ಸಮಾಜಕ್ಕೆ ಉದ್ಯೋಗ ನೀಡುವ ಶಕ್ತಿಯಾಗಿ

 ದಾವಣಗೆರೆಯ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಡಾ. ಜಿ.ಎಂ. ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಜಿ.ಎಂ. ಲಿಂಗರಾಜು, ಡಾ. ಎಸ್.ಆರ್. ಶಂಕಪಾಲ್, ಡಾ. ದಿವಾನಂದ್ ಕೆ, ಡಾ. ಸುನೀಲ್ ಕುಮಾರ್ ಬಿ.ಎಸ್ ಇತರರು ಇದ್ದರು.
ದಾವಣಗೆರೆಯ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಡಾ. ಜಿ.ಎಂ. ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಜಿ.ಎಂ. ಲಿಂಗರಾಜು, ಡಾ. ಎಸ್.ಆರ್. ಶಂಕಪಾಲ್, ಡಾ. ದಿವಾನಂದ್ ಕೆ, ಡಾ. ಸುನೀಲ್ ಕುಮಾರ್ ಬಿ.ಎಸ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರದ ಮಾಜಿ ಸಚಿವ ಸಿದ್ದೇಶ್ವರ ಹೇಳಿಕೆ
  • ಜಿಎಂಐಟಿಯಲ್ಲಿ ಪದವಿ ಪ್ರದಾನ ಸಮಾರಂಭ
ದಾವಣಗೆರೆ : ವಿದ್ಯಾರ್ಥಿಗಳು ಕೇವಲ ಉದ್ಯೋಗಾಕಾಂಕ್ಷಿಗಳಾಗದೆ ಸಮಾಜಕ್ಕೆ ಉದ್ಯೋಗ ನೀಡುವ ಶಕ್ತಿಯಾಗಿ ಬೆಳೆಯಬೇಕು ಎಂದು ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಬೆಳ್ಳಿ ಹಬ್ಬದ ಅಂಗವಾಗಿ ಸಂಸ್ಥೆಯ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ, 21ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಕ್ಯಾಂಪಸ್ ಆಯ್ಕೆ ಮೂಲಕ ಉದ್ಯೋಗ ಪಡೆಯುವುದು ಒಂದು ಸಾಧನೆಯಾದರೂ, ವಿದ್ಯಾರ್ಥಿಗಳು ಸ್ವಂತ ಕಾಲ ಮೇಲೆ ನಿಂತು ಹತ್ತಾರು ಜನಕ್ಕೆ ಕೆಲಸ ನೀಡುವಂತಾಗಬೇಕು. ಆಗ ಮಾತ್ರ ಅವರು ಕಲಿತ ಶಿಕ್ಷಣಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರದ ಸ್ಟಾರ್ಟಪ್ ಯೋಜನೆಗಳು ಮತ್ತು ಬ್ಯಾಂಕ್‌ಗಳು ನೀಡುವ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಸ್ವಂತ ಉದ್ಯಮ ಸ್ಥಾಪಿಸುವ ಮೂಲಕ ದೇಶದ ಆರ್ಥಿಕತೆಗೆ ಕೊಡುಗೆ ನೀಡುವಂತೆ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಜಿಎಂಐಟಿ ಮತ್ತು ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೆಸರಾಂತ ಕಂಪನಿಗಳಲ್ಲಿ ಉತ್ತಮ ವೇತನದೊಂದಿಗೆ ಉದ್ಯೋಗ ಪಡೆಯುತ್ತಿರುವುದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಪ್ರಾಚಾರ್ಯ ಡಾ. ಸಂಜಯ್ ಪಾಂಡೆ ಪ್ರಮಾಣವಚನ ಬೋಧಿಸಿದರು. ಗಾಯತ್ರಿ ಸಿದ್ದೇಶ್ವರ, ಜಿಎಂ ಯೂನಿವರ್ಸಿಟಿ ಕುಲಾಧಿಪತಿ ಜಿ.ಎಂ. ಲಿಂಗರಾಜು, ಆಡಳಿತ ಮಂಡಳಿಯ ಸದಸ್ಯರಾದ ಡಾ. ದಿವಾನಂದ್ ಕೆ, ಜಿಎಂಯು ಕುಲಸಚಿವ ಡಾ. ಸುನೀಲ್ ಕುಮಾರ್ ಬಿ.ಎಸ್ ಇದ್ದರು.
ಡಾ. ಪ್ರವೀಣ್ ಜೆ ಸ್ವಾಗತಿಸಿದರು. ಡಾ. ಆಶಾ ಕೆ. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಗಣೇಶ್ ಜಿ. ಟಿಲ್ವೆ ಮತ್ತು ಅನುಷಾ ಎನ್.ಎಲ್ ನಿರೂಪಿಸಿದರು.
ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಶ್ರೀಶೈಲ ಪಿ. ವಿಜಯಪುರ, ಡಾ. ನೀಲಾಂಬಿಕೆ ಎಸ್, ಡಾ. ಪ್ರಕಾಶ್ ಕೆ.ಕೆ, ಡಾ. ಶ್ರೀನಿವಾಸ್ ಸಿ.ವಿ, ಡಾ. ವೈ.ಬಿ. ಭರತ್ ರಾಜ್ ಇಟಗಿ, ಡಾ. ಆಶಾ ಕೆ, ಡಾ. ಶಿವನಗೌಡ ಜಿ.ಎಂ, ಡಾ. ಮರುಳಸಿದ್ದಪ್ಪ ಎಚ್.ಬಿ, ಡಾ. ರಾಜಶೇಖರ್ ಸೋಮಸಾಗರ, ಡಾ. ಪ್ರವೀಣ್ ಜೆ. ಪದವಿ ಪ್ರದಾನದ ತಮ್ಮ ವಿಭಾಗಗಳ ವಿದ್ಯಾರ್ಥಿಗಳ ವಿವರಣೆ ನೀಡಿದರು.
ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ
ಇಂಜಿನಿಯರಿಂಗ್ ಕ್ಷೇತ್ರವು ಕೇವಲ ಸಮೀಕರಣಗಳನ್ನು ಬಿಡಿಸುವುದಲ್ಲ, ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳುವುದಾಗಿದೆ ಎಂದು, ಪದವಿ ಪ್ರದಾನ ಭಾಷಣ ಮಾಡಿದ ಜಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಹೇಳಿದರು.
ಕೃತಕ ಬುದ್ಧಿಮತ್ತೆ ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ, ಬದಲಾಗಿ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಮನುಷ್ಯನನ್ನು ಹೆಚ್ಚು ಸೃಜನಶೀಲನನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮತ್ತು ಕೃಷಿ ಇಳುವರಿಯನ್ನು ಹೆಚ್ಚಿಸಲು ಡ್ರೋನ್ ಹಾಗೂ ರೋಬೋಟಿಕ್ಸ್‌ನಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net