ವಿದ್ಯುತ್ ಪ್ರಸರಣಾ ಸಂಸ್ಥೆಗಳ ಖಾಸಗಿಯವರ ಸುಪರ್ದಿ ಸಲ್ಲದು

ವಿದ್ಯುತ್ ಪ್ರಸರಣ ನಿಗಮಗಳ ಖಾಸಗೀಕರಣವನ್ನು ವಿರೋಧಿಸಿ ಹೊನ್ನಾಳಿಯ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪಗೆ ಸ್ವಾಬಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್‌ಕುಮಾರ್ ಮನವಿ ಸಲ್ಲಿಸಿದರು. ರಾಜು ಕಣಗಣ್ಣ, ದೇವರಾಜು, ರಾಜಶೇಖರ್, ಭೋಜನಾಯ್ಕ, ಮಂಜುನಾಥ್, ಹಳದಪ್ಪ, ಶ್ರೀಧರ್, ಮಂಜು, ಪ್ರಕಾಶ್ ಇತರರಿದ್ದರು. Electricity
ವಿದ್ಯುತ್ ಪ್ರಸರಣ ನಿಗಮಗಳ ಖಾಸಗೀಕರಣವನ್ನು ವಿರೋಧಿಸಿ ಹೊನ್ನಾಳಿಯ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪಗೆ ಸ್ವಾಬಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್‌ಕುಮಾರ್ ಮನವಿ ಸಲ್ಲಿಸಿದರು. ರಾಜು ಕಣಗಣ್ಣ, ದೇವರಾಜು, ರಾಜಶೇಖರ್, ಭೋಜನಾಯ್ಕ, ಮಂಜುನಾಥ್, ಹಳದಪ್ಪ, ಶ್ರೀಧರ್, ಮಂಜು, ಪ್ರಕಾಶ್ ಇತರರಿದ್ದರು. Electricity
Published on

