ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಕೃಷಿ ಇಲಾಖೆ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ಸಾಮಾನ್ಯ ವರ್ಗದವರಿಗೆ ಶೇ. 80, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ. 90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಫಲಾನುಭವಿಗಳು ಹೊಂಡಕ್ಕೆ ಬದು ನಿರ್ಮಿಸಿಕೊಳ್ಳಬೇಕು. ಡೀಸೆಲ್ ಪಂಪ್‌ಸೆಟ್ ಹೊಂದಬೇಕು. ತಾಡಪಾಲು, ಸ್ಪ್ರಿಂಕ್ಲರ್ ಅಳವಡಿಸಿಕೊಂಡು ತಂತಿ ಬೇಲಿಯನ್ನು ಹಾಕಿಕೊಳ್ಳಬೇಕು. ಕೃಷಿ ಹೊಂಡಗಳು ಕನಿಷ್ಠ 10 ಮೀಟರ್ ಅಗಲ, 10 ಮೀಟರ್ ಉದ್ದ, 3 ಮೀಟರ್ ಆಳ, ಚೌಕಾಕಾರ ಇರಬೇಕು ಎಂಬ ನಿಯಮವಿದೆ.