ಆರ್ಥಿಕತೆಗೆ ಬೆನ್ನೆಲುಬು ಸಹಕಾರಿ ರಂಗ Cooperative Sector

ಜಗಳೂರು ತಾಲೂಕು ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ  ಹಮ್ಮಿಕೊಂಡಿದ್ದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ   ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ರುದ್ರಮುನಿ ಇತರರು ಇದ್ದರು. saptah
ಜಗಳೂರು ತಾಲೂಕು ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ರುದ್ರಮುನಿ ಇತರರು ಇದ್ದರು. saptah
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದೇವೇಂದ್ರಪ್ಪ ಹೇಳಿಕೆ
  • ಚಿಕ್ಕಮಲ್ಲನಹೊಳೆಯಲ್ಲಿ ಸಪ್ತಾಹ ಆಚರಣೆ
  • ಸಹಕಾರಿ ಸಂಘಗಳಿಗಿಲ್ಲ ಸದೃಢ ಕಟ್ಟಡ
ಜಗಳೂರು: ದೇಶದ ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಚಳವಳಿ ಬಹುಮುಖ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ದೇಶದ ಕಟ್ಟ ಕಡೆಯ ವ್ಯಕ್ತಿಯನ್ನು ಸ್ವಾವಲಂಬಿಯಾಗಿ, ಸಬಲವಾಗಿ ನಿಲ್ಲುವಂತೆ ಮಾಡುವುದಕ್ಕೆ ಸಹಕಾರಿ ಸಂಘಗಳ ಪಾತ್ರ ಪ್ರಮುಖವಾಗಿದೆ. ಅಲ್ಲದೆ ದೇಶದ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಕ್ಷೇತ್ರ ಬೆನ್ನೆಲುಬಾಗಿ ನಿಂತಿದೆ ಎಂದರು.
ಸಹಕಾರಿ ಸಂಘಗಳಿಗೆ ಸದೃಢವಾದ ಕಟ್ಟಡಗಳಿಲ್ಲ, ಕಚೇರಿ ವ್ಯವಸ್ಥೆಗಳಿಲ್ಲ. ಹೀಗೆ ನೂರಾರು ಸಮಸ್ಯೆಗಳಿವೆ. ಡಿಸೆಂಬರ್‌ನಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಈ ಸಮಸ್ಯೆಗಳ ಕುರಿತು ಸಹಕಾರಿ ಸಚಿವರ ಜತೆ ಮಾತನಾಡುತ್ತೇನೆ ಎಂದು ತಿಳಿಸಿದರು.
57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಜಗಳೂರು ಭಾಗದಲ್ಲಿ ಹೊನ್ನಾಳಿ, ಚನ್ನಗಿರಿ ಮೀರಿಸುವಂತೆ ಅಡಕೆ ಬೆಳೆ ವಿಸ್ತಾರವಾಗುತ್ತಿದೆ. ಮುಂಬರುವ ದಿನಗಳಲ್ಲಿ ಕೆರೆ ನೀರನ್ನು ರೈತರು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗುವುದು ಎಂದರು.
ಸಹಕಾರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕರಾದ ಸುರೇಶ್, ಚೇತನ್, ಷಣ್ಮುಖಪ್ಪ, ಕೆಚ್ಚೇನಹಳ್ಳಿ ದೀಪಕ್ ಇತರರಿದ್ದರು.

ಶಾಲಾ ಆವರಣ ಬಳಕೆಗೆ ಸಾರ್ವಜನಿಕರ ಆಕ್ರೋಶ

ಚಿಕ್ಕಮಲ್ಲನಹೊಳೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಶಿಕ್ಷಣ ಇಲಾಖೆ, ಸಿಡಿಪಿಒ, ಗ್ರಾಪಂ ಸೇರಿ ಸಂಬಂಧಿಸಿದ ಯಾವುದೇ ಇಲಾಖೆಗಳ ಅನುಮತಿ ಪಡೆಯದೆ ಸರ್ಕಾರಿ ಶಾಲಾ ಮತ್ತು ಅಂಗನವಾಡಿ ಕೇಂದ್ರದ ಆವರಣದಲ್ಲಿ ಸಹಕಾರ ಸಪ್ತಾಹ ಆಚರಣೆಗೆ ಬೃಹತ್ ಶಾಮಿಯಾನ ಮತ್ತು ಧ್ವನಿ ವರ್ಧಕ ಹಾಕಿಕೊಂಡು ದಿನವಿಡೀ ಕಾರ್ಯಕ್ರಮ ಮಾಡಿ ಮಕ್ಕಳ ಕಲಿಕೆಗೆ ತೊಂದರೆ ಪಡಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net