ಜಿಲ್ಲೆಯ 156 ಪಿಎಸಿಎಸ್‌ಗಳನ್ನು ಸಿಎಸ್‌ಸಿಗೆ ಸಂಪರ್ಕಿಸಲಾಗಿದ್ದು, ಅವುಗಳಲ್ಲಿ 76 ಕೇಂದ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳ ಮೂಲಕ ಗ್ರಾಮೀಣ ಜನರಿಗೆ ಎಲ್‌ಐಸಿ ಪ್ರೀಮಿಯಂ ಪಾವತಿ, ವಿದ್ಯುತ್ ಬಿಲ್ ಪಾವತಿ, ಬೆಳೆ ವಿಮೆ, ಜೀವ ಹಾಗೂ ವಾಹನ ವಿಮೆ, ಆರ್‌ಟಿಸಿ ಸೇರಿ ವಿವಿಧ ಭೂ ದಾಖಲೆ ಸೇವೆಗಳು ಲಭ್ಯವಾಗುತ್ತಿವೆ ಎಂದು ಸರ್ಕಾರ ತಿಳಿಸಿದೆ.