ಮಾಯಕೊಂಡದಲ್ಲಿ ಲೈನ್‌ಮನ್‌ಗಳಿಂದ ಜಾಗೃತಿ ಜಾಥಾ

ಮಾಯಕೊಂಡ ಗ್ರಾಮದಲ್ಲಿ ಗುರುವಾರ ಬೆಸ್ಕಾಂ ಅಧಿಕಾರಿಗಳು ಸೂರ್ಯ ಘರ್ ಬಿಜಿಲಿ ಯೋಜನೆ ಬಗ್ಗೆ ಜಾಗೃತಿ ಜಾಥಾ ನಡೆಸಿದರು. ಕೆ.ಎನ್. ತೀರ್ಥೇಶ್, ಚೇತನ್, ಮುಕುಂದ್, ನಟರಾಜ್ ಹಾಗೂ ಮಾರ್ಗದಾಳುಗಳಿದ್ದರು.
ಮಾಯಕೊಂಡ ಗ್ರಾಮದಲ್ಲಿ ಗುರುವಾರ ಬೆಸ್ಕಾಂ ಅಧಿಕಾರಿಗಳು ಸೂರ್ಯ ಘರ್ ಬಿಜಿಲಿ ಯೋಜನೆ ಬಗ್ಗೆ ಜಾಗೃತಿ ಜಾಥಾ ನಡೆಸಿದರು. ಕೆ.ಎನ್. ತೀರ್ಥೇಶ್, ಚೇತನ್, ಮುಕುಂದ್, ನಟರಾಜ್ ಹಾಗೂ ಮಾರ್ಗದಾಳುಗಳಿದ್ದರು.
Published on
ಮಾಯಕೊಂಡ: ಸೂರ್ಯ ಘರ್ ಬಿಜಿಲಿ ಯೋಜನೆಯಡಿಯಲ್ಲಿ ದೇಶದ ಜನರು ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್ ಘಟಕ ಸ್ಥಾಪಿಸುವ ಮೂಲಕ ಪರಿಸರ ಸ್ನೇಹಿ ವಿದ್ಯುತ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಸಹಾಯಧನದೊಂದಿಗೆ ಪಡೆಯಬೇಕು ಎಂದು ಬೆಸ್ಕಾಂ ಅಧಿಕಾರಿಗಳು ಗುರುವಾರ ಜಾಗೃತಿ ಜಾಥಾ ನಡೆಸಿದರು.
ದಾವಣಗೆರೆ ಬೆಸ್ಕಾಂ ಕಾರ್ಯಪಾಲನ ವಿಭಾಗಕ್ಕೆ ಸೇರಿದ ಮಾಯಕೊಂಡ, ಅತ್ತಿಗೆರೆ, ಆನಗೋಡು, ಅಣಜಿ ಬೆಸ್ಕಾಂ ಕಚೇರಿಗಳ ಶಾಖಾಧಿಕಾರಿಗಳು ಹಾಗೂ ಮಾರ್ಗದಾಳುಗಳು (ಲೈನ್‌ಮನ್‌ಗಳು) ಮಾಯಕೊಂಡ ಗ್ರಾಮದ ಮುಖ್ಯಬೀದಿಗಳಲ್ಲಿ ಯೋಜನೆಯ ನಾಮಫಲಕ ಹಿಡಿದು ಜಾಗೃತಿ ಮೂಡಿಸಿದರು.
ಈ ವೇಳೆ ಆನಗೋಡು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎನ್. ತೀರ್ಥೇಶ್ ಮಾತನಾಡಿ, 2024 ಜನವರಿ 22 ರಂದು ಜಾರಿಯಾದ ಈ ಯೋಜನೆಯ ಮೂಲಕ ಸಾರ್ವಜನಿಕರಿಗೆ ಸಹಾಯಧನ ನೀಡುವ ಮೂಲಕ ಸೋಲಾರ್ ವಿದ್ಯುತ್ ಘಟಕಗಳನ್ನು ಸ್ಥಾಪಿಸಿಕೊಳ್ಳಲು ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಇದು ವಿದ್ಯುತ್ ಬಿಲ್‌ನಲ್ಲಿ ಉಳಿತಾಯ ಮಾಡುವುದು ಮತ್ತು ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆ ಕಲ್ಪಿಸುವ ಉದ್ದೇಶ ಹೊಂದಿದೆ.ತಿಂಗಳಿಗೆ 100 ಯೂನಿಟ್ ವಿದ್ಯುತ್ ಉತ್ಪಾದಿಸುವ 1 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕದ ದರ 30 ರಿಂದ 80 ಸಾವಿರ ರೂ. ಇರುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ 30 ಸಾವಿರ ಸಹಾಯ ಧನ ನೀಡುತ್ತದೆ ಎಂದರು.
101 ರಿಂದ 200 ಯೂನಿಟ್ ವಿದ್ಯುತ್ ಉತ್ಪಾದಿಸುವ 2 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಫಲಕದ ದರ 1.20 ದಿಂದ 1.60 ಲಕ್ಷ ರೂ. ಇದರಲ್ಲಿ 60 ಸಾವಿರ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು.
201 ರಿಂದ 300 ಯೂನಿಟ್ ವಿದ್ಯುತ್ ಉತ್ಪಾದಿಸುವ 3 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಫಲಕದ ದರ 1.80 ಲಕ್ಷ ರೂ. ಆಗುತ್ತದೆ. 78 ಸಾವಿರ ಸಹಾಯಧನ ನೀಡಲಾಗುತ್ತದೆ ಎಂದರು. ಜಾಗೃತಿ ಜಾಥಾದಲ್ಲಿ ಶಾಖಾಧಿಕಾರಿಗಳಾದ ಚೇತನ್, ಮುಕುಂದ್, ನಟರಾಜ್ ಹಾಗೂ ಮಾರ್ಗದಾಳುಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net