ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿ

ದಾವಣಗೆರೆಯಲ್ಲಿ ಮಂಗಳವಾರ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಎಐಬಿಇಎ ಸದಸ್ಯರು ಪ್ರತಿಭಟನಾ ಮತಪ್ರದರ್ಶನ ನಡೆಸಿದರು. ಕೆ.ರಾಘವೇಂದ್ರ ನಾಯರಿ, ಕೆ.ವಿಶ್ವನಾಥ ಬಿಲ್ಲವ, ತಿಪ್ಪೇಸ್ವಾಮಿ, ಆಂಜನೇಯ, ವಿದ್ಯಾಸಾಗರ ಇದ್ದರು.
ದಾವಣಗೆರೆಯಲ್ಲಿ ಮಂಗಳವಾರ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಎಐಬಿಇಎ ಸದಸ್ಯರು ಪ್ರತಿಭಟನಾ ಮತಪ್ರದರ್ಶನ ನಡೆಸಿದರು. ಕೆ.ರಾಘವೇಂದ್ರ ನಾಯರಿ, ಕೆ.ವಿಶ್ವನಾಥ ಬಿಲ್ಲವ, ತಿಪ್ಪೇಸ್ವಾಮಿ, ಆಂಜನೇಯ, ವಿದ್ಯಾಸಾಗರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರ ಹಣಕ್ಕೆ ಭದ್ರತೆ
  • ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿ
  • ಅಗತ್ಯ ಪ್ರಮಾಣದ ನೇಮಕಾತಿ ಮಾಡಿ
ದಾವಣಗೆರೆ: ಸಾರ್ವಜನಿಕರ ಹಣಕ್ಕೆ ಭದ್ರತೆಯನ್ನು ನೀಡುವುದಕ್ಕಾಗಿ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಬೇಕು. ಅಗತ್ಯ ಪ್ರಮಾಣದ ನೇಮಕಾತಿ ಮಾಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಎಐಬಿಇಎ ಸದಸ್ಯರು ಮಂಗಳವಾರ ಮತಪ್ರದರ್ಶನ ನಡೆಸಿದರು.
ಕರ್ನಾಟಕ ಬ್ಯಾಂಕ್‌ನ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಮಾತನಾಡಿ, ಫೆಡರಲ್ ಬ್ಯಾಂಕಿನ ನೌಕರರ ಶೋಷಣೆಯನ್ನು ನಿಲ್ಲಿಸಬೇಕು. ಕೆಥೋಲಿಕ್ ಸಿರಿಯನ್ ಬ್ಯಾಂಕ್ ನೌಕರರ ವೇತನ ಪರಿಷ್ಕರಣೆ ಮಾಡಬೇಕು ಎಂದರು.
ಅದರಂತೆ ಖಾಸಗಿ ಬ್ಯಾಂಕ್‌ಗಳ ನಿವೃತ್ತ ನೌಕರರಿಗೆ ಸೌಲಭ್ಯಗಳನ್ನು ವಿಸ್ತರಿಸಬೇಕು. ನೈನಿತಾಲ್ ಬ್ಯಾಂಕ್ ಮಾರಾಟ ಮಾಡಬಾರದು. ತಮಿಳುನಾಡು ಮರ್ಕಂಟೈಲ್ ಬ್ಯಾಂಕಿನ ನೌಕರರ ನಿವೃತ್ತಿ ವಯಸ್ಸನ್ನು 60ಕ್ಕೆ ಹೆಚ್ಚಿಸಬೇಕು. ನೌಕರರಿಗೆ ಉದ್ಯೋಗ ಭದ್ರತೆ ಒದಗಿಸುವುದು ಸೇರಿ ಹಲವಾರು ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಎಐಬಿಇಎ ಸಂಯೋಜಿತ ಖಾಸಗಿ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿತ್ತು.
ಪ್ರತಿಭಟನೆಯಲ್ಲಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಖಜಾಂಚಿ ಕೆ.ವಿಶ್ವನಾಥ ಬಿಲ್ಲವ, ಕಾರ್ಯದರ್ಶಿ ಎಚ್.ಎಸ್.ತಿಪ್ಪೇಸ್ವಾಮಿ, ಆರ್.ಆಂಜನೇಯ, ಎಂ.ಡಿ.ವಿದ್ಯಾಸಾಗರ, ಆರ್.ಮಂಜಪ್ಪ, ಎಚ್.ಜೆ.ಆಶಾ, ರಾಜೇಶ್, ಕೆ.ಆರ್.ಹರ್ಷ, ಡಿ.ಹರ್ಷದ್, ಎಸ್.ಪ್ರಶಾಂತ್, ಸೈಯದ್ ಚಾಂದಬಾಷಾ, ಎಸ್.ಗಜೇಂದ್ರ, ಎಲ್.ಲತಾ, ಕೆ.ಎಚ್.ರೇಖಾ, ಎಚ್.ಎಸ್.ಶ್ರೀನಿಧಿ, ಪ್ರಸನ್ನ ಭಟ್, ಎಂ.ಕೆ.ನಾಗರಾಜ್ ಹಾಗೂ ನಿವೃತ್ತ ಬ್ಯಾಂಕ್ ನೌಕರರ ಸಂಘದ ಎಚ್.ಸುಗುರಪ್ಪ, ಕೆ.ಎಂ.ಮಹೇಶ್ವರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net