ಮತದಾನ ಪ್ರಕ್ರಿಯೆ ಹಬ್ಬದಂತೆ ಸಂಭ್ರಮಿಸಿ

ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಯುವ ಮತದಾರನೊಬ್ಬನಿಗೆ ಚುನಾವಣಾ ಗುರುತಿನ ಚೀಟಿ ನೀಡಿದರು. ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಶೀಲವಂತ ಶಿವಕುಮಾರ್, ರೇಣುಕಾ, ಮಲ್ಲನಾಯ್ಕ, ಬಿ.ಎಚ್. ಉದಯಕುಮಾರ್ ಇತರರಿದ್ದರು.
ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಯುವ ಮತದಾರನೊಬ್ಬನಿಗೆ ಚುನಾವಣಾ ಗುರುತಿನ ಚೀಟಿ ನೀಡಿದರು. ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಶೀಲವಂತ ಶಿವಕುಮಾರ್, ರೇಣುಕಾ, ಮಲ್ಲನಾಯ್ಕ, ಬಿ.ಎಚ್. ಉದಯಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಕಿವಿಮಾತು
  • ನೆವ ಹೇಳಿ ಹಕ್ಕು ಚಲಾವಣೆಗೆ ನಿರಾಕರಿಸದಿರಿ
  • ಜಿಲ್ಲಾಡಳಿತದಿಂದ ಮತದಾರರ ದಿನಾಚರಣೆ
ದಾವಣಗೆರೆ: ಮತದಾನ, ದೇಶದ ಅಭಿವೃದ್ಧಿಯ ದಿಕ್ಸೂಚಿಯಾಗಿದ್ದು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಸಂಭ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮತದಾರರು ತಮ್ಮ ಹಕ್ಕು ಚಲಾವಣೆಯಿಂದ ಹೊರಗುಳಿಯಬಾರದು ಎಂದು ಹೇಳಿದರು.
ರಾಷ್ಟ್ರ ಪ್ರಗತಿಗೆ ಮತದಾನವೇ ಮೆಟ್ಟಿಲು. ಮತದಾನದ ದಿನವನ್ನು ರಜೆಯೆಂದು ಭಾವಿಸದೆ, ರಾಷ್ಟ್ರೀಯ ಹಬ್ಬದಂತೆ ಸಂಭ್ರಮದಿಂದ ಆಚರಿಸಬೇಕು. ಬಡತನ, ನಿರುದ್ಯೋಗ ಮತ್ತು ತಿಳಿಸಿದರು.
ಮತ ಚಲಾಯಿಸಿದಾಗ ಸುಭದ್ರ ಹಾಗೂ ಸ್ವಚ್ಛ ಸರ್ಕಾರ ನಿರ್ಮಾಣ ಮಾಡಲು ಸಾಧ್ಯ. ನಮ್ಮ ಆಯ್ಕೆಯ ಜನಪ್ರತಿನಿಧಿ ಸೂಕ್ತವಲ್ಲವಾದಲ್ಲಿ ಅಭಿವೃದ್ಧಿಶೂನ್ಯ ಆಗಲಿದೆ. ಯೋಗ್ಯರನ್ನು ಆಯ್ಕೆ ಮಾಡಿದಾಗ ಸಮಾಜ, ರಾಜ್ಯ ತಂತಾನೇ ಬದಲಾವಣೆ ಕಾಣಲಿದೆ ಎಂದು ಹೇಳಿದರು.
ಮತ ಪಟ್ಟಿಯಲ್ಲಿ ಹೆಸರುಗಳನ್ನು ಪರಿಶೀಲಿಸುವುದು ಪ್ರತಿ ನಾಗರಿಕನ ಕರ್ತವ್ಯ. ಶ್ರೀಮಂತ, ಬಡವ ಎಲ್ಲರಿಗೂ ಸಮಾನ ಅವಕಾಶವಿದೆ. ಮುಂದುವರಿದ ದೇಶಗಳಲ್ಲಿ ಹಿಂದೆಲ್ಲ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಸಮಾನತೆಯ ಹಕ್ಕನ್ನು ಭಾರತದಲ್ಲಿ ಮಾತ್ರ ಕಾಣಬಹುದು ಎಂದರು.
ಭಾರತೀಯರಲ್ಲಿ ರಾಷ್ಟ್ರಪ್ರೇಮ ಇದ್ದ ಕಾರಣಕ್ಕೆ 200 ವರ್ಷಗಳ ಸತತ ಹೋರಾಟದ ಮೂಲಕ ಸ್ವಾತಂತ್ರೃ ಪಡೆಯಲು ಸಾಧ್ಯವಾಯಿತು. ಜಾತಿ- ಧರ್ಮ ಎಲ್ಲವನ್ನೂ ಮೀರಿಸಿದ್ದು ರಾಷ್ಟ್ರೀಯತೆ. ಅದನ್ನು ನಾವು ಮೈಗೂಡಿಸಿಕೊಳ್ಳಬೇಕು. ರಾಷ್ಟ್ರೀಯ ಮನೋಭಾವವಿದ್ದವರು ಬಡತನ, ನಿರುದ್ಯೋಗ, ಮೂಲ ಸೌಕರ್ಯ ಸಮಸ್ಯೆಗಳ ನೆಪದಲ್ಲಿ ಮತದಾನದ ಹಕ್ಕಿನಿಂದ ದೂರ ಉಳಿಯಬಾರದು ಎಂದು ಹೇಳಿದರು.
