ಧರ್ಮಸ್ಥಳ ಸಂಸ್ಥೆ ನಾಡಿನ ಆರ್ಥಿಕಾಭಿವೃದ್ಧಿಯ ಶಕ್ತಿ Billwarchane

ಸುರಹೊನ್ನೆಯಲ್ಲಿ ಶನಿವಾರ ಆಯೋಜಿಸಿದ್ದ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು. ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ತಹಸೀಲ್ದಾರ್ ಎಂ.ಪಿ.ಕವಿರಾಜ್, ಪಿಎಸ್‌ಐ ಹೊಳೆಬಸಪ್ಪ, ಗುಡೇಮನೆ ರುದ್ರೇಶಪ್ಪ, ಯೋಜನಾಧಿಕಾರಿ ಶಾಂತರಾಮ್ ನಾಯಕ್ ಇತರರು ಇದ್ದರು.Billwarchane
ಸುರಹೊನ್ನೆಯಲ್ಲಿ ಶನಿವಾರ ಆಯೋಜಿಸಿದ್ದ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು. ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ತಹಸೀಲ್ದಾರ್ ಎಂ.ಪಿ.ಕವಿರಾಜ್, ಪಿಎಸ್‌ಐ ಹೊಳೆಬಸಪ್ಪ, ಗುಡೇಮನೆ ರುದ್ರೇಶಪ್ಪ, ಯೋಜನಾಧಿಕಾರಿ ಶಾಂತರಾಮ್ ನಾಯಕ್ ಇತರರು ಇದ್ದರು.Billwarchane
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಬಣ್ಣನೆ
  • ವಲಯ ಮಟ್ಟದ ಮಂಜುನಾಥ ಸ್ವಾಮಿ ಸಹಸ್ರ ಬಿಲ್ವಾರ್ಚನೆ
ನ್ಯಾಮತಿ: ಶ್ರೀ ಕ್ಷೇತ್ರ ಧರ್ಮಸ್ಥಳವು ಕೇವಲ ಧಾರ್ಮಿಕ ಕೇಂದ್ರವಾಗಿ ಉಳಿಯದೆ, ಗ್ರಾಮಾಭಿವೃದ್ಧಿ ಸಂಸ್ಥೆಯ ಮೂಲಕ ದುಡಿಯುವ ಕೈಗಳಿಗೆ ಆರ್ಥಿಕ ನೆರವು ನೀಡಿ ನಾಡಿನ ಜನರ ಬದುಕನ್ನು ಹಸನು ಮಾಡುತ್ತಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಸುರಹೊನ್ನೆ ಗ್ರಾಮದ ಬನಶಂಕರಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸವಳಂಗ ವಲಯ, ಮಂಜುನಾಥ ಪೂಜಾ ಸಮಿತಿ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಗ್ರಾಮ ಸುಭೀಕ್ಷೆಗಾಗಿ ವಲಯ ಮಟ್ಟದ ಮಂಜುನಾಥ ಸ್ವಾಮಿ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧರ್ಮಸ್ಥಳವು ಶತಮಾನಗಳಿಂದ ಸತ್ಯ ಮತ್ತು ಧರ್ಮಕ್ಕೆ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕ್ಷೇತ್ರದ ಗೌರವಕ್ಕೆ ಧಕ್ಕೆ ತರಲು ಕೆಲವರು ಹೂಡುತ್ತಿರುವ ಷಡ್ಯಂತ್ರಗಳು ಖಂಡನೀಯ. ಜನರ ಶ್ರದ್ಧೆಯನ್ನು ಹಾಳುಮಾಡಲು ಯಾರು ಬಂದರೂ, ಭಗವಂತ ತನ್ನ ಕ್ಷೇತ್ರದ ಸತ್ಯವನ್ನು ಹೊರಹಾಕುವ ಮೂಲಕ ನ್ಯಾಯಕ್ಕೆ ಜಯ ನೀಡುತ್ತಾನೆ ಎಂದು ಸ್ವಾಮೀಜಿ ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಕ್ಷೇತ್ರದ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ತಹಸೀಲ್ದಾರ್ ಎಂ.ಪಿ. ಕವಿರಾಜ್, ನ್ಯಾಮತಿ ಪಿಎಸ್‌ಐ ಹೊಳೆಬಸಪ್ಪ ಮಾತನಾಡಿದರು. ಸುರಹೊನ್ನೆ ಗ್ರಾ.ಪಂ. ಅಧ್ಯಕ್ಷೆ ಜಯಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತ ಶಿವರುದ್ರಯ್ಯ ಹಿರೇಮಠ, ನಿವೃತ್ತ ಶಿಕ್ಷಕ ಸಿದ್ದಲಿಂಗಪ್ಪ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ದೀಕ್ಷಿತ ಅವರನ್ನು ಗೌರವಿಸಲಾಯಿತು.
ರಾಮಭಟ್ಟರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಜನೆಗಳು ನಡೆದವು. ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಸಾಮೂಹಿಕ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಶಾಂತಾರಾಮ್ ನಾಯಕ್, ವಲಯಾಧಿಕಾರಿ ಸುಮಂಗಳ ಎಂ. ಸಾಲಿ, ಗುಡೇಮನೆ ರುದ್ರೇಶಪ್ಪ, ಯು.ಎನ್. ನಾಗರಾಜ್ ಸೇರಿದಂತೆ ಹಲವು ಮುಖಂಡರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net