ದಾವಣಗೆರೆ: ಅಧಿಕ ದೇಹತೂಕವುಳ್ಳ ಕೆಎಸ್‌ಆರ್‌ಪಿ ಸಿಬ್ಬಂದಿಗೆ ಮುನಿರಾಬಾದ್, ಬೆಳಗಾವಿಯ ವಿಶೇಷ ತರಬೇತಿ ಕೇಂದ್ರಗಳಲ್ಲಿ (ದೇಹದ ಗರಿಷ್ಠ ಸೂಚ್ಯಂಕ)ಬಿಎಂಐ ತರಬೇತಿ ನೀಡಲಾಗಿ 10ರಿಂದ 14 ಕೆಜಿಯಷ್ಟು ತೂಕ ಇಳಿಸುವ ಕೆಲಸ ಮಾಡಿದ್ದೇವೆ. ಇದನ್ನು ಎಲ್ಲ ಜಿಲ್ಲೆಗಳಲ್ಲೂ ಆರಂಭಿಸುವ ಚಿಂತನೆ ಇದೆ ಎಂದು ಕೆಎಸ್‌ಆರ್‌ಪಿ ಪೊಲೀಸ್ ಮಹಾನಿರೀಕ್ಷಕ ಸಂದೀಪ್ ಪಾಟೀಲ್ ಹೇಳಿದರು.