ವೈದ್ಯರು ಚಿಕಿತ್ಸೆಗೆ ಹಣ ಕೇಳ್ತಾರಾ?

ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಬುಧವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಭೇಟಿ ನೀಡಿ ಪರಿಶೀಲಿಸಿದರು. ಷಣ್ಮುಖಪ್ಪ, ಎಚ್.ಬಿ. ಚನ್ನಪ್ಪ, ಡಾ. ರಾಘವನ್, ಕುಮಾರ್ ಇತರರಿದ್ದರು.
ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಬುಧವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಭೇಟಿ ನೀಡಿ ಪರಿಶೀಲಿಸಿದರು. ಷಣ್ಮುಖಪ್ಪ, ಎಚ್.ಬಿ. ಚನ್ನಪ್ಪ, ಡಾ. ರಾಘವನ್, ಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಆಯೋಗದ ಅಧ್ಯಕ್ಷೆ ಪ್ರಶ್ನೆ
  • ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಭೇಟಿ
ಹೊನ್ನಾಳಿ: ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬುಧವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಭೇಟಿ ನೀಡಿ ಆಸ್ಪತ್ರೆಯ ಸ್ವಚ್ಛತೆ, ಕುಡಿಯುವ ನೀರಿನ ಟ್ಯಾಂಕ್ ಪರಿಶೀಲಿಸಿದರು ಮತ್ತು ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಒಳ ಮತ್ತು ಹೊರ ರೋಗಿಗಳ ಬಳಿ ಮಾತನಾಡಿ, ವೈದ್ಯರು ಚಿಕಿತ್ಸೆ ನೀಡಲು ಹಣ ಕೇಳುತ್ತಾರೆಯೇ? ಔಷಧಗಳನ್ನು ಆಸ್ಪತ್ರೆಯಲ್ಲಿಯೇ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ರೋಗಿಗಳು, ನಮ್ಮ ಬಳಿ ಯಾರೂ ಹಣ ಕೇಳಿಲ್ಲ, ಉಚಿತವಾಗಿ ಔಷಧ ನೀಡುತ್ತಿದ್ದಾರೆ ಎಂದರು.
ಹೆರಿಗೆ ವಾರ್ಡ್‌ಲ್ಲಿದ್ದ ಮಂಜಕ್ಕ ಅವರು, ರೇಷನ್ ಕಾರ್ಡ್ ಮಾಡಿಕೊಡುವಂತೆ ನಾಗಲಕ್ಷ್ಮೀ ಚೌದರಿ ಅವರಲ್ಲಿ ಮನವಿ ಮಾಡಿದಾಗ ರೇಷನ್ ಕಾರ್ಡ್ ಮಾಡಿಕೊಡುವಂತೆ ತಹಸೀಲ್ದಾರ್ ರಾಜೇಶ್ ಅವರಿಗೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ದೂರುಗಳು ಕೇಳಿ ಬಂದಿಲ್ಲ. ಕೆಲವು ವರ್ಷಗಳ ಹಿಂದೆ ತಿಂಗಳಿಗೆ ಐದಾರು ಹೆರಿಗೆ ಆಗುತ್ತಿತ್ತು. ಈಗ 35 ರಿಂದ 40 ಹೆರಿಗೆಗಳು ಆಗುತ್ತಿದೆ ಎಂದರೆ ಇಲ್ಲಿನ ಪ್ರಸೂತಿ ತಜ್ಞರು ಸೂಕ್ತ ಚಿಕಿತ್ಸೆ ನೀಡುತ್ತಿರಬೇಕಲ್ಲವೇ ಎಂದು ಪ್ರಶ್ನಿಸಿದರು.
ಇನ್ನೊಬ್ಬ ಪ್ರಸೂತಿ ತಜ್ಞರು ಹಾಗೂ ತಾಲೂಕು ಕೇಂದ್ರವಾದ ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಸ್ಕಾೃನಿಂಗ್ ಸೆಂಟರ್ ಸ್ಥಾಪಿಸಲು ಇಂದೇ ಆರೋಗ್ಯ ಇಲಾಖೆಗೆ ಪತ್ರ ಬರೆಯುತ್ತೇನೆ. ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಚುಚ್ಚುಮದ್ದು ಕೊಡುವ ಕೊಠಡಿಗಳ ವ್ಯವಸ್ಥೆ ಮಾಡಿ ಎಂದು ವೈದ್ಯರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ವೈದ್ಯರ ಮೇಲೆ ಸುಳ್ಳು ಆರೋಪಗಳನ್ನು ಮಾಡಿದರೆ ಸಹಿಸುವುದಿಲ್ಲ. ಆರೋಪ ಸಾಬೀತಾದರೆ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ. ರಾಜ್ಯದ ಉದ್ದಗಲಕ್ಕೂ ಮಹಿಳೆಯರಿಗೆ ತೊಂದರೆಯಾದಾಗ ನಾನೇ ಖುದ್ದಾಗಿ ಅವರ ಸಮಸ್ಯೆಗಳನ್ನು ಪರಿಹರಿಸಿದ್ದೇನೆ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಾನು ಹುದ್ದೆಗೆ ತಕ್ಕನಾಗಿ ಕೆಲಸ ಮಾಡಿರುವ ತೃಪ್ತಿ ನನಗಿದೆ. ಅಲ್ಲದೇ ಮಹಿಳಾ ಆಯೋಗದಿಂದ ನೊಂದ ಮಹಿಳೆಯರಿಗೆ ಸ್ಪಂದಿಸುವ ಕೆಲಸವಾಗುತ್ತಿದೆ. ಈ ಬಗ್ಗೆ ಅರಿವು ಮುಖ್ಯ ಎಂದರು.
ದಾವಣಗೆರೆ ಡಿಎಚ್‌ಒ ಷಣ್ಮುಖಪ್ಪ, ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ಕಾರ್ಯಕ್ರಮಾಧಿಕಾರಿ ಡಾ. ರಾಘವನ್, ತಹಸೀಲ್ದಾರ್ ರಾಜೇಶ್‌ಕುಮಾರ್, ಹೊನ್ನಾಳಿ ಸರ್ಕಾರಿ ಆಸ್ಪತ್ರೆಯ ಸ್ಥಾನಿಕ ಆಡಳಿತಾಧಿಕಾರಿ ಡಾ. ಹನುಮಂತಪ್ಪ, ತಾಲೂಕು ವೈಧ್ಯಾಧಿಕಾರಿ ಡಾ. ಗಿರೀಶ್, ಡಾ. ಚಂದ್ರಪ್ಪ, ಡಾ. ಮೀನಾ, ಡಾ. ಯೋಗಿತಾ, ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net