ಪಾರದರ್ಶಕ ಎಸ್‌ಐಆರ್‌ಗೆ ಬಿಎಲ್‌ಎ ಪಾತ್ರ ಪ್ರಮುಖ SIR

ಹರಿಹರದಲ್ಲಿ ಶನಿವಾರ ಬಿಎಲ್‌ಎಗಳಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಾಗಾರದಲ್ಲಿ ಮತದಾರರ ನೋಂದಣಾಧಿಕಾರಿ ದೂಡಾ ಆಯುಕ್ತೆ ರೇಣುಕಾ ಮಾತನಾಡಿದರು. ತಹಸೀಲ್ದಾರ್ ಜಿ. ಸಂತೋಷ್ ಕುಮಾರ್, ಬಿ.ಬಿ. ರೇವಣ ನಾಯ್ಕ ಇದ್ದರು. SIR
ಹರಿಹರದಲ್ಲಿ ಶನಿವಾರ ಬಿಎಲ್‌ಎಗಳಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಾಗಾರದಲ್ಲಿ ಮತದಾರರ ನೋಂದಣಾಧಿಕಾರಿ ದೂಡಾ ಆಯುಕ್ತೆ ರೇಣುಕಾ ಮಾತನಾಡಿದರು. ತಹಸೀಲ್ದಾರ್ ಜಿ. ಸಂತೋಷ್ ಕುಮಾರ್, ಬಿ.ಬಿ. ರೇವಣ ನಾಯ್ಕ ಇದ್ದರು. SIR
Published on

ಪ್ರಮುಖ ಮುಖ್ಯಾಂಶಗಳು

  • ದೂಡಾ ಆಯುಕ್ತೆ ರೇಣುಕಾ ಹೇಳಿಕೆ
ಹರಿಹರ: ಪಾರದರ್ಶಕ ಮತ್ತು ದೋಷರಹಿತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳ (ಬಿಎಲ್‌ಎ) ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಮತದಾರರ ನೋಂದಣಾಧಿಕಾರಿ ದೂಡಾ ಆಯುಕ್ತೆ ರೇಣುಕಾ ಹೇಳಿದರು. SIR
ನಗರದಲ್ಲಿ ತಾಲೂಕು ಆಡಳಿತದಿಂದ ಶನಿವಾರ ನಡೆಸಿದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಬಿಎಲ್‌ಎಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು. ಅರ್ಹರು ಮತಪಟ್ಟಿಯಿಂದ ಹೊರ ಗುಳಿಯಬಾರದು. ಹಾಗೇಯೇ ದೋಷ ಗಳಿರುವ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲು ಸಹಕರಿಸಬೇಕು ಎಂದರು.
ಜೂ.30ರಿಂದ ಜು.29ರವರೆಗೆ ಮತದಾರರ ಪಟ್ಟಿಗಳ ಪರಿಷ್ಕರಣೆ ನಡೆಯಲಿದೆ. ಬಿಎಲ್‌ಒಗಳ ಜತೆ ಪಕ್ಷಗಳಿಂದ ನೇಮಕವಾದ ಬಿಎಲ್‌ಎಗಳು ಸಹಕಾರ ನೀಡಬೇಕು. 10 ವರ್ಷಕೊಮ್ಮೆ ಆಯೋಗ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಮಾಡುತ್ತಿದೆ. 2002ರಿಂದ ಪರಿಷ್ಕರಣೆ ಮಾಡದೆ ಇರುವ ಕಾರಣ ಇಷ್ಟು ಮಹತ್ವ ಪಡೆದಿದೆ ಎಂದರು. ರಾಜಕೀಯ ಪಕ್ಷಗಳ ಬಿಎಲ್‌ಎಗಳು ಮಾತನಾಡಿ, ಮತದಾರರರಿಗೆ ಎಷ್ಟು ಅರ್ಜಿ ನಿಡುತ್ತೀರಿ, ಪರಿಷ್ಕರಣೆೆ ಮುಖ್ಯ ಉದ್ದೇಶ, ಯಾವ ರೀತಿ ನಾವು ಸಹಕರಿಸಬೇಕು. ಬಿಎಲ್‌ಒ ತಪ್ಪು ಮಾಡಿದರೆ ಏನು ಕ್ರಮ? ಗ್ರಾಮೀಣ ಭಾಗದ ಜನರಿಗೆ ಮಾಹಿತಿಯಿಲ್ಲ, ಆದ್ದರಿಂದ ಜಾಗೃತಿ ಮೂಡಿಸಿ. ಕೆಲಸ ಅರಸಿ ಬೇರೆಡೆ ಹೋದವರ ಮಾಹಿತಿ ಹೇಗೆ ನೀಡಬೇಕು ಎಂಬ ಹಲವು ಪ್ರಶ್ನೆಗಳನ್ನು ಕೇಳಿದರು.
ಪ್ರತಿಕ್ರಿಯೆ ನೀಡಿದ ರೇಣುಕಾ, ಇಲಾಖೆಯಿಂದ ರಾಜಕೀಯ ಪಕ್ಷಗಳಿಗೆ ಬಿಎಲ್‌ಒಗಳ ಪಟ್ಟಿ ನೀಡಲಾಗಿದೆ. ದೇಶದಲ್ಲಿ 1951 ರಿಂದ 2002ರವರೆಗೆ ಹತ್ತು ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಈ ಭಾರಿ 2002-2026ರವರೆಗೆ ಪರಿಷ್ಕರಣೆ ಮಾಡಲಾಗುತ್ತಿದೆ. ಮತದಾನದಿಂದ ಯಾರೂ ವಂಚಿತರಾಗಬಾರದು ಎಂಬುದೇ ಮೂಲ ಉದ್ದೇಶ. ದೋಷ ಪೂರಿತ ಹೆಸರುಗಳನ್ನು ಕೈಬಿಡಲಾಗು ವುದು. ಅರ್ಹರನ್ನು ಸೇರ್ಪಡೆ ಮಾಡಲಾಗುವುದು ಎಂದರು.
ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ಚುನಾವಣಾ ಶಾಖೆಯ ಶಿರಸ್ತೇದಾರ ಅಶೋಕ್, ಸಿಬ್ಬಂದಿ ಸೋಮಶೇಖರ್, ಉಮೇಶ್, ಕಂದಾಯ ಇಲಾಖೆಯ ಸಮೀರ್ ಅಹಮದ್, ಆನಂದ, ಎಚ್.ಜಿ. ಹೇಮಂತ್‌ಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್, ಮುಖ್ಯಶಿಕ್ಷಕ ರೇವಣನಾಯ್ಕ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net