ನಂತರ ಪಾಲಕರು ವಿಚಾರಿಸಿದಾಗ ಕಾಮುಕನ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಪಾಲಕರ ಹೊಲಕ್ಕೆ ಉಳುಮೆ ಮಾಡಲು ಬರುತ್ತಿದ್ದ ಆರೋಪಿ, ಬಾಲಕಿಯೊಂದಿಗೆ ಮೊಬೈಲ್‌ನಲ್ಲಿ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದ. 2025ರ ಆಗಸ್ಟ್- ಸೆಪ್ಟೆಂಬರ್ ಅವಧಿಯಲ್ಲಿ ಗ್ರಾಮದ ಹಳ್ಳದ ಪೊದೆಯ ಬಳಿ ಬಾಲಕಿಯನ್ನು ಕರೆದೊಯ್ದು, ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿ ಬಲವಂತದ ದೈಹಿಕ ಸಂಪರ್ಕ ಬೆಳೆಸಿದ್ದ. ಪೊಲೀಸರಿಗೆ ದೂರು ನೀಡದಂತೆ ಹೆದರಿಸಿದ್ದರಿಂದ ಬಾಲಕಿ ಈ ವಿಷಯವನ್ನು ಮುಚ್ಚಿಟ್ಟಿದ್ದಳು ಎನ್ನಲಾಗಿದೆ.