ದಾವಣಗೆರೆ: ಸಂವಿಧಾನದ ಅಪಚಾರ ಮಾಡುವವರ ವಿರುದ್ಧ ಪ್ರತಿಭಟಿಸುವ ಮನೋಭಾವ ರೂಢಿಸಿಕೊಂಡಾಗ ಸಾಂಸೃತಿಕ ಬಹುತ್ವ ಮತ್ತು ಸಂವಿಧಾನ ರಕ್ಷಣೆ ಸಾಧ್ಯವಿದೆ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ,‘ತಲ್ಲಣಿಸದಿರು ಮನವೇ’ ಚಿಂತನಾ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹಿಂದು ರಾಷ್ಟ್ರ ಸ್ಥಾಪಿಸುವ ಬಗ್ಗೆ ಮಾತಾಡುವವರು ಹಿಂದು ಪದದ ಉತ್ಪತ್ತಿ ಪುರಾಣ ಅಥವಾ ಭಗವದ್ಗೀತೆಯಿಂದ ಬಂದಿದೆಯೇ ಎಂಬುದನ್ನು ಸ್ಪಷ್ಟಪಡಿಸಲಿ. ಜಾತಿ ಶ್ರೇಷ್ಠತೆಯ ಮನುಧರ್ಮಶಾಸ್ತ್ರದ ಕಸ ಇಂದು ಉಪನ್ಯಾಸಕ ವರ್ಗದಿಂದ ಹಿಡಿದು ನ್ಯಾಯಾಧೀಶರ ತಲೆಯಲ್ಲೂ ಬೇರೂರಿದೆ.