ಧಾರ್ಮಿಕ ಪರಂಪರೆ ರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ

ಚಿಕ್ಕಕುರುಬರಹಳ್ಳಿಯಲ್ಲಿ ಭಾನುವಾರ ಶ್ರೀ ಆಂಜನೇಯ ಸ್ವಾಮಿಯ ನೂತನ ತೇರು ಮನೆಯನ್ನು ಶಾಸಕ ಕೆ.ಎಸ್. ಬಸವಂತಪ್ಪ ಉದ್ಘಾಟಿಸಿದರು. ಬಿ.ಜಿ. ನಾಗಣ್ಣ, ದೊಡ್ಡಪ್ಪಗೌಡ್ರು, ಶಶಿಧರ್, ಪಂಪಣ್ಣ, ಸುರೇಶ್, ಶಿವಕುಮಾರ್, ಕೃಷ್ಣಪ್ಪ, ಆಸ್ೀ, ಶಾಹಿದ್ ಇತರರು ಇದ್ದರು.launch

Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಸ್.ಬಸವಂತಪ್ಪ ಹೇಳಿಕೆ
ಬಸವಾಪಟ್ಟಣ: ಧಾರ್ಮಿಕ ಪರಂಪರೆಯನ್ನು ಉಳಿಸುವ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು. launch
ಬಸವಾಪಟ್ಟಣ ಸಮೀಪದ ಚಿಕ್ಕಕುರುಬರಹಳ್ಳಿ ಗ್ರಾಮದಲ್ಲಿ ಭಾನುವಾರ ಶ್ರೀ ಆಂಜನೇಯ ಸ್ವಾಮಿಯ ನೂತನ ತೇರು ಮನೆ ಉದ್ಘಾಟಿಸಿ ಮಾತನಾಡಿದರು.
ದೇವಾಲಯ ಹಾಗೂ ಧಾರ್ಮಿಕ ಪರಂಪರೆ ನಮ್ಮ ಸಂಸ್ಕೃತಿಯ ಪ್ರತೀಕ. ಅವುಗಳ ರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಗ್ರಾಮಸ್ಥರ ಸಹಕಾರದಿಂದ ನಿರ್ಮಾಣವಾಗಿರುವ ಈ ತೇರು ಮನೆ ಮುಂದಿನ ಪೀಳಿಗೆಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯ ಪಸರಿಸುವ ಕೇಂದ್ರವಾಗಲಿದೆ ಎಂದರು.
ಆಂಜನೇಯ ಸ್ವಾಮಿಯ ಕೃಪೆಯಿಂದ ಗ್ರಾಮದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ. ಇಂತಹ ಸಮಾಜಮುಖಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳಿಂದ ಅಗತ್ಯ ಸಹಕಾರ ಸದಾ ದೊರೆಯಲಿದೆ ಎಂದು ತಿಳಿಸಿದರು. ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗಣ್ಣ, ಮುಖಂಡರಾದ ದೊಡ್ಡಪ್ಪಗೌಡ್ರು, ಶಶಿಧರ್, ಪಂಪಣ್ಣ, ಸುರೇಶ್, ಶಿವಕುಮಾರ್, ಕೃಷ್ಣಪ್ಪ, ಆಸ್ೀ, ಶಾಹಿದ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net