ಮೆಕ್ಕೆಜೋಳದ ಮೇಲೆ ಅವಲಂಬಿತರಾಗದಿರಿ

 ಮಾಯಕೊಂಡ ಹೋಬಳಿ ಅಣ್ಣಾಪುರ ಗ್ರಾಮದಲ್ಲಿ ಗುರುವಾರ ಮಾಯ ಕೊಂಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ ಬೀರಪ್ಪ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಡಿಯಲ್ಲಿ  ಮುಂಗಾರು ಹಂಗಾಮಿನ ದ್ವಿದಳಧಾನ್ಯ ತೊಗರಿ ಬೀಜವನ್ನು ಉಚಿತವಾಗಿ ರೈತರಿಗೆ ವಿತರಣೆ ಮಾಡಿದರು. crop
ಮಾಯಕೊಂಡ ಹೋಬಳಿ ಅಣ್ಣಾಪುರ ಗ್ರಾಮದಲ್ಲಿ ಗುರುವಾರ ಮಾಯ ಕೊಂಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ ಬೀರಪ್ಪ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಡಿಯಲ್ಲಿ ಮುಂಗಾರು ಹಂಗಾಮಿನ ದ್ವಿದಳಧಾನ್ಯ ತೊಗರಿ ಬೀಜವನ್ನು ಉಚಿತವಾಗಿ ರೈತರಿಗೆ ವಿತರಣೆ ಮಾಡಿದರು. crop
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಅಧಿಕಾರಿ ಕೆ. ಬೀರಪ್ಪ ಸಲಹೆ
  • ರೈತರ ಮನೆ ಬಾಗಿಲಿಗೆ ಬಿತ್ತನೆ ಬೀಜ
ಮಾಯಕೊಂಡ: ಮಳೆಯಾಶ್ರಿತ ಜಮೀನುಗಳಲ್ಲಿ ರೈತರು ದ್ವಿದಳ ಧಾನ್ಯ, ತೊಗರಿ ಹಾಗೂ ಸಿರಿಧಾನ್ಯ ಬೆಳೆಯಬೇಕು ಎಂದು ಕೃಷಿ ಅಧಿಕಾರಿ ಕೆ. ಬೀರಪ್ಪ ಸಲಹೆ ನೀಡಿದರು. crop
ಮಾಯಕೊಂಡ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಅಣ್ಣಾಪುರ, ಪರಶುರಾಂಪುರ, ದಿಂಡದಹಳ್ಳಿ, ದೊಡ್ಡಮಾಗಡಿ ಗ್ರಾಮಗಳಲ್ಲಿ ಗುರುವಾರ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ದ್ವಿದಳ ಧಾನ್ಯ ತೊಗರಿ ಬಿತ್ತನೆ ಬೀಜವನ್ನು ರೈತರಿಗೆ ಉಚಿತವಾಗಿ ವಿತರಿಸಿ ಮಾತನಾಡಿದರು.
ಕೇವಲ ಮೆಕ್ಕೆಜೋಳದ ಮೇಲೆ ಅವಲಂಬಿತರಾಗದೆ, ತೊಗರಿ, ಅವರೆ, ಉದ್ದು ಹಾಗೂ ಸಿರಿಧಾನ್ಯ ಬೆಳೆದಲ್ಲಿ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಬಹುದು ಎಂದು ರೈತರಿಗೆ ತಿಳಿಸಿದರು.
ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ರೈತರು ಮೆಕ್ಕೆಜೋಳ ಕಡಿಮೆ ಮಾಡಿ ಪರ್ಯಾಯ ಬೆಳೆ ಬೆಳೆಯಲು ಮುಂದಾಗಿದ್ದು ರಾಗಿ, ತೊಗರಿ, ಬಿತ್ತನೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ದಿಂಡದಹಳ್ಳಿ, ಅಣ್ಣಾಪುರ, ಪರಶುರಾಂಪುರ, ದೊಡ್ಡಮಾಗಡಿ ಗ್ರಾಮಗಳಲ್ಲಿ ಒಬ್ಬ ರೈತನಿಗೆ 2ಕೆಜಿಯ 2ಪ್ಯಾಕೆಟ್ ತೊಗರಿ ಬಿತ್ತನೆ ಬೀಜ ನೀಡಲಾಗಿದೆ.
ಕೃಷಿ ಇಲಾಖೆ ಶಿಫಾರಸ್ಸು ಮಾಡಿರುವ ಜಿಆರ್‌ಜಿ 152 ಬಿತ್ತನೆ ಬೀಜವನ್ನು ಪ್ರಾಯೋಗಿಕವಾಗಿ ಬಳಸಿ ಉತ್ತಮ ಬೆಳೆ ಬಂದಲ್ಲಿ ಮುಂದಿನ ವರ್ಷ ಮುಂಗಾರು ಹಂಗಾಮಿನಲ್ಲಿ ಈ ಬೀಜವನ್ನೇ ಇಲಾಖೆಯಿಂದ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲಾಗುವುದು ಎಂದರು.
ತೊಗರಿ ಬಿತ್ತನೆ ಬೀಜವನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದು ಬೀಜ ಪಡೆದ ರೈತರು ಉತ್ತಮ ಮಳೆ ಬಂದ ನಂತರ ಬಿತ್ತನೆ ಮಾಡಬೇಕು. ಪ್ರತಿ ಎಕರೆಗೆ 2 ಪ್ಯಾಕೆಟ್ (4 ಕೆಜಿ) ಬಿತ್ತನೆ ಮಾಡುವಂತೆ ತಿಳಿಸಿದರು. ರೈತರಿಂದ ಪಹಣಿ, ಆಧಾರ್ ಕಾರ್ಡ್ ಪಡೆದು ತೊಗರಿ ಬೀಜ ವಿತರಣೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net