ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಿಪಿಐ ಕಿಡಿ

ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಸಿಪಿಐ ಮುಖಂಡರು ದಾವಣಗೆರೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಆವರಗೆರೆ ಚಂದ್ರು, ಎಚ್.ಜಿ.ಉಮೇಶ್, ಕೆರನಳ್ಳಿ ರಾಜು, ಐರಣಿ ಚಂದ್ರು, ಸರೋಜಾ, ರಮೇಶ್ ದಾಸರ್, ಲಕ್ಷ್ಮಣ್ ಇತರರಿದ್ದರು.
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಸಿಪಿಐ ಮುಖಂಡರು ದಾವಣಗೆರೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಆವರಗೆರೆ ಚಂದ್ರು, ಎಚ್.ಜಿ.ಉಮೇಶ್, ಕೆರನಳ್ಳಿ ರಾಜು, ಐರಣಿ ಚಂದ್ರು, ಸರೋಜಾ, ರಮೇಶ್ ದಾಸರ್, ಲಕ್ಷ್ಮಣ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆಯಲ್ಲಿ ಕಾರ್ಯಕರ್ತರ ಪ್ರತಿಭಟನೆ
  • ಯುದ್ಧದ ನೆಪದಲ್ಲಿ ಜನರಿಗೆ ಬರೆ ಬೇಡ
  • ಮಿತವ್ಯಯಕ್ಕೆ ಪ್ರಧಾನಿ ಕರೆ ಅಸಮಂಜಸ
ದಾವಣಗೆರೆ: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ತಾಲೂಕು ಮಂಡಳಿ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಅಶೋಕ ರಸ್ತೆಯ ಪಂಪಾಪತಿ ಭವನದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಮುಖಂಡರು, ಬಹಿರಂಗ ಸಭೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹಕಾರ್ಯದರ್ಶಿ ಎಚ್.ಜಿ.ಉಮೇಶ್, ತಾಲೂಕು ಕಾರ್ಯದರ್ಶಿ ಕೆರನಳ್ಳಿ ರಾಜು, ತಾಲೂಕು ಮಂಡಳಿ ಖಜಾಂಚಿ ಐರಣಿ ಚಂದ್ರು ಮಾತನಾಡಿದರು.
ಕೇಂದ್ರ ಸರ್ಕಾರವು ಮಧ್ಯಪ್ರಾಚ್ಯದ ಯುದ್ಧದ ನೆಪವೊಡ್ಡಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಬೆಲೆ ಏರಿಸಿ ದೇಶದ ಜನರನ್ನು ಆರ್ಥಿಕ ಸಂಕಷ್ಟಕೀಡು ಮಾಡಿದೆ. ಜನರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಸರ್ಕಾರ, ಇನ್ನೊಂದೆಡೆ ಮಿತವ್ಯಯ ಮಾಡುವಂತೆ ಕರೆ ನೀಡಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಇಂದಿನ ಬೆಲೆ ಏರಿಕೆ ನಡುವೆಯೂ ಶಿಕ್ಷಣ ಶುಲ್ಕ, ಆರೋಗ್ಯದ ವೆಚ್ಚ ಭರಿಸಲಾಗದೆ ಅನೇಕರು ತತ್ತರಿಸುತ್ತಿದ್ದಾರೆ. ಯುವಕರಿಗೆ ಉದ್ಯೋಗ ಸಮಸ್ಯೆ ಇದೆ. ಹೀಗಾಗಿ ಏರಿಕೆ ಮಾಡಿದ ಇಂಧನ ಹಾಗೂ ಎಲ್‌ಪಿಜಿ ದರವನ್ನು ಕೂಡಲೆ ಇಳಿಸಬೇಕು ಎಂದು ಆಗ್ರಹಿಸಿದರು.
ಪಕ್ಷದ ಮುಖಂಡರಾದ ಜಿ. ಯಲ್ಲಪ್ಪ, ಆರ್. ದಾದಾಪೀರ್, ಎ. ತಿಪ್ಪೇಶ್, ಚಿನ್ನಪ್ಪ, ರಮೇಶ್ ದಾಸರ್, ಶೇಖರನಾಯಕ, ವಿ ಲಕ್ಷ್ಮಣ, ಯರಗುಂಟೆ ಸುರೇಶ, ಪಿ. ಷಣ್ಮುಖಸ್ವಾಮಿ, ಸರೋಜಾ, ಎಚ್.ಪಿ. ಉಮಾಪತಿ, ಶರಣಪ್ಪ ಶ್ಯಾಗಲೆ, ಹನುಮಂತಪ್ಪ ಇತರರು ಪಾಲ್ಗೊಂಡಿದ್ದರು. ನಂತರ ದಾವಣಗೆರೆ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಅಲ್ಲಿನ ಅಧಿಕಾರಿಗಳ ಮೂಲಕ ಪ್ರಧಾನಿ ಅವರಿಗೆ ಮನವಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net