ಹತ್ತು ದಿನದೊಳಗೆ ಬೂತ್ ಸಮಿತಿಗಳ ರಚನೆ

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ದಾವಣಗೆರೆ ದಕ್ಷಿಣ ಮತ್ತು ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಯೂರ್ ಜಯಕುಮಾರ್ ಮಾತನಾಡಿದರು. ಎಚ್.ಬಿ. ಮಂಜಪ್ಪ, ಅಯೂಬ್ ಪೈಲ್ವಾನ್, ಜಿ.ಸಿ. ನಿಂಗಪ್ಪ, ದಿನೇಶ ಕೆ. ಶೆಟ್ಟಿ, ವಿಜಯ ಕುಮಾರ್, ಅನಿತಾಬಾಯಿ, ಮುದೇಗೌಡ್ರ ಗಿರೀಶ್, ಎಸ್. ಮಲ್ಲಿಕಾರ್ಜುನ್, ಎ. ನಾಗರಾಜ ಇದ್ದರು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ದಾವಣಗೆರೆ ದಕ್ಷಿಣ ಮತ್ತು ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಯೂರ್ ಜಯಕುಮಾರ್ ಮಾತನಾಡಿದರು. ಎಚ್.ಬಿ. ಮಂಜಪ್ಪ, ಅಯೂಬ್ ಪೈಲ್ವಾನ್, ಜಿ.ಸಿ. ನಿಂಗಪ್ಪ, ದಿನೇಶ ಕೆ. ಶೆಟ್ಟಿ, ವಿಜಯ ಕುಮಾರ್, ಅನಿತಾಬಾಯಿ, ಮುದೇಗೌಡ್ರ ಗಿರೀಶ್, ಎಸ್. ಮಲ್ಲಿಕಾರ್ಜುನ್, ಎ. ನಾಗರಾಜ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಯೂರ್ ಜಯಕುಮಾರ್ ಸೂಚನೆ
  • ಚುನಾವಣೆ ಪೂರ್ವಭಾವಿ ಸಭೆ
  • ಜಿಲ್ಲಾ ಕಾಂಗ್ರೆಸ್ ಕಚೇರಿ
ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ 10 ದಿನದೊಳಗೆ ಬೂತ್ ಸಮಿತಿಗಳನ್ನು ರಚಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ದಾವಣಗೆರೆ ದಕ್ಷಿಣ ಮತ್ತು ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕ್ಷೇತ್ರದಲ್ಲಿ 284 ಬೂತ್‌ಗಳಿವೆ. ನಗರದಲ್ಲಿ 235, ಗ್ರಾಮೀಣ ಭಾಗದಲ್ಲಿ 49 ಬೂತ್‌ಗಳಿವೆ. 7 ಗ್ರಾಮ ಪಂಚಾಯಿತಿಗಳು ಬರುತ್ತವೆ. ಪ್ರತಿ ಬೂತ್‌ನಲ್ಲಿ ಸಮಿತಿಗಳನ್ನು ರಚಿಸಿ 20 ಸದಸ್ಯರನ್ನು ನೇಮಕ ಮಾಡಬೇಕು. ಎಲ್ಲ ಜಾತಿಗಳ ಸಮೀಕರಣ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಬೂತ್ ಸಮಿತಿ ಸದಸ್ಯರಿಗೆ ತಮ್ಮ ಭಾಗದ ಮತದಾರರ ಸಂಖ್ಯೆ ಸೇರಿ ಸಪೂರ್ಣ ಮಾಹಿತಿ ಇರಬೇಕು. ಬೂತ್ ಕಮಿಟಿಗಳಿಗೆ ಒಟ್ಟು 5700 ಸದಸ್ಯರಾಗುತ್ತಾರೆ. ಇಷ್ಟು ಸಂಖ್ಯೆಯ ಸದಸ್ಯರು ಇದ್ದಾಗ ಸಂಘಟನೆಗೆ ಬಲ ಬರುತ್ತದೆ. ಉಪ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು ಎಂದು ಹೇಳಿದರು.
ನಗರ ಪ್ರದೇಶದಲ್ಲಿ 19 ವಾರ್ಡ್‌ಗಳು ಬರುತ್ತವೆ. ಅವುಗಳನ್ನು ವಿವಿಧ ವಲಯಗಳಾಗಿ ವಿಂಗಡಿಸಿ ವಲಯ ಸಂಯೋಜಕರನ್ನು ನೇಮಕ ಮಾಡಬೇಕು. ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಗೆದ್ದಿದೆ. ಈ ಬಾರಿ ವಿಧಾನ ಪರಿಷತ್‌ನ ಪದವೀಧರರ ಕ್ಷೇತ್ರವನ್ನೂ ಕಾಂಗ್ರೆಸ್ ತನ್ನದಾಗಿಸಿಕೊಳ್ಳಲಿದೆ ಎಂದು ಹೇಳಿದರು.
ಶಾಸಕರು, ಮುಖಂಡರು ಸೇರಿ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಹೆಚ್ಚು ಸಂಖ್ಯೆಯ ಪದವೀಧರರ ನೋಂದಣಿ ಮಾಡಿಸಬೇಕು. ಬಿಜೆಪಿ ಅಧಿಕಾರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಪದವೀಧರರಿಗೆ ನಿರುದ್ಯೋಗ ನಿರ್ಮೂಲನೆ ಸೇರಿ ಯಾವುದೇ ಕೆಲಸ ಆಗಿಲ್ಲ. ಸಮಿತಿಗಳನ್ನು ರಚಿಸಿ ಪದವೀಧರರ ಬಳಿಗೆ ಹೋಗಿ ಅವರಿಗೆ ಅರಿವು ಮೂಡಿಸಬೇಕು ಎಂದರು.
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಕಾಂಗ್ರೆಸ್ 2005 ರಲ್ಲಿ ಜಾರಿಗೆ ತಂದಿತು. ಯೋಜನೆಗೆ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಇಡಲಾಗಿತ್ತು.
ಆರ್‌ಎಸ್‌ಎಸ್ 1948 ರಲ್ಲಿ ಮಹಾತ್ಮ ಗಾಂಧೀಜಿ ಅವರ ಹತ್ಯೆ ಮಾಡಿತ್ತು. ಈಗ ಬಿಜೆಪಿಯವರು ಉದ್ಯೋಗ ಖಾತ್ರಿ ಯೋಜನೆಗೆ ಗಾಂಧೀಜಿ ಅವರ ಹೆಸರನ್ನು ತೆಗೆದು ಹಾಕುವ ಮೂಲಕ ಗಾಂಧೀಜಿ ಅವರನ್ನು 2ನೇ ಬಾರಿಗೆ ಹತ್ಯೆ ಮಾಡಿದೆ. ಯೋಜನೆಯ ಹೆಸರನ್ನು ‘ನಾಥೂರಾಮ್‌ಜಿ’ ಎಂದು ಹೆಸರಿಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಯೂಬ್ ಪೈಲ್ವಾನ್, ಜಿ.ಸಿ. ನಿಂಗಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮುಖಂಡರಾದ ವಿಜಯ ಕುಮಾರ್, ಅನಿತಾಬಾಯಿ, ಮುದೇಗೌಡ್ರ ಗಿರೀಶ್, ಎಸ್. ಮಲ್ಲಿಕಾರ್ಜುನ್, ಎ. ನಾಗರಾಜ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net