ನಿಗದಿಪಡಿಸಿರುವಂತೆ ರಾಜ್ಯದಾದ್ಯಂತ 5ಕೋಟಿ ಸಸಿ ನೆಡಲು ತೀರ್ಮಾನಿಸಲಾಗಿದೆ. ಇದರಲ್ಲಿ 2ಕೋಟಿ ಸಸಿಗಳನ್ನು ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ನೆಡಲಾಗುವುದು. ಇನ್ನುಳಿದ 3 ಕೋಟಿ ಸಸಿಗಳನ್ನು ಇತರೆ ಜಿಲ್ಲೆಗಳಲ್ಲಿ ಹಾಕಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮ ನಡೆಸಲು ಜಿಲ್ಲಾ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಸ್ಥಳಗಳನ್ನು ಗುರುತಿಸಿಕೊಳ್ಳಿ. ಸಂಬಂಧಿಸಿದ ಇಲಾಖೆ, ಸ್ಥಳೀಯ ಸಂಘ, ಸಂಸ್ಥೆಗಳ ಸಹಕಾರ ಬಳಸಿಕೊಳ್ಳಿ ಎಂದು ಹೇಳಿದರು. ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಪದ್ಮಶ್ರೀ ಮನ್ನೋಳಿ, ಹೆಚ್ಚುವರಿ ನ್ಯಾಯಾಧೀಶರಾದ ಪುಣ್ಯಕೋಟಿ, ತಾಲೂಕು ವಕೀಲರ ಸಂಘ ಅಧ್ಯಕ್ಷ ಎಂ. ಗುಡ್ಡಪ್ಪ, ಉಪಾಧ್ಯಕ್ಷ ಶಾಂತವೀರಪ್ಪ, ಬಿಇಒ ಕೆ.ಟಿ. ನಿಂಗಪ್ಪ, ಬಿಆರ್‌ಸಿ ತಿಪ್ಪೇಶಪ್ಪ, ತಹಸೀಲ್ದಾರ್ ಕವಿರಾಜ್, ಪೊಲೀಸ್ ಇನ್ಸ್‌ಪೆಕ್ಟರ್ ಎಚ್. ಸುನಿಲ್‌ಕುಮಾರ್, ಹೊನ್ನಾಳಿ ಅರಣ್ಯ ಇಲಾಖೆ ಕಿಶೋರ್ ನಾಯ್ಕ, ನ್ಯಾಮತಿ ಠಾಣೆ ಪಿಎಸ್‌ಐ ಶೋಭಾರಾಣಿ, ಇಸಿಒ ಮುದ್ದನಗೌಡ, ಅರುಣಕುಮಾರ್ ಇದ್ದರು.