ಆರ್ಟ್ ಪಾರ್ಕ್ ಕಲಾವಿದರ ಭೇಟಿ ಭಾನುವಾರ

ದಾವಣಗೆರೆಯ ದೃಶ್ಯಕಲಾ ಕಾಲೇಜಿನ ಹಿರಿಯ ಬೋಧಕ ದತ್ತಾತ್ರೇಯ ಭಟ್ ಸುದ್ದಿಗೋಷ್ಠಿಯಲ್ಲಿ ಕಲಾವಿದರ ಭೇಟಿ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಡಿ.ಎಂ. ಪ್ರದೀಪ್‌ಕುಮಾರ್,  ಹರೀಶ್ ಮಾಳಪ್ಪನವರ್, ಸಂತೋಷ್ ಕುಮಾರ್ ಕುಲಕರ್ಣಿ, ಕೆ.ವಿ.ಪ್ರಮೋದ್ ಇತರರಿದ್ದರು.
ದಾವಣಗೆರೆಯ ದೃಶ್ಯಕಲಾ ಕಾಲೇಜಿನ ಹಿರಿಯ ಬೋಧಕ ದತ್ತಾತ್ರೇಯ ಭಟ್ ಸುದ್ದಿಗೋಷ್ಠಿಯಲ್ಲಿ ಕಲಾವಿದರ ಭೇಟಿ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಡಿ.ಎಂ. ಪ್ರದೀಪ್‌ಕುಮಾರ್, ಹರೀಶ್ ಮಾಳಪ್ಪನವರ್, ಸಂತೋಷ್ ಕುಮಾರ್ ಕುಲಕರ್ಣಿ, ಕೆ.ವಿ.ಪ್ರಮೋದ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ 45 ಚಿತ್ರಕಲಾ ದಿಗ್ಗಜರ ಸಂಗಮ
  • ಕಡಿಮೆ ದರದಲ್ಲಿ ಜನರಿಗೆ ಸಿಗಲಿವೆ ಕಲಾಕೃತಿಗಳು
  • 18ರಂದು ಚಿತ್ರಕಲಾ ಪ್ರಾತ್ಯಕ್ಷಿಕೆ, ಸಂವಾದ
ದಾವಣಗೆರೆ: ಕಲಾವಿದರು ಮತ್ತು ಸಾರ್ವಜನಿಕರ ನಡುವೆ ಬಾಂಧವ್ಯ ಬೆಸೆಯುವ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಕಲಾಗಂಗೋತ್ರಿ ಆವರಣದಲ್ಲಿ ಮೇ.17ರಂದು ಆರ್ಟ್ ಪಾರ್ಕ್ ಕಲಾವಿದರ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಹಿರಿಯ ಬೋಧಕ ದತ್ತಾತ್ರೇಯ ಭಟ್ ತಿಳಿಸಿದರು.
ಅಂದು ಬೆಳಗ್ಗೆ 11ರಿಂದ ಸಂಜೆ 5ರ ವರೆಗೆ 45ಕ್ಕೂ ಹೆಚ್ಚು ಕಲಾವಿದರು ಕಲಾ ರಚನೆ ಮಾಡುವರು. ಸಾರ್ವಜನಿಕರು ಅವರೊಂದಿಗೆ ಸಂವಾದದ ಮೂಲಕ ಕಲೆಯ ಎಲ್ಲ ಮಾಹಿತಿ ಪಡೆಯಬಹುದು. ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಇದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಲಾಕೃತಿಗಳ ಮಾಹಿತಿ, ಅತಿ ಕಡಿಮೆ ದರದಲ್ಲಿ ಕಲಾಕೃತಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಆರ್ಟ್ ಪಾರ್ಕ್ ಕೆಲಸ ಮಾಡಲಿದೆ. ಬೆಂಗಳೂರು, ಮೈಸೂರು ಒಳಗೊಂಡಂತೆ ವಿವಿಧೆಡೆ ಇದುವರೆಗೆ ನಡೆಸಲಾಗಿದೆ. ಮಧ್ಯಕರ್ನಾಟಕದಲ್ಲಿ ಇದು 93ನೇ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಪೂರ್ವವಲಯ ಐಜಿಪಿ ಡಾ. ಬಿ.