

ಪ್ರಮುಖ ಮುಖ್ಯಾಂಶಗಳು
ಪದ್ಮಶ್ರೀ ಗೌರವ ನನಗೆ ಅನಿರೀಕ್ಷಿತ. ಈ ಕ್ಷೇತ್ರದಲ್ಲಿ 40 ವರ್ಷಗಳ ನನ್ನ ಸೇವೆಯನ್ನು ಗುರುತಿಸಿದ್ದಕ್ಕೆ ಸಂತೋಷವಾಗಿದೆ. ನನ್ನ ಈ ಪಯಣದಲ್ಲಿ ಬೆಂಬಲಕ್ಕೆ ನಿಂತ ಎಲ್ಲರಿಗೂ ಈ ಗೌರವ ಸಲ್ಲಬೇಕು. ನಮ್ಮ ಸಂಸ್ಥೆಗೆ ಬೆನ್ನೆಲುಬಾಗಿದ್ದ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಬಹಳ ನೆನಪಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಚಾರ ಮಾಡಿ, ಹಿಮೊಫಿಲಿಯಾ ರೋಗಿಗಳಿಗೆ ಇನ್ನಷ್ಟು ಸೌಲಭ್ಯ, ವೈದ್ಯಕೀಯ ಸಮುದಾಯಕ್ಕೆ ಈ ರೋಗದ ಚಿಕಿತ್ಸೆಯ ತರಬೇತಿ ನೀಡುವ ಉದ್ದೇಶವಿದೆ.