ರಾಜ್ಯಾದ್ಯಂತ 19ಕ್ಕೆ ಬರಲಿದ್ದಾನೆ ‘ದೊಡ್ಮನ್ಸ’

ದಾವಣಗೆರೆ ಸುದ್ದಿಗೋಷ್ಠಿಯಲ್ಲಿ  ‘ದೊಡ್ಮನ್ಸ’ ಸಿನಿಮಾದ ನಿರ್ದೇಶಕ ಶರತ್‌ಕೃಷ್ಣ, ನಾಯಕಿಯರಾದ ರೇಷ್ಮಾ, ಶಿಲ್ಪಾ ಶಿವಕುಮಾರ್, ರಂಗನಾಥ್ ಇತರರಿದ್ದರು.
ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ‘ದೊಡ್ಮನ್ಸ’ ಸಿನಿಮಾದ ನಿರ್ದೇಶಕ ಶರತ್‌ಕೃಷ್ಣ, ನಾಯಕಿಯರಾದ ರೇಷ್ಮಾ, ಶಿಲ್ಪಾ ಶಿವಕುಮಾರ್, ರಂಗನಾಥ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಟೋ ಚಾಲಕನ ಸುತ್ತಲಿನ ಕಥಾನಕ
  • ಒಳ್ಳೆಯ ಕಂಟೆಂಟ್ ಚಿತ್ರಕ್ಕೆ ಪ್ರೋತ್ಸಾಹಿಸಿ
  • ನಾಯಕನಟ, ನಿರ್ದೇಶಕ ಶರತ್‌ಕೃಷ್ಣ ಹೇಳಿಕೆ
ದಾವಣಗೆರೆ: ‘ದೊಡ್ಮನ್ಸ’ ಸಿನಿಮಾ ಆಟೋ ಚಾಲಕನ ಸುತ್ತ ನಡುವೆ ನಡೆಯುವ ಕತೆ. ಮಧ್ಯಮ ವರ್ಗದ ಹುಡುಗಿ ಇಷ್ಟಪಟ್ಟ ಆಟೋ ಚಾಲಕ ಸವಾಲು ಎದುರಿಸಿ ಪ್ರೀತಿಯನ್ನು ಗೆಲ್ಲುವ ಸಾರಾಂಶವುಳ್ಳ ಸಿನಿಮಾ ಜೂ. 19ರಂದು ತೆರೆ ಕಾಣಲಿದೆ ಎಂದು ನಾಯಕ ನಟ, ನಿರ್ದೇಶಕ ಶರತ್‌ಕೃಷ್ಣ ತಿಳಿಸಿದರು.
ದುಡ್ಡಿದ್ದೋರಲ್ಲ ಗುರು, ದೊಡ್ಡ ಮನಸ್ಸಿದ್ದೋನೆ ದೊಡ್ಮನ್ಸ ಎಂಬ ವಿಶಿಷ್ಟ ಟ್ಯಾಗ್‌ಲೈನ್ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಆಕ್ಷನ್, ರೋಮ್ಯಾಂಟಿಕ್ ಹಾಡುಗಳಿಗೆ ಒತ್ತು ನೀಡಲಾಗಿದೆ. ಬೆಂಗಳೂರು ಅಲ್ಲದೆ ಗುಜರಾತ್‌ನ ಅಹಮದಾಬಾದ್, ಕಚ್ ಪ್ರದೇಶದಲ್ಲಿ ಸುಂದರ ತಾಣಗಳಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದೊಂದು ಅಪ್ಪಟ ಕನ್ನಡದ ಹಾಗೂ ಒಳ್ಳೆಯ ಕಂಟೆಂಟ್ ಇರುವ ಚಿತ್ರ. ಮಲಯಾಳಂ, ತಮಿಳು, ತೆಲುಗಿನ ಪ್ರಭಾವ ಇಲ್ಲ. ಹೊಸಬರ ಪ್ರಯತ್ನಕ್ಕೆ ಕನ್ನಡಿಗರು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ನಾಯಕಿಯರಾಗಿ ರೇಷ್ಮಾ ಮತ್ತು ಶಿಲ್ಪಾ ಶಿವಕುಮಾರ್ ನಟಿಸಿದ್ದು, ಬಲ ರಾಜ್ವಾಡಿ, ಹುಲಿ ಕಾರ್ತಿಕ್ ತಾರಾಗಣದಲ್ಲಿದ್ದಾರೆ. ವೀರ ವೇದಿಕ್ ಕಾಸ್ಮೋಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ ಎಂದು ಹೇಳಿದರು.
ನಾಯಕಿ ರೇಷ್ಮಾ ಮಾತನಾಡಿ ಲವ್ ಯು ಮುದ್ದು ನಂತರ ಇದು ನನ್ನ ಎರಡನೇ ಚಿತ್ರ. ಒಳ್ಳೆಯ ಕಂಟೆಂಟನ್ನು ಕಮರ್ಷಿಯಲ್ ಆಗಿ ತೋರಿಸಲಾಗಿದೆ. ಕನ್ನಡಿಗರು ಚಿತ್ರಮಂದಿರಗಳಲ್ಲೇ ಸಿನಿಮಾ ನೋಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಶಿಲ್ಪಾ ಶಿವಕುಮಾರ್ ಮಾತನಾಡಿ, ಇಡೀ ಕುಟುಂಬದ ಸದಸ್ಯರು ಕುಳಿತು ನೋಡಬಹುದಾದ ಸಿನಿಮಾ ಇದಾಗಿದ್ದು, ಇದರಲ್ಲಿ ಉತ್ತಮ ಸಂದೇಶವಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಮನು ದೇವನಗರಿ, ರಂಗನಾಥ, ಮಂಜುನಾಥ್, ರಾಜಶೇಖರ, ಕುಮಾರ್, ಎಚ್.ವೈ. ಹನುಮಂತ, ಚಂದ್ರಮೌಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net