ನರೇಗಾ ಮರುನಾಮಕರಣ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

 ವಿಬಿ ಜಿ ರಾಮ್ ಜಿ ಯೋಜನೆಗೆ ವಿರೋಧಿಸಿ ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಶನಿವಾರ ಹಮ್ಮಿಕೊಂಡಿದ್ದ, ಪ್ರತಿಭಟನೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಅನಿತಾಬಾಯಿ ಮಾಲತೇಶ್, ಎಚ್.ಬಿ.ಮಂಜಪ್ಪ, ದಿನೇಶ್ ಕೆ. ಶೆಟ್ಟಿ, ಡಿ.ಬಸವರಾಜ್, ಕೆ.ಜಿ. ಶಿವಕುಮಾರ್ ಇತರರಿದ್ದರು.  ---
ವಿಬಿ ಜಿ ರಾಮ್ ಜಿ ಯೋಜನೆಗೆ ವಿರೋಧಿಸಿ ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಶನಿವಾರ ಹಮ್ಮಿಕೊಂಡಿದ್ದ, ಪ್ರತಿಭಟನೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಅನಿತಾಬಾಯಿ ಮಾಲತೇಶ್, ಎಚ್.ಬಿ.ಮಂಜಪ್ಪ, ದಿನೇಶ್ ಕೆ. ಶೆಟ್ಟಿ, ಡಿ.ಬಸವರಾಜ್, ಕೆ.ಜಿ. ಶಿವಕುಮಾರ್ ಇತರರಿದ್ದರು. ---
Published on

ಪ್ರಮುಖ ಮುಖ್ಯಾಂಶಗಳು

  • ಗಾಂಧಿ ಸಿದ್ಧಾಂತದ ಹತ್ಯೆಗೂ ಕೇಂದ್ರದ ಸಂಚು
  • ಗ್ರಾಪಂಗಳಿಗೆ ಅಧಿಕಾರ ಕಳಚುವ ಸಾಧ್ಯತೆ
  • ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕಿಡಿ
ದಾವಣಗೆರೆ: ಕೇಂದ್ರ ಸರ್ಕಾರ, ನರೇಗಾ ಯೋಜನೆ ಮರುನಾಮಕರಣದ ಮೂಲಕ ಗಾಂಧೀಜಿ ಅವರ ಸಿದ್ಧಾಂತ ಹತ್ಯೆಗೆ ಹುನ್ನಾರ ನಡೆಸಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ವಿಬಿ ಜಿ ರಾಮ್ ಜಿ ಯೋಜನೆಗೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಜಯದೇವ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಭಾರತದ ಕನಸು, ನಿಜವಾದ ಆತ್ಮ ಗ್ರಾಮೀಣ ಭಾಗದಲ್ಲಿದೆ ಎಂದು ಗಾಂಧೀಜಿ ಹೇಳಿದ್ದರು. ಇದೀಗ ನರೇಂದ್ರ ಮೋದಿ ಸರ್ಕಾರ, ಅವರ ಹೆಸರನ್ನು ಕೈಬಿಡುವುದು ಮಾತ್ರವಲ್ಲದೆ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಮನರೇಗಾ ಯೋಜನೆಯ ಆತ್ಮವನ್ನೇ ಬದಲಾಯಿಸುವ ಪ್ರಯತ್ನ ನಡೆಸಿದೆ. ಇದಕ್ಕೆ ಕಾಂಗ್ರೆಸ್, ಇಂಡಿ ಒಕ್ಕೂಟದ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಸಿಎಂ ಸಿದ್ದರಾಮಯ್ಯ ಕೂಡ ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂದರು.
ಹೊಸ ಕಾನೂನಿನಲ್ಲಿ 60-40ರ ಅನುಪಾತದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಅನುದಾನ ನೀಡಲು ಪ್ರಸ್ತಾಪಿಸಲಾಗಿದೆ. ಪ್ರತಿ 100 ರೂ. ನಲ್ಲಿ ಫಲಾನುಭವಿಗೆ 13 ಪೈಸೆ ಸಿಗುತ್ತಿರುವ ಈ ದಿನದಲ್ಲಿ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚಲಿದೆ.
ಹೊಸ ಯೋಜನೆಯಡಿ ಎಲ್ಲ ತೀರ್ಮಾನವೂ ದೆಹಲಿ ಮಟ್ಟದಲ್ಲಿ ತೀರ್ಮಾನವಾಗುವುದರಿಂದ ಪಂಚಾಯ್ತಿಗಳು ಇನ್ನು ಮುಂದೆ ಅನುಷ್ಠಾನದ ಭಾಗವಾಗಲಿದ್ದು ಅವರಿಗೆ ನೀಡಿದ್ದ ಸ್ವತಂತ್ರ ಅಧಿಕಾರ ಇಲ್ಲವಾಗುವ ಆತಂಕ ಕಾಂಗ್ರೆಸ್‌ಗಿದೆ ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ ಗೋಡ್ಸೆ ಮನಸ್ಥಿತಿಯ ಸರ್ಕಾರ ಈ ದೇಶದಲ್ಲಿದೆ. ಬಿಜೆಪಿ, ಆರೆಸ್ಸೆಸ್‌ನವರಿಗೆ ಶಾಂತಿ-ಅಭಿವೃದ್ಧಿ ಬೇಕಿಲ್ಲ. ಇವರಿಗೆ ಗಾಂಧೀಜಿ, ಅಂಬೇಡ್ಕರ್ ಆದರ್ಶವಲ್ಲ. ಹೀಗಾಗಿ ವಿರೋಧ ಮಾಡಲಾಗುತ್ತಿದೆ ಎಂದು ಹೇಳಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಗುಲಾಮರು ಸೇರಿ ಮನರೇಗಾ ಯೋಜನೆಯ ಸ್ವರೂಪ ಬದಲಾಯಿಸಿ, ಯೋಜನೆಯ ಕತ್ತು ಹಿಸುಕಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಲು ಹೊರಟಿದ್ದಾರೆ ಎಂದು ಖಂಡಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಎಚ್.ಬಿ.ಮಂಜಪ್ಪ,ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಎ. ನಾಗರಾಜ್, ಜಾಕಿರ್ ಅಲಿ, ಮೈನುದ್ದೀನ್, ವರುಣ್, ಅಲಿ ರೆಹಮತ್, ನಂಜಾನಾಯ್ಕ, ಅನಿತಾಬಾಯಿ ಮಾಲತೇಶ್, ಮಂಜಮ್ಮ, ಮಂಗಳಮ್ಮ, ಎಸ್.ಮಲ್ಲಿಕಾರ್ಜುನ್, ಪ್ರವೀಣ್, ಮುಜಾಹಿದ್, ಎಲ್.ಎಂ.ಎಚ್. ಸಾಗರ್, ಲಿಯಾಕತ್ ಅಲಿ, ನವೀನ್ ನಲ್ವಾಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net