ಸಮಾಜಮುಖಿ ಚಟುವಟಿಕೆಯಿಂದ ಅಭಿವೃದ್ಧಿ

ದಾವಣಗೆರೆ ವಿವಿಯಲ್ಲಿ ಶುಕ್ರವಾರ ಸಂಜೆ, ಅಂತರ್ ಕಾಲೇಜು ಮಹಿಳಾ ನಾಯಕತ್ವ ತರಬೇತಿ ಶಿಬಿರವನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಪ್ರೊ. ಬಿ.ಡಿ. ಕುಂಬಾರ, ಡಾ. ರಮೇಶ್ ಸಿ.ಕೆ., ಡಾ. ಶಶಿಧರ ಆರ್, ಡಾ. ಅಶೋಕ್ ಕುಮಾರ್ ವಿ. ಪಾಳೇದ, ಡಾ. ಎನ್.ಸಿ. ಪ್ರಶಾಂತ್ ಇದ್ದರು.
ದಾವಣಗೆರೆ ವಿವಿಯಲ್ಲಿ ಶುಕ್ರವಾರ ಸಂಜೆ, ಅಂತರ್ ಕಾಲೇಜು ಮಹಿಳಾ ನಾಯಕತ್ವ ತರಬೇತಿ ಶಿಬಿರವನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಪ್ರೊ. ಬಿ.ಡಿ. ಕುಂಬಾರ, ಡಾ. ರಮೇಶ್ ಸಿ.ಕೆ., ಡಾ. ಶಶಿಧರ ಆರ್, ಡಾ. ಅಶೋಕ್ ಕುಮಾರ್ ವಿ. ಪಾಳೇದ, ಡಾ. ಎನ್.ಸಿ. ಪ್ರಶಾಂತ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿಕೆ
  • ಮಹಿಳಾ ನಾಯಕತ್ವ ತರಬೇತಿ ಶಿಬಿರ
ದಾವಣಗೆರೆ : ಯುವತಿಯರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಿಭಾಗದಿಂದ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ, 2025-26ನೇ ಸಾಲಿನ ಅಂತರ್ ಕಾಲೇಜು ಮಹಿಳಾ ನಾಯಕತ್ವ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಹಿಳೆಯರ ಸಬಲೀಕರಣ ಹಾಗೂ ನಾಯಕತ್ವ ಗುಣಗಳ ವೃದ್ಧಿಗೆ ಇಂತಹ ಶಿಬಿರಗಳು ಪ್ರಮುಖ ವೇದಿಕೆಯಾಗಿವೆ ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ, ಮಹಿಳಾ ನಾಯಕತ್ವದ ಅಗತ್ಯತೆ ಮತ್ತು ಯುವಜನರಲ್ಲಿ ಸೇವಾ ಮನೋಭಾವ ಬೆಳೆಸುವ ಮಹತ್ವವನ್ನು ತಿಳಿಸಿದರು.
ವಿವಿ ಪರೀಕ್ಷಾಂಗ ಕುಲಸಚಿವ ಡಾ. ರಮೇಶ್ ಸಿ.ಕೆ., ಹಣಕಾಸು ಅಧಿಕಾರಿ ಡಾ. ಶಶಿಧರ ಆರ್. ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಅಶೋಕ್ ಕುಮಾರ್ ವಿ. ಪಾಳೇದ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಉದ್ದೇಶವನ್ನು ಹೇಳಿದರು. ಸಿಂಡಿಕೇಟ್ ಸದಸ್ಯ ಡಾ. ಎನ್.ಸಿ. ಪ್ರಶಾಂತ್ ಇದ್ದರು.
ಹರಿಹರದ ಎಸ್.ಜಿ.ಆರ್.ಕೆ.ಎಸ್ ಮಹಿಳಾ ಮಹಾವಿದ್ಯಾಲಯದ ಕಾರ್ಯಕ್ರಮ ಅಧಿಕಾರಿ ಡಾ. ಪವಿತ್ರ ಎಸ್.ಟಿ. ಪ್ರಾರ್ಥಿಸಿದರು. ಚಿತ್ರದುರ್ಗದ ಮಹಾರಾಜ ಮದಕರಿ ನಾಯಕ ಕಾಲೇಜಿನ ಕಾರ್ಯಕ್ರಮ ಅಧಿಕಾರಿ ಡಾ. ಗಂಗಮ್ಮ ಎನ್.ಟಿ. ವಂದಿಸಿದರು. ಎ.ವಿ. ಕಮಲಮ್ಮ ಕಾಲೇಜಿನ ಡಾ. ಕವಿತಾ ಆರ್.ಜೆ ನಿರೂಪಿಸಿದರು.
ಶಿಬಿರದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಭಾಗವಹಿಸಿ ನಾಯಕತ್ವ, ವ್ಯಕ್ತಿತ್ವ ವಿಕಾಸ ಹಾಗೂ ಸಮಾಜಸೇವೆಗೆ ಸಂಬಂಧಿಸಿದ ತರಬೇತಿ ಪಡೆಯಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net