ಇದೇ ವೇಳೆ ಅಂತರ್ಜಲ ಸಂಶೋಧಕ ಕಂಕನಹಳ್ಳಿ ಕೆ.ಜಿ. ಚಂದ್ರಶೇಖರಪ್ಪ, ವಿನಾಯಕ ಬಳಗದ ಯುವಕರು, ವೀರಗಾಸೆ ಮತ್ತು ಲಲಿತಾ ಸಹಸ್ರ ನಾಮಾವಳಿ ತಂಡದವರನ್ನು ಸನ್ಮಾನಿಸಲಾಯಿತು. ದೇಗುಲ ಟ್ರಸ್ಟ್‌ನ ಸಹ ಕಾರ್ಯದರ್ಶಿ ಹೊಸಮನೆ ಕುಂಬಾರ ಮಲ್ಲಿಕಾರ್ಜುನ, ಕಾರ್ಯದರ್ಶಿ ಎಚ್.ಕೆ. ಚನ್ನೇಶಪ್ಪ, ವಾಗೀಶ್ ನುಚ್ಚಿನ್, ಉಪನ್ಯಾಸಕ ಪ್ರವೀಣಕುಮಾರ್ ಮಾತನಾಡಿದರು. ಧರ್ಮ ಸಭೆ ನಂತರ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ಖಜಾಂಚಿ ಎನ್.ಎಂ. ಮಲ್ಲೇಶಪ್ಪ, ಚೀಲೂರು ಪುಟ್ಟಪ್ಪ, ಮಲ್ಲಿಕಾರ್ಜುನಪ್ಪ ಜಿನಕೇರಿ, ಚನ್ನಬಸಪ್ಪ, ಸಿದ್ದಪ್ಪ, ರೇಣುಕಪ್ಪ, ಕರಿಬಸಪ್ಪ ಇತರರು ಇದ್ದರು.