ಕೆಪಿಎಸ್ ಉಪ ಪ್ರಾಚಾರ್ಯ ಯು.ಸಿದ್ದೇಶ್ ಮಾತನಾಡಿ, ಶಾಲೆ ಪ್ರಾರಂಭೋತ್ಸವದಂದು ಜಿಲ್ಲೆಯಲ್ಲಿ ಕೆಪಿಎಸ್ ಶಾಲೆ ಅತಿ ಹೆಚ್ಚು ದಾಖಲಾತಿಯನ್ನು ಹೊಂದಿದೆ. ಎನ್‌ಸಿಆರ್‌ಟಿ ರಾಜ್ಯ ಪಠ್ಯಕ್ರಮದಲ್ಲಿ ದ್ವಿಭಾಷಾ ಮಾಧ್ಯಮದಲ್ಲಿ ಪಾಠ ನಡೆಯುತ್ತಿವೆ ಎಂದರು. ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬ್ಯಾಗ್ ಮತ್ತು ಲೇಖನ ಸಾಮಗ್ರಿ ವಿತರಿಸಲಾಯಿತು. ಬಿಸಿಯೂಟದ ಜತೆ ಸಿಹಿ ನೀಡಲಾಯಿತು. ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಹೂವು, ತಾಯಂದಿರಿಗೆ ಕುಂಕುಮ ಅರಿಶಿಣ ಹಾಗೂ ಹೂವು ನೀಡಿ ಸ್ವಾಗತಿಸಲಾಯಿತು. ಪ್ರಾಚಾರ್ಯೆ ಶಾರದಾ, ಎಸ್‌ಡಿಎಂಸಿ ಅಧ್ಯಕ್ಷೆ ನೇತ್ರಾವತಿ, ಕಿರಣ್‌ಕುಮಾರ್, ಸಂತೋಷ್, ಮುಖ್ಯಶಿಕ್ಷಕ ಎಚ್.ಎನ್.ರವಿ, ಪಾಪಯ್ಯ, ಗೊಲ್ಲರಹಳ್ಳಿ ಪ್ರಭು, ರಾಮಪ್ಪ, ಮರಡಿ ರವಿಕುಮಾರ್ ಇದ್ದರು.