ಕೃಷಿ ಪರಿಕರಗಳ ಬೆಲೆ ಏರಿಕೆ: ರೈತರ ಪ್ರತಿಭಟನೆ farmer

farmerಮಾಯಕೊಂಡ ರೈತ ಸಂಪರ್ಕ ಕೇಂದ್ರದ ಮುಂದೆ ಸೋಮವಾರ ರೈತರು ಪ್ರತಿಭಟನೆ ನಡೆಸಿದರು. ಅಶೋಕಗೌಡ್ರು, ರಾಮಜೋಗಿ ಪ್ರತಾಪ್, ಕುಮಾರಸ್ವಾಮಿ ಮತ್ತಿತರರಿದ್ದಾರೆ.
farmerಮಾಯಕೊಂಡ ರೈತ ಸಂಪರ್ಕ ಕೇಂದ್ರದ ಮುಂದೆ ಸೋಮವಾರ ರೈತರು ಪ್ರತಿಭಟನೆ ನಡೆಸಿದರು. ಅಶೋಕಗೌಡ್ರು, ರಾಮಜೋಗಿ ಪ್ರತಾಪ್, ಕುಮಾರಸ್ವಾಮಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಗೊಬ್ಬರ, ಬಿತ್ತನೆ ಬೀಜದ ದರ ಹೆಚ್ಚಳಕ್ಕೆ ಹಸಿರು ಸೇನೆ ತೀವ್ರ ಆಕ್ರೋಶ; ಕೃಷಿ ಅಧಿಕಾರಿಗೆ ಮನವಿ ಸಲ್ಲಿಕೆ
  • 50 ಕೆಜಿ ಗೊಬ್ಬರಕ್ಕೆ 2300 ರೂ.! ಕೃಷಿಕರನ್ನು ಸಾಲದ ಸುಳಿಗೆ ದೂಡಿದ ಸರ್ಕಾರಗಳ ಧೋರಣೆ
  • ಹೆಚ್ಚಿನ ಬೆಲೆಗೆ ಮಾರುವ ವ್ಯಾಪಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ
ಮಾಯಕೊಂಡ:ಮುಂಗಾರುಹಂಗಾಮು ಆರಂಭದ ಹೊಸ್ತಿಲಲ್ಲೇಬಿತ್ತನೆ ಬೀಜ,ರಸಗೊಬ್ಬರಹಾಗೂ ಕೀಟನಾಶಕಗಳ ಬೆಲೆಯನ್ನುಗಗನಕ್ಕೇರಿಸಿ ಸರ್ಕಾರದ ಧೋರಣೆಯನ್ನುಖಂಡಿಸಿ,ಸೋಮವಾರಮಾಯಕೊಂಡದ ರೈತ ಸಂಪರ್ಕ ಕೇಂದ್ರದ(ಆರ್‌ಎಸ್‌ಸಿ)ಎದುರುರೈತರು ಪ್ರತಿಭಟನೆ ನಡೆಸಿದರು.farmer
ಕರ್ನಾಟಕರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯಬಣ)ನೇತೃತ್ವದಲ್ಲಿಜಮಾಯಿಸಿದ ನೂರಾರು ಕೃಷಿಕರು,ಬೆಲೆಏರಿಕೆ ವಿರುದ್ಧ ಘೋಷಣೆ ಕೂಗಿಆಕ್ರೋಶ ವ್ಯಕ್ತಪಡಿಸಿದರು. ಕೃಷಿಅಧಿಕಾರಿಯ ಮೂಲಕ ಸರ್ಕಾರಕ್ಕೆಕಟ್ಟುನಿಟ್ಟಿನ ಮನವಿ ಪತ್ರಸಲ್ಲಿಸಿದರು.

ಪ್ರತಿಭಟನೆಯನ್ನುದ್ದೇಶಿಸಿಮಾತನಾಡಿದ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಅಶೋಕಗೌಡ್ರು, ರೈತರ ಬಗ್ಗೆ ಸರ್ಕಾರಗಳಿಗೆ ಕಾಳಜಿ ಇಲ್ಲದಂತಾಗಿದೆ.ರೈತರಿಗೆಒಳಿತು ಮಾಡುತ್ತೇವೆ ಎಂದು ಸುಳ್ಳುಭರವಸೆ ನೀಡಿ ಅಧಿಕಾರಕ್ಕೆ ಬಂದನಾಯಕರು,ಈಗಕೃಷಿಕರನ್ನೇ ಸಂಪೂರ್ಣವಾಗಿಮರೆತಿದ್ದಾರೆ.ಬಿತ್ತನೆಬೀಜ,ಗೊಬ್ಬರಹಾಗೂ ಕೀಟನಾಶಕಗಳ ದರವನ್ನುದುಪ್ಪಟ್ಟು ಮಾಡಿ ರೈತರನ್ನುಜರ್ಜರಿತಗೊಳಿಸುತ್ತಿದ್ದಾರೆ"ಎಂದುಆಕ್ರೋಶ ವ್ಯಕ್ತಪಡಿಸಿದರು.

