ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ನೆರವು

ಚನ್ನಗಿರಿ ತುಮ್‌ಕೋಸ್ ಸಂಸ್ಥೆಗೆ ಬುಧವಾರ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಡಾ. ಉದಯ್ ಜೋಶಿ ಭೇಟಿ ನೀಡಿದರು. ಪ್ರಭುದೇವ್, ಮಂಜುನಾಥ್, ಪ್ರಸನ್ನಕುಮಾರ್, ಎಚ್.ಎಂ. ಶಿವಕುಮಾರ್, ಟಿ.ವಿ.ರಾಜು, ಗಂಗಾಧರಪ್ಪ, ಜಿ.ಇ. ವಿಜಯಕುಮಾರ್ ಇತರರಿದ್ದರು.Sahakari Bharati
ಚನ್ನಗಿರಿ ತುಮ್‌ಕೋಸ್ ಸಂಸ್ಥೆಗೆ ಬುಧವಾರ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಡಾ. ಉದಯ್ ಜೋಶಿ ಭೇಟಿ ನೀಡಿದರು. ಪ್ರಭುದೇವ್, ಮಂಜುನಾಥ್, ಪ್ರಸನ್ನಕುಮಾರ್, ಎಚ್.ಎಂ. ಶಿವಕುಮಾರ್, ಟಿ.ವಿ.ರಾಜು, ಗಂಗಾಧರಪ್ಪ, ಜಿ.ಇ. ವಿಜಯಕುಮಾರ್ ಇತರರಿದ್ದರು.Sahakari Bharati
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಅಧ್ಯಕ್ಷ ಡಾ.ಉದಯ್ ಜೋಶಿ ಹೇಳಿಕೆ Sahakari Bharati
  • ತುಮ್‌ಕೋಸ್ ಸಂಸ್ಥೆಗೆ ಭೇಟಿ
  • ಕಾರ್ಯಕರ್ತರ ಕರ್ತವ್ಯ ನಿರ್ವಹಣೆ ಪರಿಶೀಲನೆ
ಚನ್ನಗಿರಿ: ಸಹಕಾರ ಭಾರತಿ ಒಂದು ಅಗ್ರಗಣ್ಯ ಸಹಕಾರಿ ಸಂಸ್ಥೆ ಯಾಗಿದ್ದು, ದೇಶದಾದ್ಯಂತ ಸಹಕಾರ ಚಳವಳಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಡಾ.ಉದಯ್ ಜೋಶಿ ತಿಳಿಸಿದರು.
ಇಲ್ಲಿನ ತುಮ್‌ಕೋಸ್ ಸಂಸ್ಥೆಗೆ ಗುರುವಾರ ಭೇಟಿ ನೀಡಿ ಮಾತನಾಡಿ, ಸಹಕಾರ ಭಾರತಿ ಸಹಕಾರದ ಮೂಲಕ ಸಮಾಜದ ಸರ್ವಾಂಗೀಣ ವಿಕಾಸ ಸಾಧಿಸುವಲ್ಲಿ ಬದ್ಧವಾಗಿ ನಿಂತಿದೆ. ಅಲ್ಲದೇ ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವುದು ಮತ್ತು ಎಲ್ಲ ಸದಸ್ಯರ ಹಿತಾಸಕ್ತಿಯನ್ನು ಕಾಪಾಡುವುದು ಈ ಸಂಸ್ಥೆಯ ಧ್ಯೇಯವಾಗಿದೆ ಎಂದರು.
ಜತೆಗೆ ಸಹಕಾರಿ ಕ್ಷೇತ್ರದ ಶುದ್ಧೀಕರಣ, ವೃದ್ಧೀಕರಣ ಹಾಗೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿವಿಧ ಯೋಜನೆಗಳನ್ನು ಕೈಗೊಳ್ಳುತ್ತದೆ. ಕೃಷಿ, ಉದ್ಯಮ, ಗೃಹ ನಿರ್ಮಾಣ, ವಿಮೆ, ಕೈಮಗ್ಗ ಮತ್ತು ಹಿತರಕ್ಷಣಾ ಸಹಕಾರಿ ಸಂಘಟನೆಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.
ದೇಶದಲ್ಲಿ ಸಹಕಾರಿ ಸಂಘಟನೆಯನ್ನು ರಚನೆ ಮಾಡಲಾಗುತ್ತಿದ್ದು, ಇದು ಸಮೃದ್ಧವಾಗಿ ಬೆಳೆದಿದೆ ಮತ್ತು 600 ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಸರ್ಕಾರದ ಮುಂದಿಡುವ ಕಾರ್ಯ ಮಾಡುತ್ತಿದೆ. ಬೆಂಗಳೂರಿನಿಂದ ತುಮಕೂರು, ಚಿತ್ರದುರ್ಗ, ಚನ್ನಗಿರಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಭೇಟಿ ನೀಡಿ ಸಹಕಾರಿ ಕ್ಷೇತ್ರ ಕಾರ್ಯಕರ್ತರ ಕರ್ತವ್ಯಗಳ ನಿರ್ವಹಣೆಯನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದರು.
ಅಡಕೆಯನ್ನು ಎಲ್ಲ ಕಡೆ ಬೆಳೆಯಲಾಗುತ್ತಿದೆ. ನಾನು ಕೂಡ ಅಡಕೆ ವ್ಯಾಪಾರಿಯಾಗಿದ್ದೇನೆ. ಇದನ್ನು ಪುರಾತನ ಕಾಲದಿಂದ ಜನರು ಬಳಕೆ ಮಾಡುತ್ತಿದ್ದಾರೆ. ಇದರ ಸೇವನೆಯಿಂದ ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ. ಆದರೆ ಅಡಕೆ ಜತೆ ತಂಬಾಕು ಸೇವನೆ ಮಾಡಿದಾಗ ಮಾತ್ರ ಮನುಷ್ಯನ ಆರೋಗ್ಯಕ್ಕೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಸಹಕಾರಿ ರಾಜ್ಯಾಧ್ಯಕ್ಷ ಪ್ರಭುದೇವ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಪ್ರಸನ್ನಕುಮಾರ್, ತುಮ್‌ಕೋಸ್ ಅಧ್ಯಕ್ಷ ಎಚ್.ಎಂ. ಶಿವಕುಮಾರ್, ಟಿ.ವಿ.ರಾಜು, ಗಂಗಾಧರಪ್ಪ, ಜಿ.ಇ. ವಿಜಯಕುಮಾರ್, ಎಂ. ಮಂಜುನಾಥ್, ಎಂ.ಇ. ಮೀನಾಕ್ಷಿ, ಶೋಭಾ ಲಿಂಗದಳ್ಳಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net