ವೈದ್ಯಾಧಿಕಾರಿ ಡಾ. ಚೇತನ್ ಮಾತನಾಡಿ, ಡೆಂಘೆ ಹರಡುವ ಈಡಿಸ್ ಈಜಿಪ್ಟೈ ಸೊಳ್ಳೆಗಳು ಶುದ್ಧ ನೀರಿನಲ್ಲಿಯೇ ಸಂತಾನೋತ್ಪತ್ತಿ ಮಾಡುತ್ತವೆ. ಹೀಗಾಗಿ ಪ್ರತಿ 4 ದಿನಕ್ಕೊಮ್ಮೆ ನೀರಿನ ಪಾತ್ರೆ ಅಥವಾ ತೊಟ್ಟಿಗಳನ್ನು ತೊಳೆದು, ಒಣಗಿಸಿ ಮರುಬಳಸಬೇಕು. ಹಗಲು ಮಲಗುವ ಗರ್ಭಿಣಿಯರು ಕಡ್ಡಾಯವಾಗಿ ಸೊಳ್ಳೆ ಪರದೆ ಬಳಸಬೇಕು. ಏಕಾಏಕಿ ತೀವ್ರ ಜ್ವರ, ಕಣ್ಣಿನ ಹಿಂಭಾಗ - ತಲೆ - ಮೈ ಕೈ ನೋವು, ವಾಂತಿ, ಚರ್ಮ ಹಾಗೂ ವಸಡಿನಲ್ಲಿ ರಕ್ತಸ್ರಾವ ಇವು ಡೆಂಘೆ ಲಕ್ಷಣಗಳು. ಜ್ವರ ಬಂದ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.