ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಸೋಮವಾರ ರೈತರು ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮದ ಪವರ್ ಸ್ಟೇಷನ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗೋಡೆ ಪ್ರಕಾಶ್, ಬಸವರಾಜ್, ಕೆ.ಇ. ಶೇಖರಪ್ಪ, ಮಾರುತಿ, ವಿ.ವಿ. ಸುರೇಶ್, ಜಿ.ಪಿ. ಶಿವಕುಮಾರ್ ಇತರರಿದ್ದರು. protest
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪವರ್ ಸ್ಟೇಷನ್‌ಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ
ಕಚೇರಿ ಮುಖ್ಯಬಾಗಿಲಿಗೆ ಬೀಗ
ಬೇಡಿಕೆ ಈಡೇರಿಸುವ ಭರವಸೆ
ಜಗಳೂರು: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಸೋಮವಾರ ರೈತರು ತಾಲೂಕಿನ ಪಲ್ಲಾಗಟ್ಟೆ ಗ್ರಾಮದ ಪವರ್ ಸ್ಟೇಷನ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಲ್ಲಾಗಟ್ಟೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ರೈತರು ಬೆಳಗ್ಗೆ ಪವರ್ ಸ್ಟೇಷನ್ ಆಗಮಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಕಚೇರಿ ಮುಖ್ಯಬಾಗಿಲಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿಕರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಸರ್ಕಾರಗಳು ವಿಫಲವಾಗಿವೆ. ಅನ್ನ ಬೆಳೆಯಲು ರೈತರು ಬೇಕು. ಆದರೆ ಸಮಸ್ಯೆಗಳನ್ನು ಪರಿಹರಿಸಲು ಮಾತ್ರ ಸಾಧ್ಯವಾಗುವುದಿಲ್ಲ. ಅವರು ಸಿಡಿದರೆ ಯಾವ ಸರ್ಕಾರವೂ ಉಳಿಯುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ವೇಳೆ ರೈತ ಮುಖಂಡ ಗೋಡೆ ಪ್ರಕಾಶ್ ಮಾತನಾಡಿ, ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಮೂರು ತಾಸು, ರಾತ್ರಿ ನಾಲ್ಕು ತಾಸು ವಿದ್ಯುತ್ ಪೂರೈಕೆ ಮಾಡುವುದಾಗಿ ಬೆಸ್ಕಾಂ ಇಲಾಖೆ ಹೇಳಿದೆ. ಆದರೆ ನಮ್ಮ ಭಾಗದಲ್ಲಿ ಹಗಲಿನಲ್ಲಿ ಕೇವಲ ಒಂದೂವರೆ ತಾಸು ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಜಮೀನುಗಳಲ್ಲಿರುವ ಅಡಕೆ, ಬಾಳೆ, ತೆಂಗು, ಪಪ್ಪಾಯಿ ಸೇರಿ ತರಕಾರಿ ಬೆಳೆಗಳಿಗೆ ಸರಿಯಾಗಿ ನೀರು ಹಾಯಿಸಲು ಆಗುತ್ತಿಲ್ಲ. ಬಹುತೇಕ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದರು.
ಈ ಕುರಿತು ಮೂರ್ನಾಲ್ಕು ಬಾರಿ ಪ್ರತಿಭಟನೆ ಮಾಡಲಾಗಿದೆ. ಇನ್ನು ಮುಂದೆ ಸರಿಪಡಿಸುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಮಾತು ತಪ್ಪಿದ್ದಾರೆ ಎಂದು ಆರೋಪಿಸಿದರು.
ರೈತ ಮುಖಂಡ ಬಸವರಾಜ್ ಮಾತನಾಡಿ, ಮಧ್ಯರಾತ್ರಿ ಕೃಷಿಕರು ಜಮೀನಿನಲ್ಲಿ ನೀರು ಹಾಯಿಸುವ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿದೆ. ಕೆಲವು ಗ್ರಾಮಗಳಲ್ಲಿ ವಿಷಜಂತುಗಳ ಕಡಿತದಿಂದ ಹಲವಾರು ರೈತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ದರಿಂದ ಬೆಸ್ಕಾಂ ಹಗಲು ವೇಳೆ ಏಳು ಗಂಟೆ ತ್ರೀ ಫೇಸ್ ಮತ್ತು ರಾತ್ರಿ ನಿರಂತರವಾಗಿ ಟು ಫೇಸ್ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬೆಸ್ಕಾಂ ಎಇಇ ಮಲ್ಲಿಕಾರ್ಜುನ್ ಭೇಟಿ ನೀಡಿ ಸಮಸ್ಯೆ ಆಲಿಸಿ, ಕೆಲ ತಾಂತ್ರಿಕ ತೊಂದರೆಯಿಂದ ಸಮಸ್ಯೆಯಾಗಿದೆ. ಆದಷ್ಟು ಬೇಗ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆಯನ್ನು ವಾಪಸು ತೆಗೆದುಕೊಂಡರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಇ. ಶೇಖರಪ್ಪ, ಮುಖಂಡರಾದ ಮಾರುತಿ, ವಿ.ವಿ. ಸುರೇಶ್, ಜಿ.ಪಿ. ಶಿವಕುಮಾರ್, ನಾಗರಾಜ್, ರಾಕೇಶ್, ಅಂಜಿನಪ್ಪ, ದಿದ್ದಿಗಿ ಪ್ರಕಾಶ್, ನಾಗಭೂಷಣ್ ಮತ್ತಿತರರಿದ್ದರು.