ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಚಾಟಿಯೇಟು

ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಸರಿ ಪಡೆ ದಾವಣಗೆರೆಯಲ್ಲಿ ಆರಂಭಿಸಿದ ಹೋರಾಟದ ವೇಳೆ ಎತ್ತಿನ ಬಂಡಿ ಮೇಲೆ ಬಾರುಕೋಲು ಹಿಡಿದು ಭಾಗಿಯಾಗಿದ್ದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಎಂಎಲ್ಸಿ ಸಿ.ಟಿ. ರವಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆಯಿಂದ ಹೋರಾಟಕ್ಕೆ ಚಾಲನೆ
  • ಬಾರುಕೋಲು ಬೀಸಿದ ವಿಜಯೇಂದ್ರ
  • ವಿಧಾನಸೌಧ ತಲುಪಲಿದೆ ಹೋರಾಟದ ಕಿಚ್ಚು
ದಾವಣಗೆರೆ: ರೈತರ ಕಾಳಜಿ ಮರೆತ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾಟಿಯೇಟು ನೀಡಲು ಸಜ್ಜಾಗಿರುವ ಬಿಜೆಪಿ, ನಾನಾ ಹಂತದ ಹೋರಾಟಕ್ಕೆ ಮಂಗಳವಾರ ಮೆಕ್ಕೆಜೋಳ ಕಣಜ ದಾವಣಗೆರೆಯಿಂದಲೇ ಚಾಲನೆ ನೀಡಿದೆ. ಅಂಬೇಡ್ಕರ್ ವೃತ್ತದಲ್ಲಿ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಎತ್ತಿನ ಬಂಡಿಯೇರಿ, ಸಾಂಕೇತಿಕವಾಗಿ ಬಾರುಕೋಲು ಬೀಸಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೋರಾಟಕ್ಕೆ ಕಿಚ್ಚು ಹಚ್ಚಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net