ಖಾಲಿ ಹುದ್ದೆ ಭರ್ತಿಗೆ ಆಗ್ರಹ

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ತಾಲೂಕು ಕಚೇರಿ ಎದುರು ಕರ್ನಾಟಕ ವಿದ್ಯಾರ್ಥಿ ಯುವ ಜನತೆ ಒಕ್ಕೂಟದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮಹಾಲಿಂಗಪ್ಪ ಎಚ್.ಎಂ. ಹೊಳೆ, ಧನ್ಯಕುಮಾರ್, ಆರ್. ಓಬಳೇಶ್, ಶಿವಕುಮಾರ ಸ್ವಾಮಿ ಇತರರಿದ್ದರು.Protest
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ತಾಲೂಕು ಕಚೇರಿ ಎದುರು ಕರ್ನಾಟಕ ವಿದ್ಯಾರ್ಥಿ ಯುವ ಜನತೆ ಒಕ್ಕೂಟದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮಹಾಲಿಂಗಪ್ಪ ಎಚ್.ಎಂ. ಹೊಳೆ, ಧನ್ಯಕುಮಾರ್, ಆರ್. ಓಬಳೇಶ್, ಶಿವಕುಮಾರ ಸ್ವಾಮಿ ಇತರರಿದ್ದರು.Protest
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಕಚೇರಿ ಎದುರು ಪ್ರತಿಭಟನೆ
  • ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಘೋಷಣೆ
ಜಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ವಿದ್ಯಾರ್ಥಿ ಯುವ ಜನತೆ ಒಕ್ಕೂಟದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ಅನೇಕ ವರ್ಷಗಳಿಂದ ನೇಮಕಾತಿಯೇ ಆಗಿಲ್ಲ. ಸರ್ಕಾರ ನೇಮಕಾತಿ ಮಾಡಿಕೊಂಡು ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಮೂಲಕ ನಿರುದ್ಯೋಗವನ್ನು ಹೋಗಲಾಡಿಸಬೇಕು ಎಂದು ಆಗ್ರಹಿಸಿದರು.
ಕರುನಾಡ ನವ ನಿರ್ಮಾಣ ವೇದಿಕೆ ಅಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ. ಹೊಳೆ ಮಾತನಾಡಿ, ಯುವ ಜನರ ಭವಿಷ್ಯವನ್ನು ಕಸಿದುಕೊಂಡಿರುವ ರಾಜ್ಯ ಸರ್ಕಾರದ ಅಸಡ್ಡೆ ಆಡಳಿತಕ್ಕೆ ಧಾರವಾಡದ ಪ್ರತಿಭಟನೆಯೇ ಜೀವಂತ ಸಾಕ್ಷಿ. ಕೇವಲ ಬಣ್ಣ ಬಣ್ಣದ ಮಾತುಗಳು ಮತ್ತು ಉಚಿತ ಭರವಸೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಈಗಲಾದರೂ ಉದ್ಯೋಗ ಕೊಡಿ ಇಲ್ಲವೇ ಯುವಕರಿಗೆ ವಿಷ ಕೊಟ್ಟು ಬಿಡಿ ಎಂದು ಹರಿಹಾಯ್ದರು.
ಒಕ್ಕೂಟದ ಅಧ್ಯಕ್ಷ ಧನ್ಯಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ನೆಪದಲ್ಲಿ ವರ್ಷಗಟ್ಟಲೆ ಯುವಕರನ್ನು ಕಾಯಿಸಿ, ಅವರ ವಯಸ್ಸು, ತಾಳ್ಮೆ ಮತ್ತು ಭವಿಷ್ಯದ ಜತೆ ಆಟವಾಡುತ್ತಿರುವ ಸರ್ಕಾರಗಳ ನಡೆ ಅಕ್ಷಮ್ಯ ಅಪರಾಧವಾಗಿದೆ ಎಂದರು.
ವಕೀಲ ಆರ್. ಓಬಳೇಶ್ ಮಾತನಾಡಿ, ಹಳ್ಳಿಗಳಿಂದ ಬಂದ ಬಡ ಮಕ್ಕಳು ಸಾಲ ಮಾಡಿ, ಊಟ, ನಿದ್ದೆ ಬಿಟ್ಟು ನಗರಗಳಲ್ಲಿ ಹಗಲಿರುಳು ಓದುತ್ತಾರೆ. ಆದರೆ ಇತ್ತ ಅಧಿಕಾರಿಗಳು, ಶಾಸಕರು, ಮಂತ್ರಿಗಳು ಮಾತ್ರ ಏಸಿ ರೂಮ್, ಕಾರು, ಬಂಗಲೆಗಳಲ್ಲಿ ಐಷಾರಾಮಿಯಾಗಿ ಬದುಕುತ್ತಿದ್ದಾರೆ. ವಿದ್ಯಾಭ್ಯಾಸ ಮಾಡಿದವರಿಗೆ ಉದ್ಯೋಗ ಬೇಡವೇ ಎಂದು ಸರ್ಕಾರಗಳ ವಿರುದ್ಧ ಕಿಡಿಕಾರಿದರು.
ಬಿಜೆಪಿ ಮಾಜಿ ತಾಲೂಕಾಧ್ಯಕ್ಷ ಶಿವಕುಮಾರ್ ಸ್ವಾಮಿ, ದಸಂಸ ಸಂಚಾಲಕರಾದ ಮಲೆಮಾಚಿಕೆರೆ ಸತೀಶ್, ಕುಬೇಂದ್ರಪ್ಪ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಅನಂತ್‌ರಾಜ್, ಗೌರಿಪುರ ಸತ್ಯಮೂರ್ತಿ, ಅಶೋಕ್, ಕೊಟ್ರೇಶ್, ವಿದ್ಯಾರ್ಥಿ ಮುಖಂಡರಾದ ತನುಶ್ರೀ ಸೇರಿ ನೂರಾರು ವಿದ್ಯಾರ್ಥಿಗಳು ಇದ್ದರು.

ತಹಸೀಲ್ದಾರ್ ನಡೆಗೆ ಬೇಸರ

ತಾಲೂಕು ಆಡಳಿತ ನಿರ್ವಹಣೆ ಮಾಡುವ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಕಚೇರಿಯಲ್ಲಿ ಕೂತು ಜನರ ಸಮಸ್ಯೆ, ಹೋರಾಟಗಾರರ ಮನವಿಗೆ ಸ್ಪಂದಿಸುವುದಿಲ್ಲ. ಯಾವಾಗಲೂ ಹೊರಗಡೆ ಇದ್ದೇನೆ. ಸೈಟ್‌ನಲ್ಲಿದ್ದೇನೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಕಚೇರಿಯ ಆಡಳಿತಕ್ಕಿಂತ ಖಾಸಗಿ ಆಡಳಿತವೇ ಹೆಚ್ಚಾಗಿದೆ. ಪ್ರತಿಭಟನೆ ನಡೆಸಿದವರ ಮನವಿ ಸ್ವೀಕರಿಸಲು ಗ್ರೇಡ್-2 ತಹಸೀಲ್ದಾರ್ ಮಂಜಾನಂದ ಅವರೇ ನಿಗದಿಯಾಗಿದ್ದಾರೆ ಎಂದು ಗೌರಿಪುರ ಸತ್ಯಮೂರ್ತಿ, ಆರ್ ಓಬಳೇಶ್, ಮಹಾಲಿಂಗಪ್ಪ ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net