ಜೀತಮುಕ್ತ ಸಮಾಜದ ಅರಿವು ಅಗತ್ಯ

ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಮಹಾವೀರ ಕರೆಣ್ಣವರ ಅವರನ್ನು ಗೌರವಿಸಲಾಯಿತು. ಷಣ್ಮುಖ ಕೆ, ಬಾಬಣ್ಣ, ಮಂಜೇಶ್, ಸೌಮ್ಯ, ಪ್ರೊ. ಗುರು ಎಂ.ಸಿ, ಪ್ರದೀಪ್ ಇದ್ದರು.
ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಮಹಾವೀರ ಕರೆಣ್ಣವರ ಅವರನ್ನು ಗೌರವಿಸಲಾಯಿತು. ಷಣ್ಮುಖ ಕೆ, ಬಾಬಣ್ಣ, ಮಂಜೇಶ್, ಸೌಮ್ಯ, ಪ್ರೊ. ಗುರು ಎಂ.ಸಿ, ಪ್ರದೀಪ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ಮಹಾವೀರ ಕರೆಣ್ಣವರ ಹೇಳಿಕೆ
  • ಕಾನೂನು ಅರಿವು-ನೆರವು ಕಾರ್ಯಕ್ರಮ
ದಾವಣಗೆರೆ : ಪದವಿ ಹಂತದ ವಿದ್ಯಾರ್ಥಿಗಳಿಗೆ ಜೀತಮುಕ್ತ ಸಮಾಜ ನಿರ್ಮಾಣದ ಅರಿವು ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣವರ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಮುಕ್ತಿ ಆಲೈಯನ್ಸ್ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಗರದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಜೀತ ಕಾರ್ಮಿಕ ಪದ್ಧತಿ ಹಾಗೂ ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿ ರದ್ದತಿ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯ ಮನುಷ್ಯನನ್ನು ಹಿಂಸಿಸುವುದು ಜೀತ. ಪ್ರಾಣಿಗಳನ್ನು ಕೂಡ ನಾವು ಜೀತಕ್ಕೆ ಇಟ್ಟುಕೊಳ್ಳುವಂತಿಲ್ಲ. ಕಾನೂನು ಪ್ರಕಾರ ಎಲ್ಲರೂ ಸಮಾನರು. ಈ ಕಾನೂನು ಜಾರಿಗೆ ಬಂದು 50 ವರ್ಷವಾದರೂ ಈಗಲೂ ಜೀತ ಜೀವಂತವಿದೆ. ನೀವು ಇರುವ ಜಾಗಗಳಲ್ಲಿ ಎಲ್ಲೇ ಬಾಲ ಕಾರ್ಮಿಕರು ಕಂಡು ಬಂದಲ್ಲಿ ಮಾಹಿತಿ ನೀಡುವುದು ನಿಮ್ಮ ಕರ್ತವ್ಯ. ನಮಗೆ ಗೊತ್ತಿಲ್ಲದೆ ನಾವು ಬಾಲ ಕಾರ್ಮಿಕರನ್ನು ದುಡಿಮೆಗೆ ತರುತ್ತಿದ್ದೇವೆ ಎಂದರು.
ಎ.ಐ.ಡಿ ಸಂಸ್ಥೆಯ ಅಧ್ಯಕ್ಷ ಬಾಬಣ್ಣ ಮಾತನಾಡಿ, ಜೀತ ಪದ್ಧತಿ ಅನುಸರಿಸಿದರೆ ಕನಿಷ್ಠ 3 ವರ್ಷ ಜೈಲು, 2000 ರೂ.ಗೂ ಹೆಚ್ಚು ದಂಡ ವಿಧಿಸಲಾಗುತ್ತದೆ ಎಂದರು.
ಮುಕ್ತ ಅಲೈಯನ್ಸ್ ಸಂಸ್ಥೆಯ ಸದಸ್ಯರಾದ ಮಂಜೇಶ್, ಸೌಮ್ಯ, ಕಾಲೇಜಿನ ಪ್ರಾಚಾರ್ಯ ಪ್ರೊ. ಗುರು ಎಂ.ಸಿ, ಬೆಂಗಳೂರಿನ ಶಾಂತಾ ಜೀವನ ಜ್ಯೋತಿ ಸಂಸ್ಥೆಯ ಸಂಯೋಜಕ ಪ್ರದೀಪ್ ಹಾಗೂ ಜೀತ ಪದ್ಧತಿಯಿಂದ ಮುಕ್ತರಾದ ಲಲಿತ ಮಾತನಾಡಿದರು. ಮಾನಸ ಪ್ರಾರ್ಥಿಸಿದರು, ಪ್ರೊ. ಅಣ್ಣೇಶ್ ಪಿ. ಕಾರ್ಯಕ್ರಮ ನಿರೂಪಿಸಿದರು, ಡಾ. ರೇಖಾ ಎಚ್.ಜಿ. ಸ್ವಾಗತಿಸಿದರು. ಪ್ರೊ. ಜಯಲಕ್ಷ್ಮಿ ಜೆ.ಪಿ ವಂದಿಸಿದರು.
"

ಜೀತ ಹಾಗೂ ಬಾಲ ಕಾರ್ಮಿಕ ರದ್ದತಿ ಕಾಯ್ದೆಗಳು ಜಾರಿಯಾಗಿ 50 ವರ್ಷಗಳಾಗುತ್ತಾ ಬಂದರೂ ಈಗಲೂ ಅವುಗಳು ಜಾರಿಯಲ್ಲಿರುವುದು ದುರದೃಷ್ಟಕರ. ಕಡಿಮೆ ಕೂಲಿಗೆ ಹೆಚ್ಚು ಸಮಯ ದುಡಿಸಿಕೊಂಡು ದೈಹಿಕ, ಮಾನಸಿಕ ಹಿಂಸೆ ಕೊಡುವುದು ಕಾನೂನು ರೀತಿಯ ಅಪರಾಧವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net