ಕೇಂದ್ರದ ಅಭಿವೃದ್ಧಿ ಸಹಿಸದೆ ಕಾಂಗ್ರೆಸ್ ಸುಳ್ಳು ಆರೋಪ

ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಶನಿವಾರ ವಿಬಿ-ಜಿ ರಾಮ್-ಜಿ ಬಗ್ಗೆ ಕೂಲಿ ಕಾರ್ಮಿಕರ ಜತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಂವಾದ ನಡೆಸಿದರು. ಅರಕೆರೆ ನಾಗರಾಜ್, ಜೆ.ಕೆ. ಸುರೇಶ್, ಎಸ್.ಎಸ್. ಬೀರಪ್ಪ, ಸಿದ್ದಪ್ಪ, ಉಮೇಶ್ ಇತರರಿದ್ದರು.awareness program
ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಶನಿವಾರ ವಿಬಿ-ಜಿ ರಾಮ್-ಜಿ ಬಗ್ಗೆ ಕೂಲಿ ಕಾರ್ಮಿಕರ ಜತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಂವಾದ ನಡೆಸಿದರು. ಅರಕೆರೆ ನಾಗರಾಜ್, ಜೆ.ಕೆ. ಸುರೇಶ್, ಎಸ್.ಎಸ್. ಬೀರಪ್ಪ, ಸಿದ್ದಪ್ಪ, ಉಮೇಶ್ ಇತರರಿದ್ದರು.awareness program
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ
  • ವಿಬಿ-ಜಿ ರಾಮ್-ಜಿ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮ
ಹೊನ್ನಾಳಿ: ಕೇಂದ್ರ ಸರ್ಕಾರದ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್, ಕೇಂದ್ರದ ವಿರುದ್ಧ ಪೂರ್ವಗ್ರಹ ಪೀಡಿತವಾಗಿ ಸುಖಾಸುಮ್ಮನೆ ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಶನಿವಾರ ವಿಬಿ-ಜಿ ರಾಮ್-ಜಿ ಯೋಜನೆ ಕುರಿತು ಕೂಲಿ ಕಾರ್ಮಿಕರ ಜತೆ ಸಂವಾದ ಹಾಗೂ ಜಾಗೃತಿ ಮೂಡಿಸಿ ಮಾತನಾಡಿದರು.
ವಿಶ್ವದ ಆರ್ಥಿಕ ಶಕ್ತಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದ ಭಾರತವನ್ನು ಪ್ರಧಾನಿ ಮೋದಿ ಮೂರನೇ ಸ್ಥಾನಕ್ಕೆ ತಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸಿದ್ದಾರೆ ಎಂದರು.
ವಿಬಿ-ಜಿ ರಾಮ್-ಜಿ ಹೊಸ ಕಾಯ್ದೆಯು ಕೂಲಿ ಕಾರ್ಮಿಕರಿಗೆ ಹೆಚ್ಚಿನ ಲಾಭ ತಂದುಕೊಡಲಿದೆ. ಈ ಕ್ಷೇತ್ರದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರ ನಿಗ್ರಹಿಸಲು ತಂಬ್ ಸ್ಕಾೃನ್‌ನಂತಹ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲಾಗಿದೆ. ಕೆಲಸ ಮಾಡಿದವರಿಗೆ ಮಾತ್ರ ವೇತನ ಸಿಗುವಂತೆ ಮಾಡಿ, ಕಾರ್ಮಿಕರ ಬದುಕು ಹಸನಾಗಿಸುವುದು ಈ ಯೋಜನೆಯ ಉದ್ದೇಶ. ಆದರೆ ಕಾಂಗ್ರೆಸ್ ಇದನ್ನು ವಿರೋಧಿಸುವ ಮೂಲಕ ತಾವು ಭ್ರಷ್ಟಾಚಾರದ ಪರ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಹೇಳಿದರು.
40 ಪರ್ಸೆಂಟ್ ಸರ್ಕಾರ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇಂದು ರಾಜ್ಯದ ಅಭಿವೃದ್ಧಿಯನ್ನು ಮರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇವಲ ಕುರ್ಚಿ ಕಿತ್ತಾಟದಲ್ಲಿ ತೊಡಗಿದ್ದಾರೆಯೇ ಹೊರತು ಜನಪರ ಕೆಲಸಗಳಿಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ನಿಕಟಪೂರ್ವ ಅಧ್ಯಕ್ಷ ಜೆ.ಕೆ. ಸುರೇಶ್, ಎಸ್.ಎಸ್. ಬೀರಪ್ಪ, ಗ್ರಾಮದ ಮುಖಂಡರಾದ ಸಿದ್ದಪ್ಪ, ಉಮೇಶ್, ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net