ಕೆಪಿಎಸ್ ಆಗಲಿ ಮಾರುತಿ ಗ್ರಾಮಾಂತರ ಪ್ರೌಢಶಾಲೆ KPS

ಜಗಳೂರು ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಟಿ. ವೆಂಕಟೇಶ್, ಶರಣಪ್ಪ, ರಂಗಸ್ವಾಮಿ, ಕೆ. ಚಂದ್ರಪ್ಪ, ಎಂ.ಎನ್. ಬಸವರಾಜ್ ಇತರರಿದ್ದರು. KPS
ಜಗಳೂರು ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಟಿ. ವೆಂಕಟೇಶ್, ಶರಣಪ್ಪ, ರಂಗಸ್ವಾಮಿ, ಕೆ. ಚಂದ್ರಪ್ಪ, ಎಂ.ಎನ್. ಬಸವರಾಜ್ ಇತರರಿದ್ದರು. KPS
Published on

ಪ್ರಮುಖ ಮುಖ್ಯಾಂಶಗಳು

  • ಶಾಲಾ ಸುಧಾರಣಾ ಸಮಿತಿ ಕಾರ್ಯದರ್ಶಿ ಟಿ. ವೆಂಕಟೇಶ್ ಒತ್ತಾಯ
ಜಗಳೂರು: ತಾಲೂಕಿನ ಅಣಬೂರು ಜ್ಞಾನವಿಕಾಸ ವಿದ್ಯಾಸಂಸ್ಥೆಯ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆಯನ್ನು ಸರ್ಕಾರಿ ಕೆಪಿಎಸ್‌ಸಿ ಶಾಲೆಯನ್ನಾಗಿ ಪರಿವರ್ತಿಸಬೇಕು ಎಂದು ಶಾಲಾ ಸುಧಾರಣಾ ಸಮಿತಿ ಕಾರ್ಯದರ್ಶಿ ಟಿ. ವೆಂಕಟೇಶ್ ಒತ್ತಾಯಿಸಿದರು. KPS
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಲೆಗೆ ಗ್ರಾಮಸ್ಥರೇ ಉಚಿತವಾಗಿ ಜಾಗ ನೀಡಿದ್ದು, ಬೆಳವಣಿಗೆಗೆ ಶ್ರಮಿಸಿದ್ದರು. ಕಳೆದ ವರ್ಷ 130 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಈ ಬಾರಿ ದಾಖಲಾತಿ ಸಂಖ್ಯೆ 97ಕ್ಕೆ ಕುಸಿದಿದೆ.
ಶಾಲಾ ಆಡಳಿತ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಮುಖ್ಯಶಿಕ್ಷಕರನ್ನು ಶಾಲೆಯಿಂದ ಹೊರಗಿಡಲಾಗಿದೆ. ಸದ್ಯ ಶಾಲೆಯಲ್ಲಿ ಕೇವಲ ಒಬ್ಬರೇ ಶಿಕ್ಷಕರಿದ್ದಾರೆ. ತಕ್ಷಣವೇ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಬೇಕು ಮತ್ತು ಆಡಳಿತ ಮಂಡಳಿ ಸಮಿತಿಯನ್ನು ಹೊಸದಾಗಿ ರಚಿಸಬೇಕು ಎಂದು ಆಗ್ರಹಿಸಿದರು.
ಸರ್ವ ಸಮುದಾಯದವರಿಂದ ರಚನೆಯಾಗಿದ್ದ ಶಾಲಾ ಆಡಳಿತ ಮಂಡಳಿ, ಒಂದೇ ಕುಟುಂಬದ ಸದಸ್ಯರಿಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದರು.
ಬಿಇಒ ಮೌನ: ಶಾಲೆಯ ಮುಖ್ಯಶಿಕ್ಷಕ ಮತ್ತು ಸಹ ಶಿಕ್ಷಕರ ಸಂಬಳದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಗೌರವಧನ ನೀಡಲಾಗುತ್ತಿತ್ತು. ಕಳೆದ ವರ್ಷ ಉತ್ತಮ ಫಲಿತಾಂಶವೂ ಬಂದಿತ್ತು. ಆದರೆ ಇದೀಗ ಶಿಕ್ಷಕರಿಲ್ಲದೆ ಎರಡು ತಿಂಗಳಿಂದ ತರಗತಿಗಳು ನಡೆಯುತ್ತಿಲ್ಲ. ಈ ವಿಷಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಮೂರ್ತಿ ಅವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಎಲ್ಲ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಾಗುವುದು ಎಂದು ಎಸ್‌ಬಿಸಿ ಗೌರವಾಧ್ಯಕ್ಷ ಶರಣಪ್ಪ ಎಚ್ಚರಿಕೆ ನೀಡಿದರು.
ಎಸ್‌ಬಿಸಿ ಸದಸ್ಯ ರಂಗಸ್ವಾಮಿ ಮಾತನಾಡಿ, ಕಳೆದ ವರ್ಷ ಸಮಸ್ಯೆ ಉಲ್ಬಣಿಸಿದಾಗ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ದಿನವಿಡೀ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಶಾಸಕ ಬಿ. ದೇವೇಂದ್ರಪ್ಪ ಭೇಟಿ ನೀಡಿ ಪ್ರತಿಭಟನಾಕಾರರ ಪರ ನಿಂತಿದ್ದರು ಎಂದು ನೆನಪಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್‌ಬಿಸಿ ಅಧ್ಯಕ್ಷ ಕೆ. ಚಂದ್ರಪ್ಪ, ಸದಸ್ಯರಾದ ಎಂ.ಎನ್. ಬಸವರಾಜ್, ಕೆ. ಚನ್ನಪ್ಪ, ಎಸ್. ರಂಗಸ್ವಾಮಿ, ನಾಗೇಂದ್ರಪ್ಪ, ಎನ್.ಬಾಲಪ್ಪ, ಪಾಲಕರಾದ ರೂಪಾವತಿ, ಮಹಾಲಿಂಗಪ್ಪ, ರೂಪಾ, ಮಹೇಶ್, ರವಿಕುಮಾರ್, ಬಸವರಾಜ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net