ನಾನೂ ವಸತಿ ಸಚಿವನಾಗಿ ಕೆಲಸ ಮಾಡಿದ್ದೇನೆ, ವಸತಿ ಇಲಾಖೆ ನಿಮ್ಮ ಕೈಯಲ್ಲೇ ಇದೆ. ಆನೇಕಲ್ ತಾಲೂಕಿನ ಜಿಗಣಿ, ಸರ್ಜಾಪುರ ಭಾಗದಲ್ಲಿ ನಾವು ಸೂರ್ಯನಗರ 4ನೇ ಹಂತವನ್ನು ಅಭಿವೃದ್ಧಿಪಡಿಸಿ ಪ್ರಧಾನ ಮಂತ್ರಿಗಳ ಟೌನ್‌ಶಿಪ್ ಎಂದು ನಾಮಕರಣ ಮಾಡಿದ್ದೇವೆ. ಅದನ್ನೊಮ್ಮೆ ನೋಡಿ. ಅಲ್ಲಿನ ಜನರ ಭಾವನೆಗೆ ನಾವು ಸ್ಪಂದಿಸಿದ ರೀತಿಯನ್ನು ಗಮನಿಸಿ, ಅದರಂತೆ ಟೌನ್‌ಶಿಪ್ ಮಾಡುವುದು ಒಳ್ಳೆಯದು ಎಂದು ಹೇಳಿದರು.