ಆರ್.ರವಿಕಾಂತೇಗೌಡ, ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಹರಿಹರ ಕುಮಾರಪಟ್ಟಣಂ ಗ್ರಾಸಿಂ ಅಧ್ಯಕ್ಷ ಡಾ. ಲಿಪಿ ಮೊಹಾಂತಿ, ಕಾಲೇಜಿನ ಪ್ರಾಚಾರ್ಯ ಡಾ. ಸತೀಶಕುಮಾರ್ ಪಿ. ವಲ್ಲೇಪುರೆ, ಡಿ.ಎಂ.ಪ್ರದೀಪ್‌ಕುಮಾರ್, ಹರೀಶ್ ಮಾಳಪ್ಪನವರ್, ಆರ್ಟ್ ಪಾರ್ಕ್‌ನ ಸ್ಥಾಪಕ ಎಸ್.ಜಿ.ವಾಸುದೇವ್, ಅಧ್ಯಕ್ಷೆ ಭಾಗ್ಯಾ ಅಜಯ್‌ಕುಮಾರ್ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಎ.ಎಂ.ಪ್ರಕಾಶ್, ಯು. ಅಶೋಕ್, ಬಿ.ಜಿ.ಗುಜ್ಜಾರಪ್ಪ, ಬಾಬು ಜತ್ತಕರ್, ಚಿ.ಸು.ಕೃಷ್ಣಸೆಟ್ಟಿ, ಗಣಪತಿ ಅಗ್ನಿಹೋತ್ರಿ, ಗಣೇಶ್ ಸಾಬೋಜಿ, ಗಾಯತ್ರಿ ದೇಸಾಯಿ, ಹರೀಶ್, ಕರಿಯಪ್ಪ ಹಂಚಿನಮನಿ, ಕಿರಣ್ ಶೇರಖಾನೆ, ಕೆ.ವಿ.ಕಾಳೆ, ಕುಮಾರ ಕಾಟೇನಹಳ್ಳಿ, ಮಧು ದೇಸಾಯಿ, ಕೆ.ಕೆ.ಕಾಳೆ, ಮಂಜುಳಾ, ಮೀನಾಕ್ಷಿ ಚಿನ್ನ ರಾಥೋಡ್, ಓಂಕಾರ ಮೂರ್ತಿ, ರವೀಂದ್ರ ಅರಳಗುಪ್ಪಿ, ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ. ರಮೇಶ್ ಸೇರಿ ಒಟ್ಟು 45 ಕಲಾವಿದರು ಭಾಗವಹಿಸುವರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ 8 ಜನರು, ಅತ್ಯುನ್ನತ ವೆಂಕಟಪ್ಪ ಪ್ರಶಸ್ತಿ ಪಡೆದ 6 ಕಲಾವಿದರು ಭಾಗವಹಿಸುತ್ತಿದ್ದಾರೆ. ಎಲ್ಲರೂ ತಾವು ರಚಿಸಿದ ಕಲಾಕೃತಿಗನ್ನು ದೃಶ್ಯಕಲಾ ಮಹಾವಿದ್ಯಾಲಯಕ್ಕೆ ಉಡುಗೊರೆಯಾಗಿ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಮೇ.18 ರ ಬೆಳಗ್ಗೆ 11ಕ್ಕೆ ಕಲಾ ಪ್ರಾತ್ಯಕ್ಷಿಕೆ ಮತ್ತು ಸಂವಾದದಲ್ಲಿ ಖ್ಯಾತ ಕಲಾವಿದ ಎಸ್.ಜಿ. ವಾಸುದೇವ್ ವಿಶೇಷ ಉಪನ್ಯಾಸ ಮತ್ತು ಕಲಾ ಪ್ರಾತ್ಯಕ್ಷಿಕೆ ನಡೆಸಿಕೊಡುವರು. ಡಾ. ಸತೀಶ್‌ಕುಮಾರ್ ಪಿ. ವಲ್ಲೇಪುರೆ, ಜಿ.ವಿ. ಲಕ್ಷ್ಮಣರಾವ್, ಡಾ.ಜೈರಾಜ ಎಂ. ಚಿಕ್ಕಪಾಟೀಲ, ಜಿ.ಬಿ. ಓಂಕಾರಮೂರ್ತಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬೋಧಕರಾದ ಡಿ.ಎಂ. ಪ್ರದೀಪ್‌ಕುಮಾರ್, ಹರೀಶ್ ಮಾಳಪ್ಪನವರ್, ಸಂತೋಷ್ ಕುಮಾರ್ ಕುಲಕರ್ಣಿ, ಕೆ.ವಿ.ಪ್ರಮೋದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net