ಪ್ರತಿಯೊಬ್ಬ ವ್ಯಕ್ತಿಗೂ ಬಸವಣ್ಣನ ಚಿಂತನೆ ಅಗತ್ಯ

ದಾವಣಗೆರೆಯ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಎಲ್.ಎಚ್. ಅರುಣಕುಮಾರ್, ಎನ್.ಎಸ್. ರಾಜು, ಅರುಣ್‌ಕುಮಾರ್ ಕುರುಡಿ ಇದ್ದರು.
ದಾವಣಗೆರೆಯ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಎಲ್.ಎಚ್. ಅರುಣಕುಮಾರ್, ಎನ್.ಎಸ್. ರಾಜು, ಅರುಣ್‌ಕುಮಾರ್ ಕುರುಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಲ್.ಎಚ್. ಅರುಣಕುಮಾರ್ ಹೇಳಿಕೆ
  • ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ
ದಾವಣಗೆರೆ : ಉಸಿರಾಡುವ ಪ್ರತಿಯೊಬ್ಬ ವ್ಯಕ್ತಿಗೂ ಬಸವಣ್ಣನ ಚಿಂತನೆಗಳು ಅವಶ್ಯಕವಾಗಿವೆ ಎಂದು ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ಹೇಳಿದರು.
ನಗರದ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣ ಬಯಸಿದ್ದ ಸಮ ಸಮಾಜವನ್ನು ಇಂದಿಗೂ ಕಟ್ಟಲಾಗದಿರುವುದು ನಮ್ಮ ದುರಂತ. ವಿಶ್ವಮಾನ್ಯ ಆಗಬೇಕಾಗಿದ್ದ ಬಸವ ಧರ್ಮ ಜಾತಿಗೆ ಸೀಮಿತವಾಗಿದ್ದು ಇತಿಹಾಸದ ದುರಂತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಬಸವಣ್ಣ ಸಮಾನತೆಯ ಬೀಜ ಬಿತ್ತಿದ ಕನ್ನಡ ನಾಡಿನ ಮೊದಲ ಕ್ರಾಂತಿಕಾರಿ. ಸ್ತ್ರೀ ಸಮಾನತೆ, ಕಾಯಕವೇ ಕೈಲಾಸ, ವೈಚಾರಿಕತೆ, ಅನುಭವ ಮಂಟಪಗಳ ಮೂಲಕ ಸಮ ಸಮಾಜಕ್ಕೆ ಶ್ರಮಿಸಿದ ಪ್ರಥಮ ಮಾನವತಾವಾದಿ ಎಂದು ಬಣ್ಣಿಸಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್ ಕುರುಡಿ ಮಾತನಾಡಿ, 12ನೇ ಶತಮಾನದಲ್ಲಿ ಮಾನವ ಹಕ್ಕುಗಳ ಪ್ರತಿಪಾದನೆ ಮಾಡಿದ ಪ್ರಜಾಪ್ರಭುತ್ವವಾದಿ ಬಸವಣ್ಣ ಎಂದು ತಿಳಿಸಿದರು.
ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್.ಎಸ್. ರಾಜು ಮಾತನಾಡಿ, ವಚನ ಚಳವಳಿಯ ಮೂಲಕ ಶರಣರು ಪ್ರತಿಪಾದಿಸಿದ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ನೀರ್ಥಡಿ ಬಸವರಾಜ್, ಟಿ.ಎನ್. ಮಂಜುನಾಥ, ಮಾರ್ತಾಂಡಪ್ಪ, ಶಿವಾಜಿರಾವ್, ಎಸ್. ಹನುಮಂತಪ್ಪ, ಎಂ.ಎಸ್. ಶಿವಕುಮಾರಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net