ತಿದ್ದಾರೆ ಎನ್ನಿಸುತ್ತಿದೆ. ಬಿಜೆಪಿಗರು ಪ್ರಚೋದನಕಾರಿ ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ಎಲ್ಲ ಜನರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತಿದೆ. ರಾಜಕಾರಣದಲ್ಲಿ ಜಾತಿ ತರಬಾರದು ಎಂದೂ ಹೇಳಿದರು.