ಪ್ರಮುಖ ಮುಖ್ಯಾಂಶಗಳು

  • ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್‌ಕುಮಾರ್ ಅಭಿಪ್ರಾಯ
  • ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಕೆ
ಹೊನ್ನಾಳಿ: ವಿದ್ಯುತ್ ಪ್ರಸರಣಾ ಸಂಸ್ಥೆಗಳನ್ನು ಖಾಸಗಿಯವರ ಸುಪರ್ದಿಗೆ ಒಪ್ಪಿಸಲು ಮುಂದಾಗಿರುವ ಸರ್ಕಾರ ನಿಲುವನ್ನು ಹಿಂಪಡೆಯಬೇಕೆಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್‌ಕುಮಾರ್ ಒತ್ತಾಯಿಸಿ ಶುಕ್ರವಾರ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪಗೆ ಮನವಿ ಸಲ್ಲಿಸಿ ಮಾತನಾಡಿದರು. Electricity
ರಾಜ್ಯದ ಸುಮಾರು 19 ಜಿಲ್ಲೆಗಳಲ್ಲಿ ವಿದ್ಯುತ್ ಪ್ರಸರಣೆ ಮಾಡಲು ಖಾಸಗಿ ಸಂಸ್ಥೆಯೊಂದು ಪರವಾನಗಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪೂರಕವಾಗಿ ಕೆಇಆರ್‌ಸಿ ಸಂಸ್ಥೆ ಸಹ ಆ ಸಂಸ್ಥೆಯೊಂದಿಗೆ ಮಾತುಕತೆ ಆರಂಭಿಸಿರುವುದು ಅನ್ನದಾತರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. ಇದು ಮುಂದುವರಿದು ಖಾಸಗಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಲ್ಲಿ ರೈತರ ಜಮೀನುಗಳಿಗೆ ನೀಡುತ್ತಿರುವ ಉಚಿತ ಹಾಗೂ ರಿಯಾಯಿತಿ ವಿದ್ಯುತ್ ಯೋಜನೆ ಸ್ಥಗಿತಗೊಳ್ಳುವ ಭೀತಿ ರೈತರಲ್ಲಿ ಮನೆಮಾಡಿದೆ ಎಂದರು.
ವಿದ್ಯುತ್ ಪ್ರಸರಣ ಖಾಸಗೀಕರಣಗೊಂಡಲ್ಲಿ ವ್ಯಾಪಾರ ಮನೋಭಾವ ಮತ್ತು ಲಾಭದ ಉದ್ದೇಶ ಹೆಚ್ಚಾಗಲಿದೆ. ಹೊರತು ರೈತರ ಹಿತವಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ರೈತರಿಗೆ ಸಕಾಲದಲ್ಲಿ ವಿದ್ಯುತ್ ಸಿಗದೆ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಕುಂಠಿತಗೊಳ್ಳುವ ಸಾಧ್ಯತೆಗಳಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಖಾಸಗಿ ಸಂಸ್ಥೆಗಳು ಲಾಭದ ಉದ್ದೇಶದಿಂದ ದರ ಏರಿಕೆ ಮಾಡಿ ಗ್ರಾಹಕರಿಗೆ ಬಿಸಿ ತಟ್ಟಿಸುವ ಅಪಾಯವಿದೆ. ಜನರಿಗೆ ಲಭ್ಯವಿರುವ ಯೋಜನೆಗಳು ನಿಂತು ಹೋಗುವ ಸಂಭವವಿದೆ. ದಶಕಗಳಿಂದ ಸಾರ್ವಜನಿಕ ತೆರಿಗೆಯಲ್ಲಿ ಕಟ್ಟಲಾದ ಬೃಹತ್ ಸಂಸ್ಥೆ ಖಾಸಗಿಯವ ಪಾಲಾಗುತ್ತದೆ. ಆದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ರಾಜ್ಯದ ವಿದ್ಯುತ್ ಪ್ರಸರಣಾ ಕೇಂದ್ರಗಳಲ್ಲಿ 83 ಸಾವಿರ ಹುದ್ದೆಗಳ ಪೈಕಿ 66 ಸಾವಿರ ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 33 ಸಾವಿರ ಹುದ್ದೆ ಭರ್ತಿ ಮಾಡಿಲ್ಲ. ಖಾಸಗಿರಕರಣದಿಂದ ಈಗ ಕೆಲಸ ಮಾಡುವ ಸಿಬ್ಬಂದಿ ಕೆಲಸ ಕಳೆದುಕೊಳ್ಳವ ಅಭದ್ರತೆ ಇದೆ ಎಂದರು.
ರಾಷ್ಟ್ರೀಯ ಪಕ್ಷಗಳು ರೈತರ ಹಿತವನ್ನು ಕಡೆಗಾಣಿಸುತ್ತಿದ್ದಾರೆ. ತಮ್ಮ ಲಾಭಕ್ಕಾಗಿ ರೈತರನ್ನು ಬಳಸಿಕೊಳ್ಳುತ್ತಿದ್ದಾರೆ ಹೊರತು ರೈತರಿಗಾಗಿ ಯಾವುದೇ ಯೋಜನೆಗಳನ್ನು ಜಾರಿಗೊಳಿಸಿಲ್ಲ ಎಂದು ಸರ್ಕಾರಗಳ ನಡೆಯನ್ನು ಟೀಕಿಸಿದರು.
ರಾಜ್ಯ ಸರ್ಕಾರಕ್ಕೆ ಅನ್ನದಾತರ ಮೇಲೆ ಗೌರವ ಇದ್ದಲ್ಲಿ ಖಾಸಗಿ ಸಂಸ್ಥೆಯೊಂದಿಗಿನ ಮಾತುಕತೆಯನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ರೈತ ಸಂಘದ ಮುಖಂಡ ಜಗದೀಶ್ ಮಾತನಾಡಿ, ರೈತರ ಹಿತವನ್ನು ಕಡೆಗಣಿಸಿ, ರೈತರ ಮರಣ ಶಾಸನ ಬರೆಯಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಕೂಡಲೆ ನಿಲ್ಲಿಸಬೇಕು ಎಂದರು.
ಸ್ವಾಭಿಮಾನಿ ಬಳಗದ ತಾಲೂಕು ಮುಖಂಡ ರಾಜು ಕಣಗಣ್ಣ, ದೇವರಾಜು, ವಕೀಲರಾದ ರಾಜಶೇಖರ್, ಭೋಜನಾಯ್ಕ, ಮಂಜುನಾಥ್, ಹಳದಪ್ಪ, ಶ್ರೀಧರ್, ಮಂಜು, ಪ್ರಕಾಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net