ಗೋವುಗಳ ಅಕ್ರಮ ಸಾಗಾಟ, ವಧೆ ತಡೆಗೆ ಆಗ್ರಹ

ಗೋವುಗಳ ಅಕ್ರಮ ಸಾಗಾಟ ಮತ್ತು ವಧೆ ತಡೆಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಗುರುವಾರ ಮನವಿಪತ್ರ ಸಲ್ಲಿಸಿದರು. ಪಿ. ಸಾಗರ್, ಶ್ರೀಧರ್, ರಾಜು ದೊಡ್ಮನಿ, ವಿನೋದ್ ರಾಜ್, ಶಿವಕುಮಾರ್ ಪೂಜಾರ್ ಇದ್ದರು.
ಗೋವುಗಳ ಅಕ್ರಮ ಸಾಗಾಟ ಮತ್ತು ವಧೆ ತಡೆಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಗುರುವಾರ ಮನವಿಪತ್ರ ಸಲ್ಲಿಸಿದರು. ಪಿ. ಸಾಗರ್, ಶ್ರೀಧರ್, ರಾಜು ದೊಡ್ಮನಿ, ವಿನೋದ್ ರಾಜ್, ಶಿವಕುಮಾರ್ ಪೂಜಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಡಳಿತಕ್ಕೆ ಶ್ರೀರಾಮಸೇನೆ ಸಂಘಟನೆ ಮನವಿ
  • ರಾತ್ರಿ ವೇಳೆ ಪೊಲೀಸ್ ಪೆಟ್ರೋಲಿಂಗ್ ಜಾರಿಗೊಳಿಸಿ
  • ಅಕ್ರಮ ಕಸಾಯಿಖಾನೆಗಳ ಮೇಲೆ ನಿಗಾ ವಹಿಸಿ
ದಾವಣಗೆರೆ: ಗೋವುಗಳ ಅಕ್ರಮ ಸಾಗಾಟ ಮತ್ತು ವಧೆ ತಡೆ ಸಂಬಂಧ ಜಿಲ್ಲೆಯಾದ್ಯಂತ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಗುರುವಾರ ಮನವಿಪತ್ರ ಸಲ್ಲಿಸಿದರು.
ಅನ್ಯ ಕೋಮಿನ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಗೋವುಗಳ ಅಕ್ರಮ ಸಾಗಾಟ, ಅನಧಿಕೃತ ಕಸಾಯಿಖಾನೆಗಳ ಚಟುವಟಿಕೆಗಳು, ಕಾನೂನುಬಾಹಿರ ಗೋವಧೆ, ಜಾನುವಾರುಗಳ ಕಳ್ಳ ಸಾಗಾಣಿಕೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಬಗ್ಗೆ ಕೂಡಲೆ ಕಾರ್ಯೋನ್ಮುಖವಾಗಬೇಕು ಎಂದು ಕಾರ್ಯಕರ್ತರು ಮನವಿ ಮಾಡಿದರು.
ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಅನ್ವಯ ಗೋವುಗಳ ಅಕ್ರಮ ಸಾಗಾಟ ಮತ್ತು ವಧೆ ಹಾಗೂ ಕಾನೂನುಬಾಹಿರ ಕಸಾಯಿಖಾನೆಗಳ ನಿರ್ವಹಣೆ ಗಂಭೀರ ಶಿಕ್ಷಾರ್ಹ ಅಪರಾಧಗಳಾಗಿವೆ. ಆದಾಗ್ಯೂ ಕೆಲವು ಅಕ್ರಮ ಜಾಲಗಳು ರಾತ್ರಿ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ವಾಹನಗಳ ಮೂಲಕ ಇಂತಹ ಚಟುವಟಿಕೆ ನಡೆಸುತ್ತಿವೆ. ಇದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ಗೋವು ಸಾಗಣೆ ವಾಹನಗಳ ದಾಖಲೆಗಳು, ಪರವಾನಗಿ, ಪಶುವೈದ್ಯಕೀಯ ಪ್ರಮಾಣಪತ್ರ ಹಾಗೂ ಸಾಗಾಣಿಕೆಯ ಕಾನೂನು ಭದ್ರತೆೆಯನ್ನು ಕಟ್ಟುನಿಟ್ಟಾಗಿ ವರಿಶೀಲಿಸಬೇಕು. ಅನಧಿಕೃತ ಕಸಾಯಿಖಾನೆಗಳು, ಅನುಮಾನಾಸ್ಪದ ಗೋದಾಮುಗಳು ಹಾಗೂ ಖಾಸಗಿ ಸ್ಥಳಗಳ ಮೇಲೆ ವಿಶೇಷ ದಾಳಿ ನಡೆಸಬೇಕು.
ಪೊಲೀಸ್, ಪಶುಪಾಲನಾ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಜಂಟಿ ಕಾರ್ಯಪಡೆ ರಚಿಸಿ ನಿರಂತರ ನಿಗಾ ವಹಿಸಬೇಕು. ಕಾನೂನು ಕಾಲ್ಲಂಘನೆ ಮಾಡುವವರ ವಿರುದ್ಧ ತಕ್ಷಣ ಕೇಸ್ ದಾಖಲಿಸಿ ವಾಹನ ವಶಪಡಿಸಿಕೊಳ್ಳಬೇಕು. ರಾತ್ರಿ ಪಾಳಯದಲ್ಲಿ ವಿಶೇಷ ಪೊಲೀಸ್ ಪೆಟ್ರೋಲಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ, ಕಾನೂನುಬಾಹಿರ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪೋಸ್ಟ್‌ಗಳ ಮೇಲೆ ವಿಶೇಷ ನಿಗಾವಹಿಸಬೇಕು. ತಾಲೂಕು ಮಟ್ಟದಲ್ಲಿ ವಿಶೇಷ ನಿಯಂತ್ರಣ ಕೊಠಡಿ ಸ್ಥಾಪಿಸಿ, ಸಾರ್ವಜನಿಕ ದೂರು ಸ್ವೀಕಾರಕ್ಕೆ ಸಹಾಯವಾಣಿ ತೆರೆಯಬೇಕು.
ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ 2023ರ ಅಡಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಶಾಂತಿ ಭಂಗ ತರುವವರ ಸವಿರುದ್ಧ ಕಾನೂನುಬದ್ಧ ನಿರ್ಬಂಧ ಕ್ರಮ ಜರುಗಿಸಬೇಕು. ಎಲ್ಲಾ ಪೊಲೀಸ್ ಠಾಣೆಗಳಿಗೆ ವಿಶೇಷ ಮುನ್ನೆಚ್ಚರಿಕಾ ನಿರ್ದೇಶನ ನೀಡಿ ಪರಿಸ್ಥಿತಿಯನ್ನು ನಿಗಾದಲ್ಲಿರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಸಾಗರ್, ಸಂಘಟನಾ ಕಾರ್ಯದರ್ಶಿ ಶ್ರೀಧರ್, ಜಿಲ್ಲಾ ವಕ್ತಾರ ಆಲೂರು ರಾಜಶೇಖರ್, ಜಿಲ್ಲಾ ಉಸ್ತುವಾರಿ ಶ್ರೀಧರ್ ಕಮ್ಮಾಸ್, ಖಜಾಂಚಿ ಶಿವಕುಮಾರ್ ಪೂಜಾರ್, ನಗರದ ಉಪಾಧ್ಯಕ್ಷ ರಾಜು ದೊಡ್ಮನಿ, ವಿನೋದ್ ರಾಜ್, ಮಧು, ಮಂಜುನಾಥ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net