ಬೆಳೆಗಳಿಗೆವೈಜ್ಞಾನಿಕ ಬೆಲೆ ನೀಡದ ಸರ್ಕಾರಗಳು,ಇತ್ತ50 ಕೆಜಿತೂಕದ ರಸಗೊಬ್ಬರದ ಚೀಲಕ್ಕೆ 2000ದಿಂದ2300ರೂ.ಗಿಂತಲೂಹೆಚ್ಚಿನ ದರ ನಿಗದಿಪಡಿಸಿವೆ.ಇದರಿಂದಾಗಿಹೊಸ ಹಂಗಾಮು ಆರಂಭಿಸಲು ಕೃಷಿಕರಲ್ಲಿತೀವ್ರ ನಿರುತ್ಸಾಹ ಮೂಡುವಂತಾಗಿದೆಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೃತಕಅಭಾವ,ಕಪ್ಪುಮಾರುಕಟ್ಟೆ ದಂಧೆಗೆ ಬ್ರೇಕ್ಹಾಕಿ

ಹಸಿರುಸೇನೆಯ ತಾಲೂಕು ಅಧ್ಯಕ್ಷ ರಾಮಜೋಗಿಪ್ರತಾಪ್ ಮಾತನಾಡಿ,"ಸರ್ಕಾರನಿಗದಿಪಡಿಸಿರುವ ದುಬಾರಿ ದರಒಂದೆಡೆ. ಇತ್ತಸ್ಥಳೀಯ ಗೊಬ್ಬರ ಮತ್ತು ಬೀಜದವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿನಿಗದಿತ ದರಕ್ಕಿಂತಲೂ ಅಧಿಕ ಹಣಕ್ಕೆಮಾರಾಟ ಮಾಡುತ್ತಿದ್ದಾರೆ.ಕೃಷಿಇಲಾಖೆಯ ಅಧಿಕಾರಿಗಳು ಕಚೇರಿಬಿಟ್ಟು ಹೊರಬಂದು ಇಂತಹ ಅಕ್ರಮದಂಧೆಕೋರರ ಮೇಲೆ ಕಟ್ಟುನಿಟ್ಟಿನನಿಗಾ ಇಡಬೇಕು ಹಾಗೂ ಕಾನೂನು ಕ್ರಮಜರುಗಿಸಬೇಕು"ಎಂದುಒತ್ತಾಯಿಸಿದರು.

ರೈತಮುಖಂಡ ಅಣಬೇರು ಕುಮಾರಸ್ವಾಮಿಮಾತನಾಡಿ,"ಸರ್ಕಾರಗಳುಸತತವಾಗಿ ರೈತ ವಿರೋಧಿ ನೀತಿಗಳನ್ನೇಅನುಸರಿಸುತ್ತಿವೆ.ಕೃಷಿಪರಿಕರಗಳ ಜೊತೆಗೆ ಇಂಧನ (ಡೀಸೆಲ್,ಪೆಟ್ರೋಲ್)ಹಾಗೂನಿತ್ಯಾವಶ್ಯಕ ವಸ್ತುಗಳ ಬೆಲೆಏರಿಕೆಯಾಗಿರುವುದು ಗ್ರಾಮೀಣಬಡ ಜನರಿಗೆ ಮತ್ತು ಕೂಲಿ ಕಾರ್ಮಿಕರಿಗೆಗಾಯದ ಮೇಲೆ ಬರೆ ಎಳೆದಂತಾಗಿದೆ"ಎಂದರು.

ಎಂಆರ್‌ಪಿಗಿಂತಹೆಚ್ಚು ವಸೂಲಿ ಮಾಡಿದರೆ ಲೈಸೆನ್ಸ್ರದ್ದು

ಪ್ರತಿಭಟನಾಸ್ಥಳಕ್ಕೆ ಬಂದು ರೈತರಿಂದ ಮನವಿಪತ್ರ ಸ್ವೀಕರಿಸಿದ ಕೃಷಿ ಅಧಿಕಾರಿಕೆ.ಭೀಮಪ್ಪಮಾತನಾಡಿ,"ಮಾಯಕೊಂಡವ್ಯಾಪ್ತಿಯಲ್ಲಿ ಗೊಬ್ಬರ ಮತ್ತುಬಿತ್ತನೆ ಬೀಜ ಮಾರಾಟ ಮಾಡುವ ಎಲ್ಲಾಖಾಸಗಿ ಅಂಗಡಿಗಳಿಗೂ ಈಗಾಗಲೇಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇಕಾರಣಕ್ಕೂ ನಿಗದಿತ ದರಕ್ಕಿಂತ(MRP)ಹೆಚ್ಚಿನಹಣ ಪಡೆಯುವಂತಿಲ್ಲ.ಒಂದುವೇಳೆ ರೈತರಿಂದ ದೂರು ಬಂದರೆ ಅಂತಹಅಂಗಡಿಗಳ ಪರವಾನಗಿ ರದ್ದುಪಡಿಸುವುದರಜೊತೆಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು"ಎಂದುಭರವಸೆ ನೀಡಿದರು.

ಈಸಂದರ್ಭದಲ್ಲಿ ರೈತ ಮುಖಂಡರುಗಳಾದರೇವಣಸಿದ್ದಪ್ಪ,ಹೆದ್ದೇಮಂಜುನಾಥ್,ಬಾಡಹನುಮಂತಪ್ಪ,ಸುರೇಶ್,ಜಗದೀಶ್,ಷಣ್ಮುಖಪ್ಪ,ನಾಗಪ್ಪ,ಲೋಕೇಶ್,ಪ್ರವೀಣ್,ವೆಂಕಟೇಶ್,ಜಯಪ್ಪ,ನಾಗರಾಜಪ್ಪ,ಮಂಜಪ್ಪಸೇರಿದಂತೆ ಸುತ್ತಮುತ್ತಲಿನಹಳ್ಳಿಗಳ ನೂರಾರು ರೈತರುಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net