ಒಡಿಶಾ ಹೋರಾಟಗಾರರ ಬಿಡುಗಡೆಗೆ ಆಗ್ರಹ Protest

ಒಡಿಶಾ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಎಐಕೆಕೆಎಂಎಸ್ ಕಾರ್ಯ ಕರ್ತರು ಮಾಯಕೊಂಡ  ಬಸ್ ನಿಲ್ದಾಣದ ವೃತ್ತದಲ್ಲಿ  ಗುರುವಾರ ಪ್ರತಿಭಟನೆ ನಡೆಸಿದರು. ಪಿ.ಎಸ್. ಸುನಿತ್ ಕುಮಾರ್, ಮಧು ತೊಗಲೇರಿ, ರಾಮಜೋಗಿ ಪ್ರತಾಪ್, ಭೀಮಪ್ಪ, ಭರತ್, ಬಸವರಾಜ್ ಇತರರಿದ್ದರು. Protest
ಒಡಿಶಾ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಎಐಕೆಕೆಎಂಎಸ್ ಕಾರ್ಯ ಕರ್ತರು ಮಾಯಕೊಂಡ ಬಸ್ ನಿಲ್ದಾಣದ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಪಿ.ಎಸ್. ಸುನಿತ್ ಕುಮಾರ್, ಮಧು ತೊಗಲೇರಿ, ರಾಮಜೋಗಿ ಪ್ರತಾಪ್, ಭೀಮಪ್ಪ, ಭರತ್, ಬಸವರಾಜ್ ಇತರರಿದ್ದರು. Protest
Published on
ಮಾಯಕೊಂಡ: ಕೃಷಿ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಪರಭಾರೆ ಮಾಡುವ ಒಡಿಶಾ ಸರ್ಕಾರದ ನೀತಿ ವಿರೋಧಿಸಿ ಬೀದಿಗಿಳಿದ ಅಲ್ಲಿನ ರೈತ ನಾಯಕರ ಬಂಧನ ಖಂಡಿಸಿ, ಬಿಡುಗಡೆಗೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಮಾಯ ಕೊಂಡದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ಗ್ರಾಮದ ಬಸ್ ನಿಲ್ದಾಣದಲ್ಲಿ ಸೇರಿದಿದ್ದ ಕಾರ್ಯಕರ್ತರು ಒಡಿಶಾ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಂಧಿತ ರೈತರನ್ನು ಕೂಡಲೇ ಬಿಡುಗಡೆ ಮಾಡದೆ ಹೋದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಸಂಘಟನೆ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಎಸ್.ಸುನಿತ್ ಕುಮಾರ್ ಮಾತನಾಡಿ, ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ನಾಯಕ ಸತ್ಯವಾನ್ ಮತ್ತು ರಾಜ್ಯಾಧ್ಯಕ್ಷ ಸದಾಶಿವ್ ಸೇರಿ ಇತರ ನಾಯಕರ ಬಂಧನದ ಹಿಂದೆ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕುವ ಹುನ್ನಾರ ಅಡಗಿದೆ ಎಂದು ದೂರಿದರು.
ಫಲವತ್ತಾದ ಕೃಷಿ ಭೂಮಿಯನ್ನು ಕಂಪನಿಗಳಿಗೆ ನೀಡುವ ನಿರ್ಧಾರ ಕೈ ಬಿಡಬೇಕು. ನ.26 ರಂದು ಮಧ್ಯರಾತ್ರಿ ಒಡಿಶಾದ ಜಮಪೋಸಿ ಎಂಬ ಹಳ್ಳಿಯಲ್ಲಿ ಬಂಧಿಸಲಾದ ಮುಖಂಡರನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕೋರಿ ಹಾಗೂ ಖರೀದಿ ಕೇಂದ್ರಗಳನ್ನು ತೆರೆಯಲು ರೈತ ಪರ ಸಂಘಟನೆಗಳು ನಿರಂತರ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.
ಪುಟ್ಟಣ್ಣಯ್ಯ ಬಣದ ರೈತ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಗೌಡ್ರ ಅಶೋಕ್ ಮಾತನಾಡಿ, ರಾಜ್ಯ-ಕೇಂದ್ರ ಸರ್ಕಾರಗಳು ನಿರಂತರವಾಗಿ ರೈತರ ಮೇಲೆ ಗದಾ ಪ್ರಹಾರ ಮಾಡುತ್ತಾ ಬಂದಿವೆ. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಮೀನಮೇಷ ಎಣಿಸುತ್ತಿವೆ ಎಂದು ದೂರಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಮಧು ತೊಗಲೇರಿ ಮಾತನಾಡಿದರು. ಪ್ರತಿಭಟನೆಯಲ್ಲಿ ರಾಮಜೋಗಿ ಪ್ರತಾಪ್, ಭೀಮಪ್ಪ, ಭರತ್, ಬಸವರಾಜ್, ಭೀಮಪ್ಪ, ರೇವಣ್ಣ, ಅಣ್ಣಪ್ಪ, ಸಿದ್ದಪ್ಪ, ನವಲಪ್ಪ, ಮಹಾಂತೇಶ್, ತಿಮ್ಮೇಶ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net