ಬಿಜೆಪಿಯಲ್ಲಿದೆ ಪ್ರಶಿಕ್ಷಣ ನೀಡುವ ಪದ್ಧತಿ politics

ಹರಿಹರದ ಎಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಎಂ. ಸಿದ್ದೇಶ್ವರ, ಬಿ.ಪಿ. ಹರೀಶ್, ಎಸ್.ಎಂ. ವೀರೇಶ್ ಹನಗವಾಡಿ, ಲಿಂಗರಾಜ್ ಹಿಂಡಸಘಟ್ಟ ಇತರರಿದ್ದರು. politics
ಹರಿಹರದ ಎಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಎಂ. ಸಿದ್ದೇಶ್ವರ, ಬಿ.ಪಿ. ಹರೀಶ್, ಎಸ್.ಎಂ. ವೀರೇಶ್ ಹನಗವಾಡಿ, ಲಿಂಗರಾಜ್ ಹಿಂಡಸಘಟ್ಟ ಇತರರಿದ್ದರು. politics
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗ ವಿಭಾಗದ ಶಾರೀರಿಕ ಪ್ರಮುಖ ಪ್ರಕಾಶ ಹರಳಹಳ್ಳಿ ಹೇಳಿಕೆ
ಹರಿಹರ: ರಾಜಕೀಯ ಪಕ್ಷದಲ್ಲಿ ಕಾರ್ಯಕರ್ತರಿಗೆ ಪ್ರಶಿಕ್ಷಣ ನೀಡುವ ಪದ್ಧತಿ ಬಿಜೆಪಿಯಲ್ಲಿ ಮಾತ್ರವಿದೆ. ಅಧಿಕಾರಕ್ಕಾಗಿ ಈ ಪಕ್ಷ ಕಟ್ಟಿಲ್ಲ, ಸೈದ್ಧಾಂತಿಕ ತಳಹದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಶಿವಮೊಗ್ಗ ವಿಭಾಗದ ಶಾರೀರಿಕ ಪ್ರಮುಖ ಪ್ರಕಾಶ ಹರಳಹಳ್ಳಿ ಹೇಳಿದರು. politics
ನಗರದ ಎಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶ ಮೊದಲು ಪಕ್ಷ ನಂತರ ಎನ್ನುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿ. ಈ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಉತ್ತಮ ನಾಯಕತ್ವ ಗುಣ ಬೆಳಸಿಕೊಳ್ಳಲು ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಪಕ್ಷದ ನೆಲೆಯೆ ಇಲ್ಲದ ಪಶ್ಚಿಮ ಬಂಗಾಳದಲ್ಲಿ ಸ್ವಂತ ಬಲದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರೆ ಅದು ಕಾರ್ಯಕರ್ತರ ಪರಿಶ್ರಮದ ಫಲ ಎನ್ನುವುದನ್ನು ನಾವು ಅರಿಯಬೇಕಿದೆ ಎಂದರು.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಪ್ರಪಂಚದ ಅತಿ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯ ಕಾರ್ಯಕರ್ತರು ಎನ್ನುವುದೇ ನಮಗೆ ಹೆಮ್ಮೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಪ್ರಾಸ್ತವಿಕ ಮಾತನಾಡಿ, ಪ್ರಶಿಕ್ಷಣ ವರ್ಗ ಪಕ್ಷ ಸಂಘಟನೆಗೆ ಪೂರಕ ಮತ್ತು ಕಾರ್ಯಕರ್ತರಲ್ಲಿ ಒಗ್ಗಟ್ಟು ಶಿಸ್ತು ಮೂಡಿಸಲು ಉತ್ತಮ ವೇದಿಕೆ ಎಂದರು.
ಪ್ರಶಿಕ್ಷಣದಲ್ಲಿ ಬಿಜೆಪಿ ಇತಿಹಾಸ-ವಿಕಾಸ, ಬೂತ್ ನಿರ್ವಹಣೆ, ಸಾಮಾಜಿಕ ಮತ್ತು ಮಾಧ್ಯಮ, ಕಾರ್ಯ ವಿಸ್ತರಣೆ ನಮ್ಮ ದೃಷ್ಟಿಕೋನ, ನಮ್ಮ ಸರ್ಕಾರಗಳ ಸಾಧನೆಗಳು, ನಮ್ಮ ಕಾರ್ಯ ಪದ್ಧತಿ ಹಾಗೂ ಸೈದ್ಧಾಂತಿಕ ಅಧಿಷ್ಠಾನ ಎನ್ನುವ ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು.
ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗರಾಜ್ ಹಿಂಡಸಘಟ್ಟ ಹಾಗೂ ನಗರಾಧ್ಯಕ್ಷ ಅಜಿತ್ ಸಾವಂತ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಐರಣಿ ಅಣ್ಣೇಶ್, ನಗರಸಭೆ ಮಾಜಿ ಸದಸ್ಯ ಅಟೋ ಹನುಮಂತಪ್ಪ, ಅಶ್ವಿನಿ ಕೃಷ್ಣಾ, ಪುರಸಭಾ ಸದಸ್ಯ ಸಿದ್ದೇಶ ಬೆಣ್ಣಿಹಳ್ಳಿ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಮಂಜಾನಾಯ್ಕ, ತುಳಜಪ್ಪ ಭೂತೆ, ಕೆ.ಎನ್. ಹಳ್ಳಿ ಮಹಾಂತೇಶ್, ವೀರೇಶ್ ಆದಾಪುರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net