ಹೊನ್ನಾಳಿ ತಾಲೂಕಿನ ಸೋಮನಮಲ್ಲಾಪುರಕ್ಕೆ ಕೃಷಿ ಉಪ ನಿರ್ದೇಶಕಿ ಹಂಸವೇಣಿ ಹಾಗೂ ಕೃಷಿ ಅಧಿಕಾರಿ ಅತಿಕ್ ವುಲ್ಲಾ ಭೇಟಿ ನೀಡಿ ಬೆಳೆಗಳನ್ನು ಪರಿಶೀಲಿಸಿದರು. ರೈತ ಷಣ್ಮುಖಪ್ಪ ಇದ್ದರು. agriculture
ಹೊನ್ನಾಳಿ: ಸಸ್ಯ ಸಾಂದ್ರತೆ ಶೇ.10ರಷ್ಟು ಕಡಿಮೆ ಇದ್ದರೂ ಕಳೆದ ಒಂದು ವಾರದಿಂದ ಬಂದ ಮಳೆಯಿಂದಾಗಿ ಬೆಳೆಗಳು ಚೇತರಿಕೆ ಕಂಡಿವೆ ಎಂದು ಕೃಷಿ ಉಪ ನಿರ್ದೇಶಕಿ ಹಂಸವೇಣಿ ತಿಳಿಸಿದರು. agriculture
ತಾಲೂಕಿನ ಸೋಮನಮಲ್ಲಾಪುರ, ದೊಡ್ಡೇರಹಳ್ಳಿ, ಚಿಕ್ಕೇರಹಳ್ಳಿ, ಸೊರಟೂರು ಇನ್ನಿತರ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಮೆಕ್ಕೆಜೋಳ, ಶೇಂಗಾ, ತೊಗರಿ, ಅವರೆ ಇತರೆ ದ್ವಿದಳ ಧಾನ್ಯಗಳ ಬೆಳೆ ಪರಿಶೀಲಿಸಿ ಮಾತನಾಡಿದರು.
ಹಲವು ದಿನಗಳಿಂದ ನಿರಂತರವಾಗಿ ಮೋಡ ಕವಿದ ವಾತಾವರಣ ಇರುವುದರಿಂದ ಅಲ್ಲಲ್ಲಿ ಕೀಟಬಾಧೆೆ ಕಂಡು ಬಂದಿದ್ದು ರೈತರು ಬೆಳೆಗಳ ರಕ್ಷಣೆಗೆ ಮುಂದಾಗಬೇಕು ಎಂದರು.
ಮೆಕ್ಕೆಜೋಳದಲ್ಲಿ ಲದ್ದಿ ಹುಳುವಿನ ಬಾಧೆ ನಿಯಂತ್ರಿಸಲು ಎಮಾಮೆಕ್ಟಿನ್ ಬೆನ್ಜೋಯೆಟ್ 5% ಎಸ್‌ಜಿ 0.5 ಗ್ರಾಂ ಪ್ರತಿ ಲೀಟರ್ ನೀರಿಗೆ ಅಥವಾ ಸ್ಪ್ಯನ್ಟೋರಾಮ್ 11.7% ಎಸ್‌ಸಿ 0.5 ಮೀ.ಲಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳಗ್ಗೆ ಅಥವಾ ಸಂಜೆ ಬೆಳೆಗಳಿಗೆ ಸಿಂಪಡಿಸಿದರೆ ಸೈನಿಕ ಹುಳುಗಳನ್ನು ಹತೋಟಿಗೆ ತರಬಹುದು ಎಂದರು.
ಮೆಕ್ಕೆಜೋಳಕ್ಕೆ ಪರ್ಯಾಯವಾಗಿ ದ್ವಿದಳ ಧಾನ್ಯ ಬೆಳೆಯಿರಿ, ಹವಾಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆದರೆ ಮಾತ್ರ ಹೆಚ್ಚು ಲಾಭ ಪಡೆಯಬಹುದು ಎಂದು ರೈತರಿಗೆ ಕಿವಿಮಾತು ಹೇಳಿದರು.
ಕೃಷಿ ಅಧಿಕಾರಿ ಅತೀಕ್ ವುಲ್ಲಾ ಮಾತನಾಡಿ, ವಾತಾವರಣದಲ್ಲಿ ಪದೆ ಪದೇ ವ್ಯತ್ಯಾಸವಾಗುವುದರಿಂದ ಹತ್ತಿ, ದ್ವಿದಳ ಧಾನ್ಯ ಬೆಳೆಗಳಲ್ಲಿ ಕೀಟ ಬಾಧೆ ಹೆಚ್ಚಾಗುತ್ತಿದೆ. ರೈತರು ಬೆಳಗಳ ಮೇಲೆ ಜಾಗೃತಿವಹಿಸಿ ಎಂದರು.