ಜ್ಞಾನವಿಕಾಸ ಯೋಜನೆ ಸಮನ್ವಯಾಧಿಕಾರಿ ಸವಿತಾ ಮಾತನಾಡಿ, ಜೀವನದಲ್ಲಿ ಆರೋಗ್ಯವೇ ದೊಡ್ಡ ಆಸ್ತಿ, ಮಹಿಳೆ ಯರು ಉತ್ತಮ ಆರೋಗ್ಯ ಹೊಂದಬೇಕು. ಆಗ ಮಾತ್ರ ನಿಮ್ಮ ಕುಟುಂಬ ಸ್ವಸ್ಥವಾಗಲಿದೆ ಎಂದರು. ಜ್ಞಾನವಿಕಾಸ ಯೋಜನೆ ಮಹಿಳೆಯರಿಗೆ ಸ್ವಾವಲಂಬನೆ, ಆರೋಗ್ಯ, ಕಾನೂನು ಅರಿವು, ಉಳಿತಾ ಜತೆಗೆ ಸರ್ಕಾರದ ಯೋಜನೆಗಳ ಸಂಪೂರ್ಣ ಮಾಹಿತಿ ನೀಡುತ್ತಿದೆ. ಮಹಿಳಾ ಸಂಘ ಮತ್ತು ಗುಂಪು ರಚಿಸಿ ವಿವಿಧ ವಿಷಯಗಳ ತರಬೇತಿ ನೀಡಲಾಗುತ್ತದೆ. ಧಾರವಾಡದಲ್ಲಿ ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಹೇಳಿದರು. ವಲಯದ ಮೇಲ್ವಿಚಾರಕ ಭಾಸ್ಕರ್, ನಲ್ಲೂರು ಗ್ರಾಪಂ ಮಾಜಿ ಸದಸ್ಯ ಶಂಕರ್, ಸೇವಾ ಪ್ರತಿನಿಧಿ ಸುಧಾ, ಒಕ್ಕೂಟದ ಸದಸ್ಯರು ಇದ್ದರು.