ಹರಿಹರ, ಹಿಂಡಸಘಟ್ಟ, ಕುಕ್ಕುವಾಡ, ಹೊನ್ನಾಳಿ, ಹರಪನಹಳ್ಳಿ ಸೇರಿ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ನಿವೇಶನ, ಚರಂಡಿ ನಿರ್ಮಾಣ, ಬಸ್ ನಿಲ್ದಾಣ, ದೇವಸ್ಥಾನಕ್ಕೆ ಅನುದಾನ ಸೇರಿ ವಿವಿಧ ಬೇಡಿಕೆಗಳಿಗೆ ಮನವಿ ಸಲ್ಲಿಸಿದರು. ಜನರ ಅಹವಾಲು ಆಲಿಸಿದ ಸಂಸದರು ಸಂಬಂಧಿಸಿದ ಇಲಾಖೆಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.