ಮತ ಪಟ್ಟಿಯಲ್ಲಿ ಹೆಸರುಗಳನ್ನು ಪರಿಶೀಲಿಸುವುದು ಪ್ರತಿ ನಾಗರಿಕನ ಕರ್ತವ್ಯ. ಶ್ರೀಮಂತ, ಬಡವ ಎಲ್ಲರಿಗೂ ಸಮಾನ ಅವಕಾಶವಿದೆ. ಮುಂದುವರಿದ ದೇಶಗಳಲ್ಲಿ ಹಿಂದೆಲ್ಲ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಸಮಾನತೆಯ ಹಕ್ಕನ್ನು ಭಾರತದಲ್ಲಿ ಮಾತ್ರ ಕಾಣಬಹುದು ಎಂದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ ಚುನಾವಣಾ ಆಯೋಗ ವಿಶ್ವದಲ್ಲೇ ಶಕ್ತಿಶಾಲಿಯಾಗಿದೆ. 1950ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗವು ಶಾಶ್ವತ ಮತ್ತು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದ್ದೇ ಈ ಆಯೋಗ ಎಂದರು.
ಎಲ್ಲಿಯವರಿಗೆ ನಮ್ಮ ಹಕ್ಕು ತಿಳಿಯುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಮೌಲ್ಯ ತಿಳಿಯವುದಿಲ್ಲ. ಈ ಮೌಲ್ಯ ತಿಳಿಯಲು ಮತದಾನ ಮಾಡಬೇಕು. ಮತದಾನ ಎಲ್ಲರ ಜವಾಬ್ದಾರಿ. ಭಾರತದಲ್ಲಿ ಶೇ. 60 ರಿಂದ 70 ರಷ್ಟು ಮತದಾನವಾಗುತ್ತಿದೆ. ಶೇ.20 ರಷ್ಟು ಯುವ ಮತದಾರರಿದ್ದಾರೆ . ಆದರೆ ಉಳಿದವರಲ್ಲಿ ಮತದಾನದ ನಿರಾಸಕ್ತಿಯೇಕೆ ಎಂಬುದನ್ನು ಗ್ರಹಿಸಬೇಕಿದೆ ಎಂದು ತಿಳಿಸಿದರು.
ಎಲ್ಲಾ ಸೌಲಭ್ಯಗಳು ನಮ್ಮ ಬಳಿ ಇರಬೇಕೆಂದು ಯುವಕರು ಆಸೆ ಪಡುತ್ತಾರೆ. ಪ್ರಜಾಪ್ರಭುತ್ವ ಶಕ್ತಿಶಾಲಿಯಾಗಿಸಲು ಮತದಾನಕ್ಕೆ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ವಿಜೇತರಾದ ಮೆಳ್ಳೇಕಟ್ಟೆ ಸರ್ಕಾರಿ ಶಾಲೆಯ ಎಂ. ವಿಜಯ್, ಚನ್ನಗಿರಿ ನವಚೇತನ ಶಾಲೆಯ ಜಿ.ಎಸ್. ಅನಿಕೇತನ, ನಿಟುವಳ್ಳಿ ಪಿಎಂಶ್ರೀ ಸರ್ಕಾರಿ ಶಾಲೆಯ ಮೇಘನಾ ಬಹುಮಾನ ಪಡೆದರು.
ಪದವಿ ಪೂರ್ವ ವಿಭಾಗದಲ್ಲಿ ಮೋತಿ ವೀರಪ್ಪ ಕಾಲೇಜಿನ ಕೀರ್ತಿ, ಹೊನ್ನಾಳಿ ಸರ್ಕಾರಿ ಪ.ಪೂ. ಕಾಲೇಜಿನ ಎಚ್.ಮಂಜುನಾಥ, ನ್ಯಾಮತಿ ಬಾಲಕರ ಸರ್ಕಾರಿ ಪ.ಪೂ ಕಾಲೇಜಿನ ಎಂ. ಕಿರಣ, ಪದವಿ ವಿಭಾಗದಲ್ಲಿ ಮಾಯಕೊಂಡ ಬಸವೇಶ್ವರ ಪ್ರಥಮ ದರ್ಜೆ ಕಾಲೇಜು ವಿ.ಅನುಷಾ, ಹೊನ್ನಾಳಿ ಸರ್ಕಾರಿ ಕಾಲೇಜಿನ ಜಿ.ಬಿ.ಸುಶ್ಮಿತಾ, ದಾವಣಗೆರೆ ಎಸ್‌ಬಿಎಸ್ ಕಾಲೇಜಿನ ಎಂ. ಮೇಘನಾಬಹುಮಾನ ಹಾಗೂ ಪ್ರಶಸ್ತಿಪತ್ರ ಪಡೆದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪ ಕಾರ್ಯದರ್ಶಿ ಮಮತಾ ಗೌಡರ್ ಅವರು ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಪಾಲಿಕೆ ಆಯುಕ್ತೆ ರೇಣುಕಾ, ಜಿಪಂ ಅಧಿಕಾರಿ ಮಲ್ಲನಾಯ್ಕ, ಬಿ.ಎಚ್. ಉದಯಕುಮಾರ್, ನಗರಾಭಿವೃದ್ಧಿ ಕೋಶದ ಅಧಿಕಾರಿ ಮಹಾಂತೇಶ್, ಮಾಜಿ ಮೇಯರ್ ಕೆ. ಚಮನ್‌ಸಾಬ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net